ಮಜ್ಜಿಗೆ ಸುಮಾರು ಎಲ್ಲರಿಗೂ ತಿಳಿದಿದೆ. ಸಂಸ್ಕೃತದಲ್ಲಿ ತಕ್ರ ಎಂದು ಕರೆಯಲಾಗುತ್ತದೆ. ಊಟ ಮಾಡಿದ ಮೇಲೆ ಮಜ್ಜಿಗೆ ಇಲ್ಲದಿದ್ದರೆ ಊಟ ಸಂಪೂರ್ಣ ಅಲ್ಲ ಎಂದು ಹೇಳುತ್ತಾರೆ. ಊಟ ಮುಗಿದ ಮೇಲೆ ಮಜ್ಜಿಗೆ ಕುಡಿದರೆ ಮಾತ್ರ ಊಟ ಪರಿಪೂರ್ಣ. ಇಲ್ಲಿ ನಾವು ಮಜ್ಜಿಗೆಯ ಬಗ್ಗೆ ತಿಳಿಯೋಣ.
ಮಜ್ಜಿಗೆಯನ್ನು ಹಾಲಿನಿಂದ ಮಾಡಲಾಗುತ್ತದೆ.ಹಾಲು ಹೆಪ್ಪು ಹಾಕಿ ಮೊಸರು ಆದಾಗ ಅದನ್ನು ಕಡೆದರೆ ಮಜ್ಜಿಗೆಯಾಗುತ್ತದೆ.ಹಾಲು ದೇಹಕ್ಕೆ ತಂಪು ನೀಡುತ್ತದೆ. ಹಾಲಿನಿಂದ ತಯಾರಿಸಿದ ಮಜ್ಜಿಗೆ ಇದು ಕೂಡ ದೇಹಕ್ಕೆ ತಂಪು ನೀಡುತ್ತದೆ.
ಊಟಾದ ನಂತರ ಮಜ್ಜಿಗೆ ಕುಡಿಯಬೇಕು. ಎಲ್ಲಾ ವಿವಿಧ ಮೃಷ್ಟಾನ್ನಗಳನ್ನು ಸೇವಿಸಿದ ನಂತರ ಅದನ್ನು ಪಚನಗೊಳಿಸಲು ಉಷ್ಠವೀರ್ಯ ಮಜ್ಜಿಗೆ ಅತ್ಯುತ್ತಮ ಆಗಿದೆ. ಮಜ್ಜಿಗೆಯನ್ನು ಊಟದ ನಂತರ ಕುಡಿದರೆ ಆಹಾರವನ್ನು ದೇಹದಲ್ಲಿ ಪಚನಗೊಳಿಸುತ್ತದೆ. ಮಜ್ಜಿಗೆಯಲ್ಲಿ ಒಳ್ಳೆ ಬ್ಯಾಕ್ಟೀರಿಯಾ ಇದೆ. ಅವು ನಮ್ಮ ದೇಹಕ್ಕೆ ಅತ್ಯವಶ್ಯಕ. ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಒಳ್ಳೆ ಬ್ಯಾಕ್ಟೀರಿಯಾಗಳ ಪಾತ್ರ ಬಹಳ ಮುಖ್ಯ. ಅದು ಮಜ್ಜಿಗೆಯಲ್ಲಿ ಸಿಗುತ್ತದೆ.
ಮೊಸರನ್ನು ಕಡೆದಾಗ ಬೆಣ್ಣೆಯನ್ನು ತೆಗೆದಾಗ ಸಿಗುವುದು ಮಜ್ಜಿಗೆ.ಮೊಸರಿಗೆ ನೀರು ಹಾಕಿ ಕುಡಿದರೆ ಅದು ಮಜ್ಜಿಗೆಯಲ್ಲ. ಸ್ವಲ್ಪವೂ ಜಿಡ್ಡಿನ ಅಂಶ ಇರಬಾರದು. ಹುಳಿ ಅಂಶ ಸ್ವಲ್ಪವೂ ಇರಬಾರದು ಆದ್ದರಿಂದ ಸೆಕೆಗಾಲದಲ್ಲಿ ಹೆಚ್ಚಾಗಿ ಮಜ್ಜಿಗೆಯನ್ನು ಬಳಸಿ. ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಮುಖ್ಯ. ಆದ್ದರಿಂದ ದಿನಾಲೂ ಮಜ್ಜಿಗೆಯನ್ನು ಊಟಾದ ನಂತರ ಕುಡಿಯಿರಿ. ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಿ.