ಈಗ ಕೆಲ ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ರಾಧಾ ಕಲ್ಯಾಣ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಎಲ್ಲ ಧಾರವಾಹಿಗಳಲ್ಲಿ ರಾಧಾಕಲ್ಯಾಣ ಧಾರವಾಹಿ ಕೂಡ ಪ್ರತಿಯೊಬ್ಬರ ಮನೆಮಾತಾಗಿದ್ದರು ಸುಳ್ಳಲ್ಲ. ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟನೆ ಮಾಡಿದಂತಹ ಬೇರೆ ನಟ ನಟಿಯರು ಬೇರೆಬೇರೆ ಧಾರಾವಾಹಿ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿಯಾಗಿ ನಟನೆ ಮಾಡಿದ ಕೃತಿಕಾ ರವೀಂದ್ರ ಅವರು ರಾಧಾಕಲ್ಯಾಣ ಧಾರವಾಹಿ ಮುಗಿದ ನಂತರ ಬೇರೆ ಯಾವುದೇ ಧಾರವಾಹಿಗಳಲ್ಲಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಕೃತಿಕಾ ನಟನೆಯನ್ನು ಬಿಟ್ಟು ನಟನೆಯಿಂದ ಹಿಂದೆ ಸರಿದಿದ್ದಾರಾ? ಅವರು ಈಗ ಏನು ಮಾಡುತ್ತಿದ್ದಾರೆ ? ಈ ಎಲ್ಲಾ ವಿಚಾರಗಳನ್ನು ಸ್ವತಃ ಕೃತಿಕಾ ಅವರೇ ತಿಳಿಸಿದ್ದಾರೆ. ನಟನೆಯ ಬಗ್ಗೆ ಕೃತಿಕಾ ಎನು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

2011 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ರಾಧಾ ಕಲ್ಯಾಣ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಬರುವ ನಾಯಕ ವಿಶು ಹಾಗೂ ನಾಯಕಿ ರಾಧಿಕಾ ಪಾತ್ರಗಳು ಸಾಕಷ್ಟು ಪ್ರಖ್ಯಾತಿ ಪಡೆದ ಪಾತ್ರಗಳು. ಮುಖ್ಯ ಪಾತ್ರಗಳಲ್ಲಿ ರಾಧಿಕಾ ಪಾತ್ರದಲ್ಲಿ ನಾಯಕಿಯಾಗಿ ಕೃತಿಕಾ ರವೀಂದ್ರ ಹಾಗೂ ವಿಶು ಪಾತ್ರದಲ್ಲಿ ನಾಯಕನಾಗಿ ನಟ ಚಂದನ್ ಕುಮಾರ್ ಅಭಿನಯಿಸಿದ್ದರು. ಈ ಧಾರಾವಾಹಿ ಮುಗಿದು 5 ವರ್ಷಗಳೆ ಆಗಿವೆ. ಆದರೆ ಕೃತಿಕಾ ಮಾತ್ರ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿಲ್ಲ. ಕೃತಿಕಾ ಅವರು ಧಾರಾವಾಹಿಯಿಂದ ಹಿಂದೆ ಸರಿದಿದ್ದು ಯಾತಕ್ಕಾಗಿ ಎನ್ನುವುದಕ್ಕೆ ಕಾರಣವನ್ನು ಸ್ವತಃ ಕೃತಿಕಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೃತಿಕಾ ಅವರಿಗೆ ಸಾಕಷ್ಟು ಜನರು ಮತ್ತೆ ಕಿರುತೆರೆಗೆ ಬನ್ನಿ ಅಂತ ಹೇಳುತ್ತಿದ್ದಾರಂತೆ. 