ಮನುಷ್ಯನ ದೇಹಕ್ಕೆ ಊಟಕ್ಕಿಂತ ಹೆಚ್ಚಾಗಿ ನೀರಿನ ಅಗತ್ಯವಿದೆ, ಒಂದು ವೇಳೆ ಊಟ ಇಲ್ಲದಿದ್ದರೂ ಸುಧಾರಿಸಿಕೊಳ್ಳಲು ನೀರಿನ ಅವಶ್ಯಕತೆ ಬೇಕಾಗುತ್ತದೆ. ಆದ್ದರಿಂದ ಪ್ರತಿದಿನ ನಿಯಮಿತವಾಗಿ ನೀರಿನ ಸೇವನೆ ಮಾಡಬೇಕು ಕೆಲವರು ನೀರನ್ನು ಹೆಚ್ಚಾಗಿ ಕುಡಿದರು ಇನ್ನು ಕೆಲವರು ನೀರನ್ನು ಬಾಯಾರಿಕೆ ಆಗುವ ಸಂದರ್ಭದಲ್ಲಿ ಮಾತ್ರ ಕುಡಿಯುತ್ತಾರೆ, ಆದ್ರೆ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಹೆಚ್ಚು ನೀರು ಕುಡಿಯಬೇಕಾಗುತ್ತದೆ.
ವಿಷ್ಯಕ್ಕೆ ಬರೋಣ ಪ್ರತಿದಿನ ಹೆಚ್ಚು ನೀರನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ನೋಡುವುದಾದರೆ, ದೇಹದಲ್ಲಿ ಜೀರ್ಣಕ್ರಿಯೆ ಉತ್ತಮ ರೀತಿಯಲ್ಲಾಗುತ್ತದೆ ಹಾಗೂ ಮಲಬದ್ಧತೆ ಇರೋರಿಗೆ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ, ದೇಹದಲ್ಲಿನ ಕಲ್ಮಶಗಳು ಹೊರಬರಲು ನೀರು ಸಹಕಾರಿ ಅಷ್ಟೇ ಅಲ್ಲದೆ ದೇಹದ ತೇವಾಂಶವನ್ನು ಕಾಪಾಡುತ್ತದೆ.
ಇನ್ನು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಒಂದೆರಡು ಗ್ಲಾಸ್ ಬೆಚ್ಚಗಿನ ನೀರು ಕುಡಿಯೋದ್ರಿಂದ ದೇಹದ ಬೊಜ್ಜು ನಿವಾರಣೆಗೆ ಸಹಕಾರಿಯಾಗುತ್ತದೆ, ನೀರನ್ನು ನಿಯಮಿತವಾಗಿ ಕುಡಿಯೋದ್ರಿಂದ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಚರ್ಮದ ಆರೈಕೆಗೆ ನೀರಿನ ಸೇವನೆ ಸಹಕಾರಿ, ಕಣ್ಣಿನ ಅರೋಗ್ಯ ಹೃದಯದ ಅರೋಗ್ಯ ಒಟ್ಟಾರೆಯಾಗಿ ದೇಹದಲ್ಲಿ ಉತ್ತಮ ಅರೋಗ್ಯ ವೃದ್ಧಿಯಾಗುವುದು.
ಇನ್ನು ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಚಾರ ಏನು ಅನ್ನೋದಾದರೆ ನೀವು ಸ್ನಾನಕ್ಕೆ ಹೋಗುವ ಮೊದಲು ಒಂದು ಲೋಟ ನೀರು ಕುಡಿದರೆ ನಿಮ್ಮ ದೇಹದಲ್ಲಿನ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ನೀವು ಊಟ ಮಾಡುವ ಅರ್ಧಗಂಟೆಗೂ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಯಾವ ಸಮಯದಲ್ಲಿ ತಣ್ಣೀರು ಕುಡಿಯಬಾರದವು ಅನ್ನೋದನ್ನ ನೋಡುವುದಾದರೆ ನೀವು ವ್ಯಾಯಾಮ ಮಾಡಿಕೊಂಡು ಬಂದ ತಕ್ಷಣ ಅಥವಾ ದೇಹಕ್ಕೆ ಹೆಚ್ಚು ದಣಿವು ಆಗಿರುವಂತ ಬೆಚ್ಚಗಿನ ನೀರು ಕುಡಿಯುವುದು ಉತ್ತಮ.
ಇನ್ನೊಂದು ವಿಚಾರ ಏನು ಅನ್ನೋದಾದರೆ ಬಾಯಾರಿಕೆ ಅದಾಗಲೇ ನೀರು ಕುಡಿಯುವ ಅಭ್ಯಾಸಕ್ಕಿಂತ ಪ್ರತಿದಿನ ಅರ್ಧ ಗಂಟೆಗೊಮ್ಮೆ ಒಂದು ಗಂಟೋಗೋಮ್ಮೆ ನಿಯಮಿತವಾಗಿ ನೀರು ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ, ಸಾಮಾನ್ಯವಾಗಿ ಕಾಡುವಂತ ಕೆಲವು ಸಮಸ್ಯೆಗಳಿಗೆ ನೀರು ಸರ್ವರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.