Dipavali Amavase 2023: ಪ್ರತಿ ವರ್ಷ ದೀಪಾವಳಿ ಹಬ್ಬ ಬಂದಾಗ ಪೂಜೆ ಹೇಗೆ ಮಾಡಬೇಕು ಎನ್ನುವ ಗೊಂದಲ ಎಲ್ಲರಲ್ಲು ಇರುತ್ತದೆ. ಆದರೆ ಸರಿಯಾದ ಕ್ರಮ ಯಾರಿಗೂ ಗೊತ್ತಿರುವುದಿಲ್ಲ. ಒಂದು ವೇಳೆ ನೀವು ಕೂಡ ಅದೇ ಗೊಂದಲದಲ್ಲಿದ್ದರೆ, ಲಕ್ಷ್ಮಿ ಪೂಜೆ ಮಾಡುವ ವಿಧಾನ ಹೇಗೆ, ಯಾವ ಸಮಯಕ್ಕೆ ಹೇಗೆ ಪೂಜೆ ಮಾಡಬೇಕು ಎನ್ನುವ ಸರಿಯಾದ ವಿಧಾನವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..

ದೀಪಾವಳಿ ಹಬ್ಬದ ವೇಳೆ ಅಮಾವಾಸ್ಯೆ ಭಾನುವಾರ ಮಧ್ಯಾಹ್ನ 1:45ಕ್ಕೆ ಶುರುವಾಗಿ, ಸೋಮವಾರ ಮಧ್ಯಾಹ್ನ 3 ಗಂಟೆಗೆ ಮುಗಿಯುತ್ತದೆ. ಹಾಗಾಗಿ ಸೋಮವಾರ ಪೂಜೆ ಮಾಡಬೇಕು ಎಂದುಕೊಳ್ಳುವವರು, ಬೆಳಗ್ಗೆ ಪೂಜೆ ಮಾಡಬಹುದು. ಮಧ್ಯಾಹ್ನ ಅಮಾವಾಸ್ಯೆ ಮುಗಿಯುವ ಕಾರಣ ಸಂಜೆ ಪೂಜೆ ಮಾಡುವ ಹಾಗಿಲ್ಲ. ಬ್ಯುಸಿನೆಸ್, ಅಂಗಡಿಗಳು ಇಲ್ಲೆಲ್ಲಾ ಪೂಜೆ ಮಾಡುವವರು ಒಳ್ಳೆಯ ಸಮಯದಲ್ಲಿ ಮಾಡಬೇಕು. ಭಾನುವಾರ ಪೂಜೆ ಮಾಡುವವರು 8:15 ಇಂದ 9:15ವರೆಗು ಪೂಜೆ ಮಾಡಬಹುದು, ಲಕ್ಷ್ಮಿಪೂಜೆ ಮಾಡಲು ಇದು ಸರಿಯಾದ ಸಮಯ ಆಗಿದೆ.

ಸೋಮವಾರ ಪೂಜೆ ಮಾಡುವವರಿಗೆ ಒಳ್ಳೆಯ ಸಮಯ ಬೆಳಗ್ಗೆ 9:15 ರಿಂದ 10:15 ಸರಿಯಾದ ಸಮಯ ಆಗಿರುತ್ತದೆ. ಈ ದಿನ ಕೂಡ ಪೂಜೆ ಮಾಡಬಹುದು. ಈ ದಿನ ಕುಬೇರನ ಪೂಜೆ ಮಾಡಬೇಕು. ಕುಬೇರ ಯಂತ್ರವನ್ನು ಸ್ಥಾಪನೆ ಮಾಡಿ, ಲಕ್ಷ್ಮಿ ಕುಬೇರನನ್ನು ಪೂಜಿಸಿದರೆ, ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಕೈಕಾಲು ಮುಖ ತೊಳೆದು, ಕುಬೇರ ಯಂತ್ರ ಸ್ಥಾಪಿಸಿ, ಪಕ್ಕದಲ್ಲೇ ಲಕ್ಷ್ಮಿಯ ಮೂರ್ತಿ ಇಡಬೇಕು. ಲಕ್ಷ್ಮೀ ಮೂರ್ತಿ ಬೆಳ್ಳಿಯ ಮೂರ್ತಿ ಆದರೂ ಪರವಾಗಿಲ್ಲ, ಪಾದರಸದ ಮೂರ್ತಿ ಆದರೆ ಇನ್ನೂ ಒಳ್ಳೆಯದು.

ಕೆಂಪು ಬಟ್ಟೆಯನ್ನು ಇಟ್ಟು, ಅದರ ಮೇಲೆ ಕುಬೇರ ಯಂತ್ರ ಮತ್ತು ಲಕ್ಷ್ಮೀದೇವಿಯ ಮೂರ್ತಿಯನ್ನು ಇಡಬೇಕು. ಅದರ ಎದುರಲ್ಲಿ, ಅಷ್ಟದಳ ಪದ್ಮದ ರಂಗೋಲಿ ಹಾಕಿ, ಸ್ವಲ್ಪ ಮಟ್ಟಿಗೆ ಅರಿಶಿನ ಕುಂಕುಮ ಹಾಕಿ, ಅದರ ಮೇಲೆ ಹೂವನ್ನು ಇಡಬೇಕು. ಬಳಿಕ ಕಲಶ ಸ್ಥಾಪಿಸಿ, ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು, ಅದಕ್ಕೆ ಅರಿಶಿನ, ಆರು ಕವಡೆ, ಆರು ಕಮಲಾಕ್ಷಿ ಮಣಿಗಳು, 6 ಗೋಡಂಬಿ, 6 ಒಂದು ರೂಪಾಯಿಯ ನಾಣ್ಯಗಳು, ಸ್ವಲ್ಪ ಅರಿಶಿನ, ಕುಂಕುಮ, ವಾಲಂಚ ಮತ್ತು 6 ಗೋಮತಿ ಚಕ್ರ ಹಾಕಿ, ನಂತರ ಅದರ ಮೇಲೆ ಮಾವಿನ ಎಲೆ ಇಡಬೇಕು..

ಅದರ ಮೇಲೆ ತೆಂಗಿನಕಾಯಿ ಇಡಬೇಕು. ಕಲಶ ಸ್ಥಾಪನೆ ಮಾಡುವುದು ಈ ರೀತಿ. ಪೂಜೆಯ ಸಮಯ 8;30 ರಿಂದ 9:15, ಈ ಸಮಯದಲ್ಲಿ ಪೂಜೆ ಮಾಡಿದರೆ ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಸೋಮವಾರದ ದಿವಸ ಪೂಜೆ ಮಾಡುವುದಾದರೆ, 9:15 ರಿಂದ 10:15ರ ಒಳಗೆ ಕಲಶ ಸ್ಥಾಪನೆ ಮಾಡಿ ಪೂಜೆ ಮಾಡಬೇಕು. ಲಕ್ಷ್ಮಿ ಪೂಜೆ ಮುಗಿದ ಬಳಿಕ ಕನಕಧಾರ ಸ್ತೋತ್ರವನ್ನು ಓದಬೇಕು. ಈ ಸ್ತೋತ್ರ ಓದುವುದರಿಂದ ನಿಮಗೆ ಧನಪ್ರಾಪ್ತಿ ಆಗುತ್ತದೆ. ದೀಪಾವಳಿ ಹಬ್ಬದ ದಿನ ಲಕ್ಷ್ಮಿ ಪೂಜೆ ಮಾಡುವುದು ಈ ರೀತಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *