ಚಿರು ಮಗುವಿಗೆ ಸೋದರಮಾವ ಕೊಟ್ರು ಸ್ಪೆಷಲ್ ಉಡುಗೊರೆ

0 0

ಕಳೆದ ನಾಲ್ಕು ತಿಂಗಳುಗಳಿಂದ ಚಿರು ಅವರ ಮರಣದಿಂದಾಗಿ ಬರೀ ನೋವುಗಳನ್ನೆ ನೋಡಿಕೊಂಡು ಒತ್ತಡದಲ್ಲಿದ್ದ ಕುಟುಂಬ ಈಗ ಜೂನಿಯರ್ ಚಿರುವಿನ ಆಗಮನದಿಂದಾಗಿ ಸಂತೋಷದ ಕಡಲಲ್ಲಿ ತೆಲಾಡುತ್ತಿದೆ. ಈ ಕಾರಣಕ್ಕಾಗಿ ಸರ್ಜಾ ಅವರ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ಈಗ ಹಬ್ಬದ ವಾತಾವರಣ ಎಂದರೆ ಅದು ತಪ್ಪೇನಿಸದು. ಮಗು ಹುಟ್ಟಿದ ಕೂಡಲೇ ಅನೇಕ ಕುಟುಂಬ ಸದಸ್ಯರು ಕೂಡ ಇದೆ ಮಾತನ್ನು ಆಡಿದ್ದಾರೆ. ಇದೀಗ ಸಂಭ್ರಮದ ಮನೆಗೆ ಅನೇಕ ಜನರು ಮೇಘನಾ ಕುಟುಂಬಕ್ಕೆ ಶುಭ ಹಾರೈಸುತ್ತಾಇದ್ದಾರೆ. ಇದೇ ಸಂದರ್ಭದಲ್ಲಿ ಮೇಘನಾ ಅವರ ಅಣ್ಣಾ ತೇಜ್ ಅವರು ಮೇಘನಾ ಹಾಗೂ ಚಿರು ಅವರ ಪುಟ್ಟ ಕಂದನಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಈ ಸುದ್ಧಿ ಬಹಳಷ್ಟು ಸುದ್ಧಿ ಆಗಿದೆ. ಮೇಘನಾ ಅವರ ಅಣ್ಣಾ ಅವರಿಗೆ ಕೊಟ್ಟ ಉಡುಗೊರೆ ಏನೂ ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಿನ್ನೆ ಅಷ್ಟೇ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಮೇಘನಾ ಅವರಿಗೆ ಸಾಕಷ್ಟು ಜನರು ಶುಭಕೋರಿದ್ದಾರೆ. ಇವುಗಳ ನಡುವೆ ಮೇಘನಾ ಅವರ ಚಿಕ್ಕಮ್ಮನ ಮಗ ತೇಜ್ ಕೂಡ ಮೇಘನಾ ಅವರಿಗೆ ಶುಭಕೋರುವ ಮೂಲಕ ವಿಭಿನ್ನ ರೀತಿಯಲ್ಲಿ ಜೂನಿಯರ್ ಚಿರು ಆಗಮನದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಮೇಘನಾ ಅವರ ಹೆರಿಗೆ ಬಗ್ಗೆ ಮಾತನಾಡಿದ ಸೋದರಮಾವ ತೇಜ್, ಮೇಘನಾ ತನ್ನ ತಂಗಿ ಎಂದು ಹೇಳಲು ಹೆಮ್ಮೆಯಾಗುತ್ತದೆ. ಮಗು ಸಂಪೂರ್ಣವಾಗಿ ಚಿರು ರೀತಿಯೇ ಇದ್ದು, ಕಣ್ಣು ಕೂದಲು ಮೂಗು ಎಲ್ಲವೂ ಚಿರುವಿನ ಪ್ರತಿರೂಪವೇ‌‌ ಆಗಿದೆ ಈ ಕಂದನಿಗೆ ಸಿಕ್ಕ ಆರಂಭ ಬೇರೆ ಯಾರಿಗೂ ಸಿಕ್ಕಿರಲು ಸಾಧ್ಯವಿಲ್ಲ. ಜೂನಿಯರ್ ಚಿರು ಸದಾಕಾಲ ಸಂತೋಷವಾಗಿ ಬಾಳಬೇಕು ಎನ್ನುವುದೇ ನನ್ನ ಹಾರೈಕೆ. ನಿಮ್ಮೆಲ್ಲರ ಆಶೀರ್ವಾದ ಮೇಘನಾ ಹಾಗೂ ಮಗುವಿನ ಮೇಲೆ ಸದಾ ಹೀಗೆ ಇರಲಿ ಎಂದು ತೇಜ್ ಅವರು ಕರುನಾಡ ಜನತೆಯನ್ನು ಎಂದು ಕೇಳಿಕೊಂಡಿದ್ದಾರೆ‌‌.
ಇನ್ನು ಮೇಘನಾಗೆ ಗಂಡು ಮಗು ಹುಟ್ಟಿದೆ ಎಂದು ತಿಳಿದ ಬಳಿಕ ಸೋದರಮಾವನಾದ ಸಂಭ್ರಮದಲ್ಲಿ ತೇಜ್ ಅವರು ವಿಶೇಷ ರೀತಿಯಲ್ಲಿ ಉಡುಗೊರೆ ನೀಡಿದ್ದಾರೆ. ಸೋದರ ಮಾವ ಅನ್ನೋದೆ ಬಹಳ ವಿಶೇಷ ಆಗಿರುವಾಗ ತೇಜ್ ಅವರು ಈ ಸಮಯದಲ್ಲಿ ನಿನ್ನೆಯ ದಿನವನ್ನು ಇನ್ನೂ ವಿಶೇಷವನ್ನಾಗಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟರು ತಮ್ಮ ತಮ್ಮ ಹುಟ್ಟುಹಬ್ಬಗಳಲ್ಲಿ ಸಿನಿಮಾಗಳ ಟೀಸರ್ ಅಥವಾ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವುದನ್ನು ನೋಡಿದ್ದೇವೆ. ಆದರೆ ತೇಜ್ ಅವರು ಮಾತ್ರ ತಮ್ಮ ಅಳಿಯ ಹುಟ್ಟಿದ ದಿನ ತಮ್ಮ ಸಿನಿಮಾದ ಮ್ಯಾಸಿವ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಈ ಮೂಲಕ ಪುಟ್ಟ ಚಿರುವಿನ ಆಗಮನವನ್ನು ಇನ್ನಷ್ಟು ನೆನಪಲ್ಲಿ ಇರುವಂತೆ ಮಾಡಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ತೇಜ್ ಅವರು ಇದೀಗ ಕನ್ನಡಲ್ಲಿ ತಮ್ಮ ಮೊದಲ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ತೇಜ್ ಕನ್ನಡ ಇಂಡಸ್ಟ್ರಿಗೆ ಬಾಲ್ಯದಲ್ಲಿಯೇ ನಟಿಸಿದ ಅಪಾರ ಅನುಭವ ಹೊಂದಿದ್ದಾರೆ. ಅಳಿಯನ ಆಗಮನದ ದಿನವಾದ ನಿನ್ನೆ ತಮ್ಮ ರಾಮಾಚಾರಿ 2.0 ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ನಮ್ಮದು ಸಿನಿಮಾ ಕುಟುಂಬ ಅದಕ್ಕಾಗಿಯೇ ಸಿನಿಮಾದ ಒಂದು ಅಂಶದ ಮೂಲಕವೇ ಅಳಿಯನಿಗೆ ಸ್ವಾಗತ ಕೋರಿದ್ದೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಆ ಕುಟುಂಬ ಸದಾ ಖುಷಿಖುಷಿಯಾಗಿರಲಿ ಎಂಬುದೇ ಎಲ್ಲರ ಹಾರೈಕೆ. ಪುಟ್ಟ ಚಿರಂಜೀವಿ ಸದಾ ಚಿರಂಜೀವಿಯಾಗಿ ನೂರ್ಕಾಲ ಸುಖವಾಗಿ ಬಾಳಲಿ ಎಂದು ನಾವೂ ಕೂಡಾ ಆಶಿಸೋಣ.

Leave A Reply

Your email address will not be published.