ಅಡುಗೆಗೆ ಕ್ಯಾರೆಟ್ ಬೇಕಿತ್ತು ಹೊಲದಲ್ಲಿ ಹೋಗಿ ಕ್ಯಾರೆಟ್ ಕಿತ್ತಾಗ ಏನಿತ್ತು ನೋಡಿ

0 0

ಕೆಲವೊಮ್ಮೆ ಒಂದು ಕೆಲಸವನ್ನು ಮಾಡಲು ಹೋಗುತ್ತೇವೆ. ಆದರೆ ಏನೋ ನಡೆದು ಬಿಡುತ್ತದೆ. ಅಂದರೆ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಕೆಲವು ಸಕಾರಾತ್ಮಕವಾಗಿ ಇರುತ್ತವೆ. ಹಾಗೆಯೇ ಕೆಲವು ನಕಾರಾತ್ಮಕವಾಗಿ ಇರುತ್ತವೆ. ಹಾಗೆಯೇ ಕೆಲವು ವಿಚಿತ್ರಗಳು ಸಂಭವಿಸುತ್ತವೆ. ಅಂತಹ ಒಂದು ವಿಚಿತ್ರದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸ್ವೀಡನ್ ಇದು ಒಂದು ದೇಶವಾಗಿದೆ. ಇಲ್ಲಿ ಒಬ್ಬ ಲೀನಾ ಎಂಬ ಮಹಿಳೆ ಒಂದು ಉಂಗುರವನ್ನು ಕಳೆದುಕೊಂಡಿದ್ದರು. ಆ ಉಂಗುರವು ಅವಳ ಗಂಡ ಮದುವೆಯ ದಿನದಂದು ಕೊಡಿಸಿದ್ದನು. ಆ ಉಂಗುರವು ಬಂಗಾರದ್ದೂ ಅಲ್ಲ. ಅದು ವಜ್ರದ ಉಂಗುರವಾಗಿತ್ತು. ಅವಳು ತಮ್ಮ ಮಕ್ಕಳನ್ನು ಸಹ ಕರೆದುಕೊಂಡು ತುಂಬಾ ಹುಡುಕಿದರು. ಆದರೆ ಎಲ್ಲೂ ಸಿಗಲಿಲ್ಲ. ಇದರಿಂದ ಬಹಳ ನೋವಾಯಿತು. ಯಾರಿಗಾದರೂ ಒಂದು ಅಮೂಲ್ಯವಾದ ವಸ್ತು ಕಳೆದರೆ ಬೇಜಾರಾಗುವುದು ಅಥವಾ ನೋವಾಗುವುದು ಸಹಜ.

ಹಾಗೆಯೇ ದಿನಗಳು ಕಳೆದವು. ಎಷ್ಟೇ ಕಷ್ಟಪಟ್ಟು ಹುಡುಕಿದರೂ ಉಂಗುರ ಸಿಗಲಿಲ್ಲ. ಸುಮಾರು ಹದಿನಾರು ವರ್ಷ ಕಳೆಯಿತು. ಗಂಡ ಹೆಂಡತಿ ಸೇರಿ ತೋಟದಲ್ಲಿ ಗಜ್ಜರಿಯನ್ನು ಬೆಳೆಯುತ್ತಿದ್ದರು. ಒಂದು ದಿನ ಅಡುಗೆ ಮಾಡಲು ಗಜ್ಜರಿಯನ್ನು ಕಿತ್ತುಕೊಂಡು ಬರಲು ಹೊರಟರು. ಹಾಗೆಯೇ ಒಂದೊಂದೇ ಗಜ್ಜರಿಯನ್ನು ಕಿತ್ತಿದರು. ಕೊನೆಯದಾಗಿ ಒಂದು ಗಜ್ಜರಿಯನ್ನು ಕಿತ್ತಿದಾಗ ಏನೋ ಹೊಳೆದಂತಾಯಿತು. ಆಗ ಲೀನಾ ಅವರು ಬಹಳ ಮೂಕವಿಸ್ಮಿತರಾದರು.

ಏಕೆಂದರೆ 16ವರ್ಷಗಳ ಹಿಂದೆ ಕಳೆದ ಉಂಗುರ ಒಂದು ಗಜ್ಜರಿಯ ಗಡ್ಡೆಗೆ ಇತ್ತು. ಇದನ್ನು ನೋಡಿ ಬಹಳ ಸಂತೋಷವಾಯಿತು. ಇದನ್ನು ಹೋಗಿ ಗಂಡನಿಗೆ ಮತ್ತು ಮಕ್ಕಳಿಗೆ ಹೇಳಿದರು. ಇದರಿಂದ ಇಡೀ ಕುಟುಂಬಕ್ಕೆ ತುಂಬಾ ಸಂತೋಷವಾಯಿತು. ಇಂತಹ ಕೆಲವು ಅನಿರೀಕ್ಷಿತ ಘಟನೆಗಳು ಎಲ್ಲರ ಜೀವನದಲ್ಲಿ ನಡೆಯುವುದಿಲ್ಲ. ಕೆಲವರ ಜೀವನದಲ್ಲಿ ಮಾತ್ರ ನಡೆಯುತ್ತದೆ. ಆದರೂ 16 ವರ್ಷಗಳ ನಂತರ ಸಿಕ್ಕ ಈ ಉಂಗುರವು ಅವರ ನಿಜವಾದ ಪ್ರೀತಿಯ ಸಂಕೇತವಾಗಿದೆ ಎಂದು ಹೇಳಬಹುದು.

Leave A Reply

Your email address will not be published.