ನೀರಿನ ಬಾಟಲ್ ಬಿಸಿನೆಸ್ ಮಾಡೋದು ಹೇಗೆ? ನೋಡಿ ಸಂಪೂರ್ಣ ಮಾಹಿತಿ

0 534

Water bottle business: ಮನುಷ್ಯ ಬದುಕಬೇಕು ಎಂದರೆ ಒಂದಾದರೂ ಉದ್ಯೋಗ ಬೇಕೇ ಬೇಕು. ಉದ್ಯೋಗಗಳು ಹಲವಾರು ಇವೆ. ಅಂತಹ ಉದ್ಯೋಗಗಳಲ್ಲಿ ನೀರಿನ ಬಾಟಲ್ ಮಾರಾಟ ಮಾಡುವ ಉದ್ಯೋಗ ಕೂಡ ಒಂದು. ಸ್ವಂತ ವ್ಯವಹಾರ ಮಾಡಲು ಬಂಡವಾಳಗಳು, ಮಶಿನರಿಗಳು, ಕಚ್ಚಾವಸ್ತುಗಳು ಕೆಲಸಗಾರರು ಬೇಕು. ಆದ್ದರಿಂದ ನಾವು ಇಲ್ಲಿ ನೀರಿನ ಬಾಟಲ್ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ನೀರಿನ ಬಾಟಲ್ ತಯಾರಿಕೆಯನ್ನು ನೋಡಿಕೊಳ್ಳಲು ಬರಬೇಕಾಗುತ್ತದೆ. ಈ ಕಂಪನಿಯನ್ನು ತಯಾರಿಸಲು ಸರಿಯಾದ ಕಟ್ಟಡ ಬೋರ್ವೆಲ್ ವ್ಯವಸ್ಥೆ ಬೇಕಾಗುತ್ತದೆ. ಇವೆರಡಕ್ಕೆ ಹೆಚ್ಚುಕಮ್ಮಿ 17 ಲಕ್ಷ ರೂ ಖರ್ಚಾಗುತ್ತದೆ. ಇನ್ನು ಮಶಿನರಿಯನ್ನು ನೋಡುವುದಾದರೆ 750000ರೂಪಾಯಿಗಳಿಂದ ಶುರುವಾಗುತ್ತದೆ. ಈ ಮಿಷನರಿಗಳು ಅದರ ಸಾಮರ್ಥ್ಯದ ಮೇಲೆ ನಿರತವಾಗಿರುತ್ತದೆ. ಇದನ್ನು ತಯಾರಿಸಲು ಆಯಾಭಾಗದ ನಗರಸಭೆಯ ಅಥವಾ ಪಂಚಾಯತದ ಪರವಾನಗಿಗಳು ಬೇಕಾಗುತ್ತದೆ. ಈ ನೀರಿನ ಪರೀಕ್ಷೆ ಮಾಡಿದರೆ ಗುಣಮಟ್ಟವನ್ನು ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ.

ಒಂದು ಲೀಟರ್ ನ ಖಾಲಿ ಬಾಟಲನ್ನು ತಯಾರಿಸಲು ಕನಿಷ್ಠ 2.5 ರೂಪಾಯಿಗಳು ಬೇಕಾಗುತ್ತದೆ. ಇದರ ಮುಚ್ಚಳವನ್ನು ತಯಾರಿಸಲು 35 ಪೈಸೆ ಖರ್ಚು ಬೀಳುತ್ತದೆ. ನೀರಿನ ಬಾಟಲ್ ನ ಕಂಪನಿಯಲ್ಲಿ ಬಾಟಲಿಗೆ 25 ಪೈಸೆ ಮತ್ತು ನೀರಿನ ಬಾಟಲ್ ನ ಪ್ಯಾಕಿಂಗ್ ಮಾಡಲು 37 ಪೈಸೆ, ಪ್ಯಾಕಿಂಗ್ ಟೇಪ್ ಗೆ  25 ಪೈಸೆ ಬೇಕು. ಕೆಲಸಗಾರರ ಖರ್ಚು ಒಂದು ಬಾಟಲಿಗೆ 8 ಪೈಸೆ ಬೀಳುತ್ತದೆ. ಇದರ ನಿರ್ವಹಣೆಯ ವೆಚ್ಚ ಮತ್ತು ಕರೆಂಟ್ ಬಿಲ್ ಸೇರಿ 50 ಪೈಸೆ ಬೀಳುತ್ತದೆ. ಒಟ್ಟಾರೆ ಹೇಳಬೇಕೆಂದರೆ ಒಂದು ನೀರಿನ ತಯಾರಿಕಾ ಬಾಟಲಿನ ವೆಚ್ಚ 3ರೂ ಮತ್ತು 70ಪೈಸೆ ಬೀಳುತ್ತದೆ.

