ಕೊರೊನ ಸೋಂಕಿತರ ಚಿಕಿತ್ಸೆ ಜೊತೆಗೆ ಮತ್ತೊಂದು ಒಳ್ಳೆ ಕೆಲಸಕ್ಕೆ ಕೈ ಹಾಕಿದ ಡಾ. ರಾಜು ಏನ್ ಮಾಡ್ತಿದಾರೆ ಗೊತ್ತೇ ?

0 1

ಕೊರೋನ ವೈರಸ್ ದೇಶದಾದ್ಯಂತ ತಾಂಡವವಾಡುತ್ತಿದೆ, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಸಾಕಷ್ಟು ಸಾವು-ನೋವು ಸಂಭವಿಸುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರು ಕೂಡ ತಮ್ಮಿಂದ ಸಾಧ್ಯವಿರುವ ಅನೇಕ ಸಹಾಯವನ್ನು ಮಾಡುತ್ತಿದ್ದಾರೆ. ಅದೇ ರೀತಿ ವೃತ್ತಿಯಲ್ಲಿ ಡಾಕ್ಟರ್ ಆಗಿರುವ ರಾಜು ಅವರು ಕೊರೋನ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಡಾಕ್ಟರ್ ರಾಜು ಕೃಷ್ಣಮೂರ್ತಿ ಅವರು ತಮ್ಮ ಕ್ಲೀನಿಕ್ ನಲ್ಲಿ ಉಚಿತವಾಗಿ ಊಟ ಕೊಡುತ್ತಿದ್ದಾರೆ. ಅವರು ಇದರ ಬಗ್ಗೆ ಮಾತನಾಡುತ್ತಾ ಬೆಳಗ್ಗೆ 9 ರಿಂದ 10 ಗಂಟೆ ಹೀಗೆ ಕ್ಲೀನಿಕ್ ಓಪನ್ ಆಗಿ ರಾತ್ರಿ 10 ಗಂಟೆಗೆ ಕ್ಲೋಸ್ ಮಾಡಲಾಗುತ್ತದೆ. ನಾನಾ ಕಡೆಯಿಂದ ರೋಗಿಗಳು ಕ್ಲೀನಿಕ್ ಗೆ ಬರುತ್ತಾರೆ, ಅವರಿಗೆ ಮಧ್ಯಾಹ್ನ ಊಟದ ಅವಶ್ಯಕತೆ ಇರುತ್ತದೆ ಆದರೆ ಕೊರೋನ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ರಾಜ್ಯಾದ್ಯಂತ ಲಾಕ್ ಡೌನ್ ಮಾಡಲಾಗಿದೆ ಇದರಿಂದ ಹೋಟೆಲ್ ಗಳು ಓಪನ್ ಇರುವುದಿಲ್ಲ ಹೀಗಾಗಿ ರೋಗಿಗಳಿಗೆ ಊಟದ ಸಮಸ್ಯೆ ಆಗುತ್ತಿದೆ. ಮೊದಲು ಕೂಡ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು ಇದೀಗ ಮತ್ತೆ ಬಹಳಷ್ಟು ಜನರು ಸಹಕಾರ ಕೊಟ್ಟರು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯೂ ಬಂದಿತು. ಯುವಕರು ಸೇರಿಕೊಂಡು ಕೋವಿಡ್ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಮತ್ತು ಟ್ರೀಟ್ಮೆಂಟ್ ವಿಷಯದಲ್ಲಿ ಕ್ಲೀನಿಕ್ ನ ಸಿಬ್ಬಂದಿಯವರು ಕೇರ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಜೊತೆಗೆ ಅವರು ಯುವಕರು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೊರೋನ ತೆಗೆದುಹಾಕಬೇಕು ಎಂದರೆ ಸರ್ಕಾರ ಅಥವಾ ಡಾಕ್ಟರ್ ಇಂದ ಮಾತ್ರ ಸಾಧ್ಯವಿಲ್ಲ ಪ್ರತಿಯೊಬ್ಬರ ಸಹಾಯ, ಸಹಕಾರ ಮುಖ್ಯ. ರೋಗಿಗೆ ಆರೈಕೆ ಮಾಡುವುದರ ಜೊತೆಗೆ ಊಟ, ನೀರು ಒದಗಿಸುವುದರಿಂದ ಕೊರೋನ ಎಂಬ ಖಾಯಿಲೆಯನ್ನು ಬುಡ ಸಮೇತ ಕಿತ್ತೆಸೆಯಬಹುದು. ರೋಗಿಗಳಿಗೆ ಊಟ, ನೀರು ವ್ಯವಸ್ಥೆ ಮಾಡುವುದರಿಂದ ಕೊರೋನ ತಡೆಯಬಹುದು. ಪ್ರತಿದಿನ ಮಧ್ಯಾಹ್ನ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಎಲ್ಲ ರೋಗಿಗಳಿಗೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಡಾಕ್ಟರ್ ರಾಜು ಅವರು ರೋಗಿಗಳಿಗೆ ಮನೆಯಲ್ಲಿ ಇರುವಾಗ ಮಾಸ್ಕ್ ಹಾಕಿಕೊಳ್ಳಬೇಡಿ ಎಂದು ಹೇಳುತ್ತಾರೆ. ಮನೆಯಲ್ಲಿ ಇರುವಾಗ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅವರು ರೋಗಿಗಳ ಹತ್ತಿರ ಮಾತನಾಡಿದರೆ ಅವರಿಗೆ ಸಂತೋಷವಾಗುತ್ತದೆ ಎಂಬ ಕಾರಣಕ್ಕಾಗಿ ನಾನು ಸಂತೋಷವಾಗಿ ಮಾತನಾಡುತ್ತೇನೆ. ನನ್ನ ಸ್ನೇಹಿತರು ಸಹಕಾರ ನೀಡುತ್ತಿದ್ದಾರೆ ನನಗೆ ಸಂತೋಷ ಆಗುತ್ತಿದೆ ಎಂದು ಡಾಕ್ಟರ್ ರಾಜು ಅವರು ಹೇಳಿದರು.

ಪ್ರತಿಯೊಂದು ಮನೆಯಲ್ಲಿ ಕೊರೋನ ವೈರಸ್ ತಗುಲಿರುವುದು ಕಂಡುಬರುತ್ತಿದೆ. ಕೊರೋನ ವೈರಸ್ ಒಂದು ಸಾಮಾನ್ಯ ವೈರಸ್. ಮೀಡಿಯಾಗಳಲ್ಲಿ ಜನರನ್ನು ಹೆದರಿಸುತ್ತಿದ್ದಾರೆ. ಪ್ರತಿಯೊಬ್ಬರು ಮೂರು ತಿಂಗಳವರೆಗೆ ಮೀಡಿಯಾದಿಂದ ದೂರವಿರಬೇಕು, ಕೊರೋನ ಟೆಸ್ಟ್ ಇಂದ ದೂರ ಇರಬೇಕು, ಜ್ವರ ಬಂದರೆ ಕೋವಿಡ್ ಟೆಸ್ಟ್ ಮಾಡುವ ಡಾಕ್ಟರನ್ನು ಕನ್ಸಲ್ಟ್ ಮಾಡುವುದನ್ನು ಬಿಡಬೇಕು ಹೀಗೆ ಮಾಡುವುದರಿಂದ ಮೂರು ತಿಂಗಳಲ್ಲಿ ಕೊರೋನ ವೈರಸ್ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ, ಅಲ್ಲದೆ ಅವರು ಯಾರಿಗೆ ಆಗಲಿ ಜ್ವರ, ನೆಗಡಿ ಬಂದರೆ ಕೆಲವು ಬೇಸಿಕ್ ಮೆಡಿಸಿನ್ ಗಳಿವೆ ಅವುಗಳನ್ನು ತೆಗೆದುಕೊಂಡರೆ ಸಾಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.