ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಚಿರು ಅವರು ಸತ್ತಾಗ 6 ತಿಂಗಳ ಪ್ರಗ್ನೆಂಟ್ ಆಗಿದ್ದರು. ಮೇಘನಾ ರಾಜ್ ಅವರಿಗೆ ಜೂನಿಯರ್ ಚಿರು ಹುಟ್ಟಿದ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದರು. ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹುಟ್ಟುವ ಮಗುವಿಗೆ ಹಾರೈಸಿದ್ದರು. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿತ್ತು. ಅಕ್ಟೋಬರ್ 22 2020ರಂದು ಬೆಳಿಗ್ಗೆ 11.07ರ ಹೊತ್ತಿಗೆ ಜೂನಿಯರ್ ಚಿರು ಅವರು ಭೂಮಿಗೆ ಕಾಲಿಟ್ಟಿದ್ದಾರೆ.ಇದರಿಂದ ಎಲ್ಲರೂ ಬಹಳ ಸಂತೋಷವಾಗಿದ್ದಾರೆ.
ನಟ ಅರ್ಜುನ್ ಸರ್ಜಾ ಸಹ ಸಂಭ್ರಮಿಸುತ್ತಿದ್ದಾರೆ. “ಮರಳು ಗಾಡಿನ ಕುಟುಂಬಕ್ಕೆ ದೊಡ್ಡ ಸಂಭ್ರಮ ಸಿಕ್ಕಿದೆ. ಮಗು ನೋಡಿದರೆ ಚಿರು ಸರ್ಜಾ ನೆನಪಾಗುತ್ತಾನೆ. 36 ವರ್ಷದ ಹಿಂದೆ ಕೂಡ ಚಿರು ಹುಟ್ಟಿದಾಗ ನಾನು ಚೆನ್ನೈ ನಲ್ಲಿದ್ದೆ. ಸುದ್ದಿ ಕೇಳಿ ಓಡಿ ಬಂದಿದ್ದೆ” ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಜೂನಿಯರ್ ಚಿರು ಹುಟ್ಟಿದ ತಕ್ಷಣ ಚಿರು ಫೋಟೋಕ್ಕೆ ಮಗುವನ್ನು ಹಿಡಿದು ಚಿರು ಅವರೇ ಹುಟ್ಟಿ ಬಂದಿದ್ದಾರೆ ಎಂದು ಹೇಳಲಾಗಿದೆ.ಚಿರು ಸತ್ತ 135 ದಿನಗಳಲ್ಲಿ ಜೂನಿಯರ್ ಚಿರು ಅವರ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 22ನೇ ತಾರೀಖು 2017ರಂದು ಚಿರು ಮತ್ತು ಮೇಘನಾ ಅವರ ನಿಶ್ಚಿತಾರ್ಥ ಆಗಿತ್ತು. ವಿಚಿತ್ರವೆಂದರೆ ಅದೇ 22ನೇ ತಾರೀಖು 2020ರಂದು ಮೇಘನಾ ರಾಜ್ ಅವರಿಗೆ ಮಗು ಆಗಿದೆ. ಚಿರು ಅವರ ಪುತ್ರ ಚಿರು ಅವರಂತೆಯೇ ಇದ್ದಾರೆ ಎಂದು ನೋಡಿದವರು ಹೇಳುತ್ತಾರೆ. ಧ್ರುವ ಸರ್ಜಾ ಅವರು ಬಹಳ ಸಂತೋಷದಿಂದ ಇದ್ದಾರೆ. ಹಾಗೆಯೇ ಇವರು ಜೂನಿಯರ್ ಚಿರು ಅವರಿಗೆ ಬೆಳ್ಳಿಯ ತೊಟ್ಟಿಲು ಮಾಡಿಸಿದ್ದಾರೆ. ಇವೆಲ್ಲ ಖುಷಿಯ ನಡುವೆ ಚಿರು ಅವರು ಇಲ್ಲ ಎನ್ನುವುದೇ ನೋವಾಗಿದೆ.ಇದು ಯಾವಾಗಲೂ ಕಾಡುತ್ತಿರುತ್ತದೆ.