ನಾವುಗಳು ಪ್ರತಿದಿನ ಊಟ ಮಾಡಿ ರಾತ್ರಿಯ ಸಮಯದಲ್ಲಿ ಮಲಗುವ ಅಭ್ಯಾಸ ಹುಟ್ಟಿನಿಂದಲೂ ಬೆಳೆದುಕೊಂಡು ಬಂದಿರುವಂತ ಪದ್ಧತಿ, ಆದ್ರೆ ನಿಮಗೆ ಗೊತ್ತಿರಬೇಕು ದೇಹದಲ್ಲಿ ಬಹಳಷ್ಟು ಬದಲಾವಣೆಗಳು ರಾತ್ರಿಯ ಸಮಯದಲ್ಲೇ ಆಗುವುದು. ಇಡೀ ದಿನ ದಣಿವು ಹಾಗೂ ಸುಸ್ತು ಆಗಿರುವಂತ ದೇಹ ಬೆಳಗ್ಗೆ ಅಷ್ಟ್ರಲ್ಲಿ ಸರಿ ಹೋಗಿರುತ್ತದೆ. ಇನ್ನು ರಾತ್ರಿಯೆಲ್ಲಾ ಹೆಚ್ಚಾಗಿ ಕಾಡುವಂತ ತಲೆನೋವು ಸಮಸ್ಯೆ ರಾತ್ರಿ ಮಲಗಿ ಏಳುವ ಅಷ್ಟ್ರಲ್ಲಿ ಕಡಿಮೆಯಾಗಿರುತ್ತದೆ ಅಥವಾ ನಿವಾರಣೆ ಆಗಿರುತ್ತದೆ.

ಈ ಅನುಭವ ಬಹಳಷ್ಟು ಜನಕ್ಕೆ ಆಗಿರುತ್ತದೆ ಆದ್ರೆ ಇನ್ನು ಕೆಲವು ವಿಚಾರಗಳು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ರಾತ್ರಿ ಮಲಗಿದ ಸಮಯದಲ್ಲಿ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಅನ್ನೋದು ಅವುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ರಾತ್ರಿ ಮಲಗಿದಾದಾಗ ದೇಹದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದನ್ನ ಕೆಲ ತಜ್ಞನರು ಸಂಶೋಧನೆಯ ಮೂಲಕ ತಿಳಿದಿದ್ದಾರೆ, ಅಷ್ಟಕ್ಕೂ ದೇಹದಲ್ಲಿ ಯಾವೆಲ್ಲ ಬದಲಾವಣೆಯಾಗುವುದು ಅನ್ನೋದನ್ನ ತಿಳಿಯೋಣ ಬನ್ನಿ.

ನಾವುಗಳು ಪ್ರತಿದಿನ ನಿದ್ರೆ ಮಾಡುವಾಗ ಅಥವಾ ನಮ್ಮ ದೇಹ ನಿದ್ರೆಯಲ್ಲಿ ಇರುವಂತ ಸಮಯದಲ್ಲಿ 5 ಮುಖ್ಯ ವಿಭಾಗಗಳಿದ್ದು,ಪ್ರತಿಯೊಂದು ವಿಭಾಗದ ಕಾರ್ಯದಿಂದ ನಮ್ಮ ದೇಹ ಹಾಗೂ ಮೆದುಳನ್ನು ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ. ಇನ್ನು ಪ್ರತಿಯೊಂದು ಕಾರ್ಯ ನಡೆಯುವಾಗಲೂ ನೀವು ನಂಬಲಸಾದ್ಯ ಕಾರಣ ನಿಮ್ಮ ಕಣ್ಣುಗಳು ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಚಲಿಸುತ್ತಿರುತ್ತವೆ.

ಇನ್ನು ರಾತ್ರಿ ಹೊತ್ತು ಮಲಗಿದಾಗ ದೇಹದಲ್ಲಿ ಬೆಳವಣಿಗೆಯ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ, ಹೌದು ದೇಹದಲ್ಲಿ ಬೆಳವಣಿಗೆ ಹಾರ್ಮೋನ್ ಅನ್ನೋದು ರಾತ್ರಿ ಸಮಯದಲ್ಲಿ ಆಗುವುದರಿಂದ ನಮ್ಮ ಮೂಳೆ ಮಾಂಸಖಂಡಗಳ ಬೆಳವಣಿಗೆ ಪೂರಕವಾಗಿದೆ, ದೇಹದಲ್ಲಿ ಉಂಟಾಗಿರುವ ಗಾಯಗಳು ಗುಣವಾಗುತ್ತವೆ ಹಾಗೂ ನಮ್ಮ ದೇಹ ಬೆಳವಣಿಗೆ ಆಗುವುದು ನಾವು ಉದ್ದ ಆಗುವುದು ಈ ಘಟ್ಟದಲ್ಲಿಯೇ. ಕೂದಲು ಬೆಳೆಯುವುದು ಉಗುರುಗಳ ಬೆಳವಣಿಗೆಗಳು ಆಗುವುದು ರಾತ್ರಿ ಸಮಯದಲ್ಲಿಯೇ ಅನ್ನೋದನ್ನ ಸಂಶೋಧನೆ ತಿಳಿಸಿದೆ.

ಇನ್ನು ದೇಹದಲ್ಲಿ ಎಳೆಲ್ಲ ಬದಲಾವಣೆ ಆಗುತ್ತೆ ಅನ್ನೋದನ್ನ ನೋಡುವುದಾದರೆ ರಾತ್ರಿ ಮಲಗಿ ನಿದ್ರೆ ಮಾಡುವಾಗ ದೇಹದ ಗಂಟಲಿನ ನರಗಳು ನಮ್ಮ ಗಂಟಲನ್ನು ಸಣ್ಣ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತವೆ, ಹೌದು ಉಸಿರಾಟ ಪ್ರಕ್ರಿಯೆ ಹೆಚ್ಚು ಕಡಿಮೆಯಾಗುವುದು ಅದಕ್ಕೆ ಕೆಲವೊಮ್ಮೆ ಎದ್ದಾಗ ಧ್ವನಿ ಬರುವುದಿಲ್ಲ ಈ ರೀತಿಯ ಅನುಭವ ಬಹುತೇಕವಾಗಿ ನಿಮಗೂ ಆಗಿರುತ್ತದೆ. ನಿದ್ರೆಯ ಸಮಯದಲ್ಲಿ ಮೆದುಳು ಚುರುಕಾಗಿ ಕೆಲಸ ಮಾಡುತ್ತಿರುತ್ತದೆ ಹೌದು ಕೆಲವೊಮ್ಮೆ ವಿಚಿತ್ರ ಕಲ್ಪನೆಗಳೆಲ್ಲಾ ಉಂಟಾಗುತ್ತವೆ ಹಳೆಯ ನೆನಪುಗಳಾಗಬಹುದು ಹಿಂದಿನ ದಿನದ ನೆನಪು ನಾಳೆಯ ಕೆಲಸಗಳ ನೆನಪು ಆಗಬಹುದು ಇದನ್ನೇ ಕನಸು ಎನ್ನುವರು.

Leave a Reply

Your email address will not be published. Required fields are marked *

error: Content is protected !!