Diwali Lakshmi Puja: ದೀಪಾವಳಿ ಅಮಾವಾಸ್ಯೆಯಲ್ಲಿ ಲಕ್ಷ್ಮಿ ಪೂಜೆ ಮಾಡುವ ವಿಧಾನ

0 8,954

Diwali Lakshmi Puja: ನಮಗೆ ಸಂಪತ್ತು ಐಶ್ವರ್ಯ ಕೊಡುವುದು ತಾಯಿ ಲಕ್ಷ್ಮೀದೇವಿ ಸಾಮಾನ್ಯವಾಗಿ ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುತ್ತಾರೆ ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮೀಪೂಜೆ ಅಥವಾ ವ್ರತವನ್ನು ಕೈಗೊಳ್ಳುತ್ತಾರೆ ಹಾಗೆಯೆ ದೀಪಾವಳಿಯಂದು ಬರುವ ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮೀ ಪೂಜೆಯನ್ನು ಮಾಡುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಸಂಜೆಯ ಸಮಯವನ್ನು ಲಕ್ಷ್ಮಿ ಬರುವ ಸಮಯ ಎಂದು ಹೇಳುತ್ತಾರೆ. ದೀಪಾವಳಿಯ ಅಮಾವಾಸ್ಯೆ ದಿನ ಸಂಜೆ ಸಮಯದಲ್ಲಿ ಲಕ್ಷ್ಮಿಯನ್ನು ಕೂರಿಸಬೇಕು. ಅಮಾವಾಸ್ಯೆ ದಿನ 5 ಗಂಟೆ 52 ನಿಮಿಷದಿಂದ 7 ಗಂಟೆ 54 ನಿಮಿಷದೊಳಗೆ ಲಕ್ಷ್ಮಿ ಪೂಜೆ ಮಾಡಬೇಕು. ದೀಪಾವಳಿಯ ಅಮಾವಾಸ್ಯೆಯ ದಿನ ಬೆಳಗ್ಗೆ ಯಾವ ರೀತಿ ಪ್ರತಿದಿನ ಪೂಜೆ ಮಾಡಲಾಗುತ್ತದೆಯೊ ಅದೆ ರೀತಿ ಪೂಜೆ ಮಾಡಿ ಸಂಜೆ ಹೊಸ್ತಿಲಿಗೆ ಪೂಜೆ ಮಾಡಿದ ನಂತರ ಲಕ್ಷ್ಮಿಯನ್ನು ಕೂಡಿಸುವ ಜಾಗದಲ್ಲಿ ಅಷ್ಟದಳದ ರಂಗೋಲಿಯನ್ನು ಹಾಕಿ ಅದಕ್ಕೆ ಅರಿಶಿಣ, ಕುಂಕುಮ ಅಕ್ಷತೆಯನ್ನು ಹಾಕಿ ಅದರ ಮೇಲೆ ಬಾಳೆ ಎಲೆಯನ್ನು ಇಡಬೇಕು ಬಾಳೆ ಎಲೆ ಇಲ್ಲವಾದರೆ ಹಿತ್ತಾಳೆ ತಾಮ್ರ ಅಥವಾ ಬೆಳ್ಳಿಯ ತಟ್ಟೆಯನ್ನು ಇಡಬಹುದು

ಬಾಳೆ ಎಲೆ ಅಥವಾ ತಟ್ಟೆಯ ಮೇಲೆ ಅಕ್ಕಿಯನ್ನು ಹಾಕಿ ಅದರ ಮೇಲೆ ಒಂದು ಮಣೆಯನ್ನು ಇಡಬೇಕು ಮನೆಯ ಮೇಲೆ ಅಷ್ಟದಳದ ರಂಗೋಲಿಯನ್ನು ಹಾಕಿ ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಬೇಕು ಮಣೆಯ ಮೇಲೆ ಲಕ್ಷ್ಮಿ ಫೋಟೋವನ್ನು ಇಡಬೇಕು ನಂತರ ಫೋಟೊಕ್ಕೆ ಎರಡೆಳೆ ಗೆಜ್ಜೆ ವಸ್ತ್ರವನ್ನು ಹಾಕಬೇಕು ಕಳಶವನ್ನು ಇಡಲು ಒಂದು ಹಿತ್ತಾಳೆಯ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಬೆರಳಿನಿಂದ ಅಷ್ಟದಳದ ರಂಗೋಲಿ ಬರೆದು ಅದಕ್ಕೆ ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಿ ಲಕ್ಷ್ಮಿ ಫೋಟೋದ ಪಕ್ಕದಲ್ಲಿ ಇಡಬೇಕು ಇದರ ಮೇಲೆ ಕಳಶವನ್ನು ಇಡಬೇಕು ಕಳಶಕ್ಕೆ ಹಿತ್ತಾಳೆ ಬೆಳ್ಳಿ ತಾಮ್ರದ ಚೊಂಬನ್ನು ಬಳಸಬೇಕು ಕಳಶದ ಚೊಂಬಿಗೂ ಅರಿಶಿಣ ಕುಂಕುಮ ಹಚ್ಚಬೇಕು.