ಒಂದು ಬಾಕ್ಸ್ ಗೆ  ಒಂದು ಲೀಟರ್ ನ 12 ಪೀಸ್ ಗಳನ್ನು ಹಾಕಿ ಪ್ಯಾಕ್ ಮಾಡಿದರೆ ಒಂದು ಬಾಕ್ಸಿಗೆ ಒಟ್ಟು 44 ರೂ ಮತ್ತು 40 ಪೈಸೆ ಖರ್ಚುಗಳು ಬೀಳುತ್ತದೆ. ಅದೇ ರೀತಿ ಅರ್ಧ ಲೀಟರ್ ನ ವಾಟರ್ ಬಾಟಲ್ ಪ್ಯಾಕಿಂಗ್ ಮಾಡುವುದಾದರೆ ಖಾಲಿ ಬಾಟಲಿಗೆ 1.5 ರೂಪಾಯಿ ಮತ್ತು ಮುಚ್ಚಳಕ್ಕೆ 32 ಪೈಸೆ ಮತ್ತು ಕೆಲಸಗಾರರ ವೆಚ್ಚ 8 ಪೈಸೆ, ಹೀಗೆ ಒಂದು ನೀರಿನ ಬಾಟಲ್ ಅನ್ನು ತಯಾರಿಸಲು 3ರೂಪಾಯಿ ಖರ್ಚು ಬರುತ್ತದೆ. ಅರ್ಧ ಲೀಟರ್ ನ ನೀರಿನ ಬಾಟಲ್ ಅನ್ನು ಬಾಕ್ಸಿಗೆ 24 ಪೀಸ್ ಗಳನ್ನು ಹಾಕುವುದಾದರೆ 74 ರೂಪಾಯಿಗಳು ಖರ್ಚಾಗುತ್ತದೆ.

ಹಾಗೆಯೇ ಇದರಲ್ಲಿನ ಲಾಭವನ್ನು ನೋಡುವುದಾದರೆ ಕಾಲು ಲೀಟರ್ ನೀರಿನ ಬಾಟಲಿಯ ಬಾಕ್ಸನ್ನು 75 ರಿಂದ 80 ರೂಪಾಯಿಗಳಿಗೆ ವ್ಯಾಪಾರವನ್ನು ಮಾಡಬಹುದು ಅಥವಾ ಇನ್ನೂ ಹೆಚ್ಚಿನ ಮೊತ್ತಕ್ಕೆ ವ್ಯಾಪಾರವನ್ನು ಮಾಡಬಹುದು. ಯಾವುದೇ ಒಂದು ವಸ್ತುವನ್ನು ಮೊದಲು ಹೆಚ್ಚು ವ್ಯಾಪಾರ ಮಾಡಲು ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವನ್ನು ಇಟ್ಟು ವ್ಯಾಪಾರ ಮಾಡಬೇಕಾಗುತ್ತದೆ. ಇದರಿಂದ ನೀರಿನ ಬಾಟಲ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರನ್ನು ತಲುಪುತ್ತದೆ. ಹಾಗೆ ಅರ್ಧ ಲೀಟರ್ ಬಾಕ್ಸನ್ನು 110ರಿಂದ 115 ರೂಗಳಿಗೆ ವ್ಯಾಪಾರ ಮಾಡಬಹುದು.

ಒಂದು ಲೀಟರಿನ ನೀರಿನ ಬಾಟಲಿಗ ತಗಲುವ ವೆಚ್ಚ 45ರೂ ಆದರೆ ಒಂದು ಬಾಕ್ಸ್ ನ ಮೇಲೆ 30 ರೂಗಳು ಲಾಭ ದೊರಕುತ್ತದೆ. ಹೀಗೆ ಒಂದು ದಿನಕ್ಕೆ ಎರಡು 150 ಬಾಕ್ಸ್ ಗಳನ್ನು ವ್ಯಾಪಾರ ಮಾಡಿದರೆ 7200 ರೂಪಾಯಿಗಳು ಲಾಭ ದೊರಕುತ್ತದೆ. ಅದರಂತೆಯೇ ಅರ್ಧ ಲೀಟರ್ ನ ವಾಟರ್ ಬಾಟಲ್ ನ್ನು ದಿನಕ್ಕೆ ಎರಡು 250 ಬಾಕ್ಸ್ ಗಳನ್ನು ವ್ಯಾಪಾರ ಮಾಡಿದರೆ 10000 ರೂಗಳು ಲಾಭ ದೊರೆಯುತ್ತದೆ. ಇದನ್ನು ತಯಾರಿಸಲು ಲೇಬರ್ ಗಳು ಮಶಿನರಿಗಳು ಬೇಕಾಗುತ್ತದೆ. ಹಾಗಾಗಿ ಇದೂ ಸಹ ಒಂದು ಒಳ್ಳೆಯ ಲಾಭದಾಯಕ ಉದ್ಯೋಗ ಎಂದು ಹೇಳಬಹುದು.

Leave A Reply

Your email address will not be published.