ಮೊದಲು ಏನಾದರೂ ಖಾಯಿಲೆ ಬಂದರೆ ಮನೆಯ ಔಷಧಿಯನ್ನು ಮಾಡಿ ಗುಣಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಹಾಗಲ್ಲ. ದೇಹಕ್ಕೆ ಏನಾದರೂ ಸಣ್ಣ ಪುಟ್ಟ ಬದಲಾವಣೆ ಆದರೂ ಸಾಕು ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಂಗ್ಲೀಷ್ ಔಷಧಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಇರುವ ವಸ್ತುಗಳ ಬಗ್ಗೆ ತಿಳಿದು ಅದರ ಪ್ರಯೋಜನ ಪಡೆದುಕೊಳ್ಳಬೇಕು. ನಾವು ಒಂದು ಮನೆಮದ್ದಿನ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನೆಯಲ್ಲಿ ಬಳಸುವ ಅದೆಷ್ಟೋ ವಸ್ತುಗಳನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ದ್ರಾಕ್ಷಿಹಣ್ಣಿನಿಂದ ಮನುಷ್ಯನ ಆರೋಗ್ಯಕ್ಕೆ ಬಹಳ ಪ್ರಯೋಜನಗಳು ಇವೆ. ದ್ರಾಕ್ಷಿ ಹಣ್ಣಿನಲ್ಲಿ ಹಲವಾರು ವಿಧಗಳಿವೆ. ಅದರಲ್ಲೂ ಕಪ್ಪು ದ್ರಾಕ್ಷಿ ತಿನ್ನುವುದರಿಂದ ಬಹಳ ಲಾಭಗಳು ಇವೆ. ಈ ದ್ರಾಕ್ಷಿಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವನೆ ಮಾಡುವುದರಿಂದ ದೇಹದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಅದರ ಜೊತೆಗೆ ನರದೌರ್ಬಲ್ಯ ಕೂಡ ದೂರವಾಗುತ್ತದೆ. ದ್ರಾಕ್ಷಿ ಹಣ್ಣಿನ ರಸವನ್ನು ಸಕ್ಕರೆ ಖಾಯಿಲೆ ಇರುವವರಿಗೆ ಸಕ್ಕರೆ ಹಾಕದೇ ಕೊಡುವುದರಿಂದ ಖಾಯಿಲೆ ಬಹುಬೇಗನೆ ಗುಣಮುಖವಾಗುತ್ತದೆ.

ಪೇಟೆಯಲ್ಲಿ ಹೆಚ್ಚಾಗಿ ಹಸಿರು ಬಣ್ಣದ ದ್ರಾಕ್ಷಿ ಸಿಗುತ್ತದೆ. ಹಸಿರು ಬಣ್ಣದ ದ್ರಾಕ್ಷಿಯನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಗುವ ಹುಣ್ಣು ಕಡಿಮೆ ಆಗುತ್ತದೆ. ಅದರ ಜೊತೆಗೆ ರಕ್ತವನ್ನು ಶುದ್ಧಿಗೊಳಿಸುವಲ್ಲಿ ಇದು ಸಹಕಾರಿ ಆಗಿದೆ. ಹಾಗೆಯೇ ದಿನಾಲೂ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಬಹಳ ಪ್ರಯೋಜನಗಳು ಇವೆ. ದಿನಾಲೂ ಒಣದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ, ಹುಳಿತೇಗು, ಅಜೀರ್ಣ ಮತ್ತು ಮಲಬದ್ಧತೆ ದೂರವಾಗುತ್ತದೆ.

ಹಾಗೆಯೇ ಒಣದ್ರಾಕ್ಷಿಯನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಡಬೇಕು. ಹಾಗೆಯೇ ಬೆಳಿಗ್ಗೆ ಎದ್ದ ತಕ್ಷಣ ಅದನ್ನು ತಿನ್ನಬೇಕು. ಸುಮಾರು ಮೂರು ತಿಂಗಳುಗಳವರೆಗೆ ಇದನ್ನು ಮಾಡಬೇಕು. ಇದರಿಂದ ಬಹಳ ತೆಳ್ಳಗೆ ಇರುವವರು ಆರೋಗ್ಯಕರವಾಗಿ ದಪ್ಪ ಆಗುತ್ತಾರೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ರಕ್ತಹೀನತೆ ಇರುವವರು ಇದನ್ನು ಮೂರು ತಿಂಗಳುಗಳ ಕಾಲ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಕೊನೆಯದಾಗಿ ಹೇಳುವುದೇನೆಂದರೆ ಹಣ್ಣನ್ನು ತಿನ್ನುವ ಅಭ್ಯಾಸ ರೂಢಿಮಾಡಿಕೊಳ್ಳಬೇಕು. ಎಲ್ಲಾ ಹಣ್ಣುಗಳು ಒಂದೊಂದು ರೀತಿಯ ಪೋಷಕಾಂಶಗಳನ್ನು ನೀಡುತ್ತವೆ.

Leave a Reply

Your email address will not be published. Required fields are marked *