ಚೊಂಬಿನ ಮುಕ್ಕಾಲು ಭಾಗ ಶುದ್ಧವಾದ ನೀರನ್ನು ಹಾಕಬೇಕು ನೀರಿಗೆ ಅರಿಶಿಣ ಕುಂಕುಮ ಅಕ್ಷತೆ ಹೂವನ್ನು ಹಾಕಬೇಕು ಕಾಯಿನ್ ಹಾಕಬೇಕು ಬೆಳ್ಳಿ ಕಾಯಿನ್ ಉತ್ತಮ ಬೆಳ್ಳಿ ಕಾಯಿನ್ ಇಲ್ಲವಾದರೆ ಬೆಳ್ಳಿ ಅಥವಾ ಚಿನ್ನದ ಒಂದು ಉಂಗುರವನ್ನು ಕಳಶದ ನೀರಿಗೆ ಹಾಕಬೇಕು ನಂತರ ಕಳಶದ ಚೊಂಬಿಗೆ ವೀಳ್ಯದೆಲೆ ಇಡಬೇಕು ವೀಳ್ಯದೆಲೆ ಇಲ್ಲವಾದರೆ ಮಾವಿನ ಎಲೆಯನ್ನು ತೆಗೆದುಕೊಳ್ಳಬಹುದು ವೀಳ್ಯದೆಲೆಗೆ ಅರಿಶಿಣ ಕುಂಕುಮವನ್ನು ಹಚ್ಚಿ ಚೊಂಬಿನಲ್ಲಿ ಇಡಬೇಕು ಚೊಂಬಿನ ಮೇಲೆ ಒಂದು ತೆಂಗಿನಕಾಯಿಯನ್ನು ಇಡಬೇಕು ಅದಕ್ಕೂ ಅರಿಶಿಣ ಕುಂಕುಮವನ್ನು ಹಚ್ಚಬೇಕು

ಕಳಶಕ್ಕೆ ಸೀರೆಯನ್ನು ಉಡಿಸಬೇಕು ಸೀರೆ ಇಲ್ಲವಾದರೆ ಬ್ಲೌಸ್ ಪೀಸ್ ಅನ್ನು ಸೀರೆ ರೀತಿಯಲ್ಲಿ ಉಡಿಸಬೇಕು. ಲಕ್ಷ್ಮೀಯ ಮುಖವಾಡವನ್ನು ಕಳಶದ ತೆಂಗಿನಕಾಯಿಗೆ ಫಿಕ್ಸ್ ಮಾಡಬೇಕು. ಹಸಿರು ಬಳೆಯನ್ನು ತೊಡಿಸಬೇಕು ಮಾಂಗಲ್ಯವನ್ನು ಹಾಕಬೇಕು ಮಾಂಗಲ್ಯ ಇಲ್ಲವಾದರೆ ಅರಿಶಿಣ ಕೊಂಬಿನಿಂದ ಮಾಂಗಲ್ಯವನ್ನು ತಯಾರಿಸಿ ಹಾಕಬೇಕು ಮತ್ತು ಎರಡೆಳೆಯಿಂದ ಮಾಡಿದ ಗೆಜ್ಜೆ ವಸ್ತ್ರವನ್ನು ಹಾಕಬೇಕು. ಮನೆಯಲ್ಲಿ ಚಿನ್ನವಿದ್ದರೆ ಅದನ್ನು ಲಕ್ಷ್ಮಿಗೆ ಹಾಕಿದರೆ ಒಳ್ಳೆಯದು.

ಲಕ್ಷ್ಮಿ ಫೋಟೋದ ಮುಂಭಾಗದಲ್ಲಿ ಒಂದು ಸಣ್ಣ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿಣ ಕುಂಕುಮ ಅಕ್ಷತೆ ಹಾಕಿ ಅದರ ಮೇಲೆ ಗಣಪತಿಯ ಚಿಕ್ಕದಾದ ಮೂರ್ತಿಯನ್ನು ಇಡಬೇಕು ಗಣೇಶನಿಗೆ ಅರಿಶಿಣ ಕುಂಕುಮ ಹಚ್ಚಿದ ನಂತರ ಗೆಜ್ಜೆ ವಸ್ತ್ರವನ್ನು ಹಾಕಬೇಕು. ಲಕ್ಷ್ಮಿ ಫೋಟೋದ ಪಕ್ಕದಲ್ಲಿ ಒಂದು ಸಣ್ಣ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅರಿಶಿಣ ಕುಂಕುಮ ಹಾಕಿ ಅದರ ಮೇಲೆ ಕಾಮಾಕ್ಷಿ ದೀಪವನ್ನು ಇಡಬೇಕು ನಂತರ ಹೂವಿನಿಂದ ಅಲಂಕಾರ ಮಾಡಬೇಕು ಲಕ್ಷ್ಮಿ ಪೂಜೆಯಲ್ಲಿ ಕೆಂಪು ಹೂವನ್ನು ಹೆಚ್ಚು ಬಳಸುವುದು ಉತ್ತಮ.

ಹಾಲಿನಿಂದ ತಯಾರಿಸಿದ ಸಿಹಿತಿನಿಸನ್ನು ಮಾಡಿ ನೈವೇದ್ಯಕ್ಕೆ ಇಡಬೇಕು ಅಥವಾ ಹಾಲನ್ನು ಇಡಬಹುದು. ಲಕ್ಷ್ಮೀದೇವಿಗೆ ಮಡಿಲಕ್ಕಿಯನ್ನು ಇಡಬೇಕು ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಬ್ಲೌಸ್ ಪೀಸ್, ಹಸಿರು ಬಳೆ ಅರಿಶಿಣ ಕುಂಕುಮ ವೀಳ್ಯದೆಲೆ ಅಡಿಕೆ ಅರಿಶಿಣದ ಕೊಂಬು ಹಾಗೂ ದಕ್ಷಿಣೆ ಬೆಲ್ಲದ ಅಚ್ಚನ್ನು ಇಡಬೇಕು. ಲಕ್ಷ್ಮಿ ಫೋಟೋದ ಮುಂಭಾಗದಲ್ಲಿ ಒಂದು ತಟ್ಟೆಯಲ್ಲಿ ಹಣ್ಣುಗಳನ್ನು ಇಡಬೇಕು. ಮುಖ್ಯವಾದ ಡಾಕ್ಯುಮೆಂಟ್ ಇದ್ದಲ್ಲಿ ಅದನ್ನು ಲಕ್ಷ್ಮೀದೇವಿಯ ಮುಂದೆ ಇಟ್ಟು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ದೀಪವನ್ನು ಹಚ್ಚಿದ ನಂತರ ಮೊದಲು ಗಣಪತಿಯನ್ನು ಪೂಜಿಸಿದ ನಂತರ ಲಕ್ಷ್ಮೀದೇವಿ ಕಳಶ ಮತ್ತು ಫೋಟೋಕ್ಕೆ ಪೂಜೆ ಮಾಡಬೇಕು ನಂತರ ಲಕ್ಷ್ಮಿ ಅಷ್ಟೋತ್ತರವನ್ನು ಮಾಡಬೇಕು ಒಂದು ಬೆಳ್ಳಿ ತಟ್ಟೆಯಲ್ಲಿ ವೀಳ್ಯದೆಲೆ ಇಟ್ಟು ಅದಕ್ಕೆ ಅರಿಶಿಣ ಕುಂಕುಮ ಅಕ್ಷತೆಯನ್ನು ಹಾಕಿ ಅದರ ಮೇಲೆ ಲಕ್ಷ್ಮಿ ವಿಗ್ರಹವನ್ನು ಇಡಬೇಕು ನಂತರ ಹೂವಿಟ್ಟು ಗೆಜ್ಜೆ ವಸ್ತ್ರ ಹಾಕಬೇಕು. ಲಕ್ಷ್ಮಿ ಅಷ್ಟೋತ್ತರವನ್ನು ಹೇಳುತ್ತಾ ಲಕ್ಷ್ಮಿಗೆ ಕುಂಕುಮರ್ಚನೆಯನ್ನು ಮಾಡಬೇಕು ನಂತರ ಇಷ್ಟಾರ್ಥವನ್ನು ಹೇಳಿಕೊಳ್ಳುತ್ತಾ ಪೂಜೆಯನ್ನು ಮಾಡಬೇಕು ಕೊನೆಯಲ್ಲಿ ಕೆಂಪಾರತಿಯನ್ನು ಮಾಡಬೇಕು ಆ ನೀರು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು ಇಲ್ಲಿಗೆ ಲಕ್ಷ್ಮೀಪೂಜೆ ಮುಗಿಯುತ್ತದೆ ಪ್ರಸಾದವನ್ನು ಹಂಚಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.