2011ರಿಂದ 2015 ರವರೆಗೆ ತಾನು ಧಾರಾವಾಹಿ ಕ್ಷೇತ್ರದಲ್ಲಿ ತುಂಬ ಇಷ್ಟಪಟ್ಟು ಕೆಲಸ ಮಾಡಿದ್ದ ಕೃತಿಕಾ ಅವರಿಗೆ ವೈಯಕ್ತಿಕವಾಗಿ ಮತ್ತೊಮ್ಮೆ ರಾಧಿಕಾ ಆಗಲು ಇಷ್ಟ ಇಲ್ಲವಂತೆ. ರಾಧಿಕಾ ಪಾತ್ರಕ್ಕಿಂತ ವಿಭಿನ್ನವಾದ ಪಾತ್ರವನ್ನೂ ಮಾಡಲು ಕೃತಿಕಾ ಇಚ್ಛಿಸುತ್ತಾರೆ . ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಜನರು ಇವರ ಅಭಿನಯವನ್ನು ಸಾಕಷ್ಟು ಇಷ್ಟಪಟ್ಟಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿಕಾ ಅವರಿಗೆ ಅವರ ಫಾಲೋವರ್ಸ್ ಕೇಳಿದ ಕೆಲವು ಪ್ರಶ್ನೆಗಳಿಗೆ ಕೃತಿಕಾ ನನ್ನ ಕ್ಷೇತ್ರವು ಬೆಳಕಿನಲ್ಲೇ ಕಾರ್ಯನಿರ್ವಹಿಸುತ್ತದೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಭಾವಸ್ತೀನಿ ಎಂದು ಕೃತಿಕಾ ರವೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಅಂದರೆ ತುಂಬ ಇಷ್ಟ ಪಡುವ ಕೃತಿಕಾ ರವೀಂದ್ರ ಅವರು ಈಗಾಗಲೇ ಕೆಂಗುಲಾಬಿ, ಯಾರಿಗೆ ಯಾರುಂಟು, ಶಾರ್ದೂಲ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಬ್ರೇಕ್‌ಗೋಸ್ಕರ ಕೃತಿಕಾ ಕಾಯುತ್ತಿದ್ದಾರೆ. ಸಿನಿಮಾ ಮೇಲೆ ಆಧಾರವಾಗಿದ್ದರೆ ಅವರಿಗೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ಒಮ್ಮೊಮ್ಮೆ ಎಲ್ಲ ಬಿಟ್ಟು ನನಗೆ ಹೇಗೆ ಬೇಕೋ ಹಾಗೆ ಮಾಡೋಣ, ಇರೋಣ ಎಂದೆನಿಸುತ್ತದೆ. ಆಗೆಲ್ಲ ನನಗೆ ಹೇಡಿಯಾಗೋದಕ್ಕಿಂತ, ಬುದ್ಧಿವಂತೆಯಾಗಿ ಬಂದಿದ್ದೆಲ್ಲವನ್ನು ಎದುರಿಸೋಣ ಅನಿಸುತ್ತದೆ. ನನ್ನ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಅವರ ಬಣ್ಣವನ್ನು ತೋರಿಸಿದವರಿಗೆ, ನನ್ನನ್ನು ಹಿಮ್ಮೆಟ್ಟಿಸಿದವರಿಗೆ, ನನಗೆ ಬೇಸರ ಮಾಡಿದವರಿಗೆ ನೀವು ನನ್ನನ್ನು ಕಾಪಾಡಿದ್ದೀರಿ ಅಂತ ಕೂಗಿ ಹೇಳಬೇಕು. ನೀವು ನಿಜವಾಗಿಯೂ ಪ್ರಾಮಾಣಿಕವಾಗಿ ನನಗೆ ಒಳ್ಳೆಯದಾಗಲಿ ಅಂತ ಹಾರೈಸಿದರೆ ನಿಮ್ಮಂತಹವರನ್ನು ನನ್ನ ಜೀವನದಲ್ಲಿ ಪಡೆಯಲು ಪುಣ್ಯ ಮಾಡಿದ್ದೇನೆ ಎಂದ ಕೃತಿಕಾ ಧನ್ಯವಾದಗಳನ್ನು ಕೂಡಾ ತಿಳಿಸಿದ್ದಾರೆ. ಹೇಳಿಕೊಂಡಿದ್ದಾರೆ. ಈ ನಡುವೆ ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕೃತಿಕಾ, ಪ್ರೇಕ್ಷಕರ ಪ್ರಶ್ನೆಗಳಿಗೆ ಈ ರೀತಿಯಾಗಿ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *