ಮನುಷ್ಯನಿಗೆ ಆಹಾರ ಸೇವನೆ ಪ್ರಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತದೆ ಅದೇ ರೀತಿ ದೇಹದಲ್ಲಿ ಆಹಾರ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು. ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯಿಂದ ಸ್ವಲ್ಪ ಬೇರೆಯಾಗಿ ನಾವು ಬೇರೆ ಬೇರೆ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಇದಕ್ಕೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾವು ದೂಷಿಸುವ ಹಾಗಿಲ್ಲ. ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಮಲಬದ್ಧತೆ ಎದುರಾಗಬೇಕಾದರೆ ಇದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ. ಇನ್ನು ನಾವು ಈ ಲೇಖನದಲ್ಲಿ ಮಲಬದ್ಧತೆ ಉಂಟಾದರೆ ಅದರಿಂದ ಪೈಲ್ಸ್ ಅಥವಾ ಕರುಳಿನ ಕ್ಯಾನ್ಸರ್ ಅಂತಹ ಬೇರೆ ದೊಡ್ಡ ದೊಡ್ಡ ರೋಗಗಳು ಏನಾದರೂ ಉಂಟಾಗಬಹುದ ಎನ್ನುವುದನ್ನು ತಿಳಿದುಕೊಳ್ಳೋಣ.

ಡಾಕ್ಟರ್ ಆಂಜನಪ್ಪ ಅವರು ಹೇಳುವಂತೆ ನಾವು ನಮ್ಮ ಆಹಾರದಲ್ಲಿ ಹೆಚ್ಚಾಗಿ ನಾರಿನ ಅಂಶ ಇರುವ ಆಹಾರಗಳನ್ನು ಸೇವನೆ ಮಾಡದೆ ಜಂಕ್ ಫುಡ್ ಸೇವನೆ ಹೆಚ್ಚಾಗಿ ಇರುವುದು , ಖಾರದ ಪದಾರ್ಥಗಳು ಹೆಚ್ಚಾಗಿ ಸೇವನೆ ಮಾಡುವುದರಿಂದ ಮಲಬದ್ಧತೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಮಲಬದ್ಧತೆ ನೋಡಲು ನಮಗೆ ಚಿಕ್ಕ ಸಮಸ್ಯೆ ಎನಿಸಿದರೂ ಸಹ ಮುಂದೆ ಇದೇ ಮುಂದುವರೆದು ಪೈಲ್ಸ್ ಹಾಗೂ ದೊಡ್ಡ ಕರುಳಿನ ಕ್ಯಾನ್ಸರ್ ಉಂಟಾಗಲು ಕಾರಣ ಆಗಬಹುದು ಎನ್ನುತ್ತಾರೆ. ನಮ್ಮ ಆಹಾರದಲ್ಲಿ ಹೆಚ್ಚು ನಾರಿನ ಅಂಶ ಇರುವ ಪದಾರ್ಥಗಳ ಬಳಕೆ ಮಾಡುವುದರಿಂದ ನಾವು ಮಲಬದ್ಧತೆ ಇದರಿಂದ ದುರವಾಗಬಹುದು ಎನ್ನುತ್ತಾರೆ. ಹಾಗೆ ಅದರ ಜೊತೆಗೆ ಆದಷ್ಟು ಮಾಂಸ ಆಹಾರ ಬಿಟ್ಟು ಸಾಧ್ಯವಾದಷ್ಟು ಸೊಪ್ಪು ತರಕಾರಿಗಳನ್ನು ಸೇವಿಸಲು ಹೇಳುತ್ತಾರೆ. ಇದಕ್ಕೆ ತಮಾಷೆಯಾಗಿ ಒಂದು ಉದಾಹರಣೆ ಕೊಡುತ್ತಾರೆ ಡಾಕ್ಟರ್ ಆಂಜನಪ್ಪ ಅವರು. ಆನೆ ಸಸ್ಯಾಹಾರಿ ಪ್ರಾಣಿ ಅನ್ನೋದು ನಮಗೆಲ್ಲ ತಿಳಿದಿರುವ ಸಂಗತಿ. ಆನೆ ಒಂದು ದಿನಕ್ಕೆ ಎಷ್ಟು ಹುಲ್ಲು ಸೊಪ್ಪುಗಳನ್ನು ತಿನ್ನುತ್ತದೆ , ನೀರು ಕುಡಿಯುತ್ತದೆ ಮತ್ತು ಅದು ತಿಂದ ಹಾಗೆ ಲದ್ದಿಯನ್ನು ಕೂಡಾ ಅಷ್ಟೇ ಪ್ರಮಾಣದಲ್ಲಿ ಹಾಕುತ್ತದೆ ಅದೇ ರೀತಿ ಮಾನವನ ದೇಹಕ್ಕೆ ಕೂಡಾ ಹೋಲಿಕೆ ಮಾಡಿದರೆ ನಾವು ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಇದರಿಂದ ಉಂಟಾಗುವ ಪೈಲ್ಸ್ ಹಾಗೂ ದೊಡ್ಡ ಕರುಳಿನ ಕ್ಯಾನ್ಸರ್ ಇಂತಹ ದೊಡ್ಡ ರೋಗಗಳಿಂದ ಕೂಡಾ ದೂರ ಇರಬಹುದು ಎನ್ನುತ್ತಾರೆ.

ನಾವು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಕೆಲವೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ನಮ್ಮ ದೀರ್ಘ ಕಾಲದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಇದಕ್ಕೆ ಹೆಚ್ಚಾಗಿ ನೀರನ್ನು ಕುಡಿಯಬೇಕಾಗುವುದು. ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾದರೆ ಕೇವಲ ಮಲಬದ್ಧತೆ ಮಾತ್ರವಲ್ಲದೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀರಿನ ಅಂಶ ಕಡಿಮೆ ಆದಾಗ ಎದುರಾಗುವ ಮಲಬದ್ಧತೆ ಸಮಸ್ಯೆ ಕೂಡ ಸಾಕಷ್ಟು ತೊಂದರೆ ಕೊಡುತ್ತದೆ.

ಕರುಳಿನ ಭಾಗದಲ್ಲಿ ಮಲ ಹೆಚ್ಚು ಗಟ್ಟಿಯಾಗಿ ಹೊರಬರಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಕೊಬ್ಬರಿ ಎಣ್ಣೆಯಲ್ಲಿ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳು ಸಾಕಷ್ಟಿವೆ. ಇವು ನಮ್ಮ ಕರುಳಿನ ಭಾಗದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕರುಳಿನ ಚಲನೆಯನ್ನು ಸರಾಗಗೊಳಿಸಿ ಕರುಳಿನಲ್ಲಿ ಮಲ ಸರಳವಾಗಿ ಚಲಿಸುವಂತೆ ಮಾಡುತ್ತವೆ. ಇದರಿಂದ ಮಲಬದ್ಧತೆ ಸಮಸ್ಯೆ ಬಗೆಹರಿಯುತ್ತದೆ. ದೇಹದಿಂದ ಅತಿಯಾದ ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕುವಲ್ಲಿ ಸಹ ತೆಂಗಿನ ಎಣ್ಣೆಯ ಪಾತ್ರವನ್ನು ಮರೆಯುವಂತಿಲ್ಲ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ರತಿ ದಿನ ಒಂದು ಅಥವಾ ಎರಡು ಟೀ ಚಮಚ ತೆಂಗಿನ ಎಣ್ಣೆಯನ್ನು ಸೇವಿಸುವುದು ಒಳ್ಳೆಯದು. ತೆಂಗಿನ ಎಣ್ಣೆ ಒಂದು ನೈಸರ್ಗಿಕ ಪದಾರ್ಥ ಆಗಿರುವುದರಿಂದ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಮಲಬದ್ಧತೆ ಸಮಸ್ಯೆ ನಿವಾರಣೆಗೆ ನಿಂಬೆಹಣ್ಣು ಒಂದು ಅತ್ಯುತ್ತಮ ಪರಿಹಾರ ಎಂದು ಹೇಳಬಹುದು. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ನಿಂಬೆ ಹಣ್ಣಿನಲ್ಲಿ ಆಮ್ಲೀಯ ಪ್ರಮಾಣ ಹೆಚ್ಚಾಗಿರುವುದರಿಂದ, ಅದರಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿಂದ ನಿಮ್ಮ ದೇಹದ ಜೀರ್ಣಾಂಗದಿಂದ ವಿಷಕಾರಿ ತ್ಯಾಜ್ಯಗಳನ್ನು ತೆಗೆದು ಹಾಕುವಲ್ಲಿ ನಿಂಬೆ ಹಣ್ಣಿನ ರಸ ತುಂಬಾ ಪರಿಣಾಮಕಾರಿ ಎಂದೇ ಹೇಳಬಹುದು.

ಕರುಳಿನ ಭಾಗಕ್ಕೆ ನೀರಿನ ಅಂಶವನ್ನು ತೆಗೆದುಕೊಂಡು ಅಲ್ಲಿರುವ ಮಲವನ್ನು ಮೆತ್ತಗಾಗುವಂತೆ ಮಾಡಿ ಕರುಳಿನ ಚಲನೆಯನ್ನು ಉತ್ತಮಗೊಳಿಸಿ ಮಲವಿಸರ್ಜನೆಯನ್ನು ಸರಾಗಗೊಳಿಸುವ ಲಕ್ಷಣಗಳು ನಿಂಬೆ ಹಣ್ಣಿನಲ್ಲಿ ಕಂಡು ಬರುತ್ತವೆ. ನಾರಿನ ಅಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಕೆಲವೊಮ್ಮೆ ನಮ್ಮ ಆಹಾರಪದ್ಧತಿಯಲ್ಲಿ ಕಡಿಮೆ ಪ್ರಮಾಣದ ನಾರಿನ ಅಂಶ ಇರುವ ಆಹಾರಗಳನ್ನು ಸೇವನೆ ಮಾಡಿದಾಗ ಮಲ ವಿಸರ್ಜನೆಯ ಸಂದರ್ಭದಲ್ಲಿ ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ. ಕಾರ್ಬೋಹೈಡ್ರೇಟ್ ಅಂಶ ಗಳನ್ನು ಕಡಿಮೆ ಸೇವನೆ ಮಾಡಿದರೂ ಕೂಡ ಇದೇ ರೀತಿ ಆಗುತ್ತದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನಾರಿನ ಅಂಶ ಮತ್ತು ಕಾರ್ಬೋಹೈಡ್ರೇಟ್ ಅಂಶ ಇರುವ ಆಹಾರಗಳಿಗೆ ಹೆಚ್ಚು ಆದ್ಯತೆ ನೀಡಿ.

Leave a Reply

Your email address will not be published. Required fields are marked *