ಈ ಕಪ್ಪು ಕೋಳಿಯ ರೆಟ್ ಯಾಕೆ ಅಷ್ಟೊಂದು, ಇದರಿಂದ ಏನ್ ಲಾಭ ನೋಡಿ

0 16

ಎಲ್ಲರೂ ನಾಟಿ ಕೋಳಿಯ ಬಗ್ಗೆ ತಿಳಿದಿರುತ್ತಾರೆ ಆದರೆ ಕಪ್ಪು ಕೋಳಿಯ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ. ಕಪ್ಪು ಕೋಳಿಗಳನ್ನು ಎಲ್ಲಿ ಸಾಕಲಾಗಿದೆ, ಅವುಗಳ ಉಪಯೋಗ ಹಾಗೂ ಕೋಳಿ ಮಾಂಸ ಮತ್ತು ಮೊಟ್ಟೆಯ ಬೆಲೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮಧ್ಯಪ್ರದೇಶದ ಆದಿವಾಸಿಗಳು ತಮ್ಮ ಮನೆಯಲ್ಲಿ ಸಾಕುವ ಕಪ್ಪು ಕೋಳಿಗಳನ್ನೇ ನಂಬಿದ್ದಾರೆ ಅದು ಅವರಿಗೆ ದುಡ್ಡಿನ ಮಳೆಯನ್ನು ಹರಿಸುತ್ತದೆ. ಅನಾದಿ ಕಾಲದಿಂದಲೂ ಕೋಳಿಗಳನ್ನು ಸಾಕುವುದು ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುವುದು ಇವರ ವೃತ್ತಿ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಕಪ್ಪು ಕೋಳಿ ಜನಪ್ರಿಯವಾಗಿವೆ. ಈ ಕಪ್ಪು ಕೋಳಿಯ ಹೆಸರು ಖಡಕ್ ನಾಥ ಅಥವಾ ಕಲಿಮಸಿ. ಆದಿವಾಸಿಗಳು ಕೋಳಿ ಸಾಕಾಣಿಕೆಯನ್ನು ವೃತ್ತಿ ಮಾಡಿಕೊಂಡು ದೇಶ ವಿದೇಶಗಳಿಗೆ ಕೋಳಿಯನ್ನು ರಫ್ತು ಮಾಡುತ್ತಾ ಆದಾಯ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ ಈ ಕೋಳಿ ಸುಮಾರು 100 ಮೊಟ್ಟೆಗಳನ್ನು ಇಡುತ್ತದೆ. ಎಮೆಲಾನಿನ್ನ ಎಂಬ ದೇಹಕ್ಕೆ ಅಗತ್ಯವಾದ ಸಂಯುಕ್ತವು ಈ ಕೋಳಿಗಳಲ್ಲಿ ಹೆಚ್ಚಾಗಿದ್ದು ರಕ್ತಸ್ರಾವ, ಗರ್ಭಪಾತ, ಪ್ರಸವಾನಂತರದ ಸಮಸ್ಯೆಗಳು, ಪುರುಷರಲ್ಲಿನ ನರಗಳ ದೌರ್ಬಲ್ಯವನ್ನು ತಡೆಯುವಲ್ಲಿ ಸಹ ಉಪಕಾರಿಯಾಗಿದೆ.

ಸಾಧಾರಣ ನಾಟಿ ಕೋಳಿಗಳಿಗೆ ಹೋಲಿಸಿದರೆ ಕಪ್ಪು ಕೋಳಿ ಪ್ರೊಟೀನ್, ಕಡಿಮೆ ಕೊಬ್ಬಿನಂಶ ಹೊಂದಿರುತ್ತದೆ. ಕಪ್ಪು ಕೋಳಿಯ ಮಾಂಸದಲ್ಲಿ ವಿಟಮಿನ್ ಬಿ ಒನ್, ಟು, ಸಿಕ್ಸ, ಟ್ವೆಲ್ ಮತ್ತು ಸಿ ಜೀವಸತ್ವಗಳು, ಕ್ಯಾಲ್ಶಿಯಂ ಹೇರಳವಾಗಿದ್ದು ನ್ಯುಮೋನಿಯಾ, ರಕ್ತಹೀನತೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಕಬ್ಬಿಣ ಅಂಶ ಕ್ಷಯ, ಬಿಪಿ, ಅಸ್ತಮಾ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಕೋಳಿಯ ಮೊಟ್ಟೆಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಈ ಕೋಳಿಯ ಮೊಟ್ಟೆ ಹಾಗೂ ಮಾಂಸ 25.47 ರಷ್ಟು ಪ್ರೊಟೀನ್ ಹೊಂದಿದೆ ಎಂದು ಮೈಸೂರಿನ ಕೇಂದ್ರ ಆಹಾರ ಸಂಸ್ಥೆ ವರದಿ ನೀಡಿದೆ ಆದ್ದರಿಂದ ಈ ಕೋಳಿ ಮಾಂಸದ ಬೆಲೆ 1,000ರೂ, ಒಂದು ಮೊಟ್ಟೆಯ ಬೆಲೆ 40-50ರೂ.

Leave A Reply

Your email address will not be published.