ನಾವು ಭಾರತೀಯರು ಸಂಪ್ರದಾಯ ಎನ್ನುವುದು ನಮ್ಮಲ್ಲಿ ಇನ್ನೂ ಜೀವಂತವಾಗಿದೆ ಅದನ್ನು ಬಳಸಿ ಬೆಳೆಸುವುದು ನಮ್ಮ ಕರ್ತವ್ಯವೂ ಹೌದು. ನಮ್ಮ ಸಂಪ್ರದಾಯದಲ್ಲಿ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಸಾಮಾನ್ಯವಾಗಿದೆ ಆದರೆ ಯಾವ ಸ್ಥಳದಲ್ಲಿ ಯಾರ ಪಾದ ಸ್ಪರ್ಶಿಸಬಾರದು ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆಯುವ ಶ್ರೇಷ್ಠ ಪದ್ಧತಿ ಇದೆ. ಇದು ಇತರರಿಗೆ ಕೊಡುವ ಗೌರವದ ಸೂಚಕವಾಗಿದೆ ಆದರೆ ವೈದಿಕ ಗ್ರಂಥಗಳಲ್ಲಿ ಕೆಲವರ ಪಾದ ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ ಒಂದು ವೇಳೆ ಹಾಗೆ ಮಾಡಿದರೆ ಪಾಪ ಉಂಟಾಗುತ್ತದೆ, ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ. ಇತರರ ಪಾದಗಳನ್ನು ಯಾವ ಸ್ಥಳದಲ್ಲಿ ಮುಟ್ಟಬಾರದು ಎಂಬುದರ ಬಗ್ಗೆ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ನಾವು ಎಲ್ಲರೂ ಪಾಲಿಸಲೇಬೇಕು ಇದರಿಂದ ನಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ.

ದೇವಸ್ಥಾನಕ್ಕೆ ಹೋಗಿದ್ದರೆ ಅಲ್ಲಿ ಗೌರವಾನ್ವಿತ ವ್ಯಕ್ತಿಗಳು ಅಥವಾ ಹಿರಿಯರು ಭೇಟಿಯಾದರೆ ಅವರ ಪಾದಗಳನ್ನು ಮುಟ್ಟಬಾರದು ಏಕೆಂದರೆ ದೇವಸ್ಥಾನದಲ್ಲಿ ದೇವರಿಗಿಂತ ದೊಡ್ಡ ವ್ಯಕ್ತಿ ಇಲ್ಲ ಎನ್ನುವುದು ಇದಕ್ಕೆ ಕಾರಣ. ದೇವರ ಮುಂದೆ ಮಾನವನ ಪಾದವನ್ನು ಸ್ಪರ್ಶಿಸಿದರೆ ದೇವಸ್ಥಾನಕ್ಕೆ ಹಾಗೂ ದೇವರಿಗೆ ಅಪಮಾನ ಮಾಡಿದಂತಾಗುತ್ತದೆ. ಮಲಗಿದವರ ಪಾದವನ್ನು ಸ್ಪರ್ಶಿಸಬಾರದು ಮಲಗಿದವರ ಪಾದ ಸ್ಪರ್ಶಿಸಿದರೆ ಅವರ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಗ್ರಂಥಗಳ ಪ್ರಕಾರ ಮಲಗಿದ ಸ್ಥಿತಿಯಲ್ಲಿ ಸತ್ತ ವ್ಯಕ್ತಿಯ ಪಾದವನ್ನು ಮಾತ್ರ ಸ್ಪರ್ಶಿಸಬಹುದು. ಸ್ಮಶಾನದಿಂದ ಹಿಂದಿರುಗಿದ ವ್ಯಕ್ತಿಯ ಪಾದವನ್ನು ಸ್ಪರ್ಶಿಸಬಾರದು ಅವರು ಸ್ನಾನ ಮಾಡಿದ ನಂತರ ಅವರ ಪಾದವನ್ನು ಸ್ಪರ್ಶಿಸಬಹುದು.

ಪತ್ನಿಯು ಪತಿಯ ಪಾದವನ್ನು ಮುಟ್ಟಬಹುದು ಇದರಿಂದ ಸಂಸಾರದಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ ಆದರೆ ಅಪ್ಪಿತಪ್ಪಿಯು ಪತಿ-ಪತ್ನಿಯ ಪಾದವನ್ನು ಸ್ಪರ್ಶಿಸಬಾರದು ಒಂದು ವೇಳೆ ಸ್ಪರ್ಶಿಸಿದರೆ ಬಿಕ್ಕಟ್ಟು, ಭಿನ್ನಾಭಿಪ್ರಾಯ ಕಂಡುಬರುತ್ತದೆ. ಧಾರ್ಮಿಕ ವಿದ್ವಾಂಸರ ಪ್ರಕಾರ ತಂದೆ ಮಗಳ, ಸೊಸೆ ಹಾಗೂ ಮೊಮ್ಮಗಳ ಪಾದವನ್ನು ಮುಟ್ಟಬಾರದು ಭಾರತೀಯ ಸಂಸ್ಕೃತಿಯಲ್ಲಿ ಇವರು ಪೂಜಿಸಬಹುದಾದ ದೇವತೆಗಳ ಬಾಲ ರೂಪವಾಗಿದೆ ಆದ್ದರಿಂದ ಇವರ ಪಾದವನ್ನು ಸ್ಪರ್ಶಿಸಬಾರದು. ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಪೂರ್ವಜರು ಹಾಕಿಕೊಟ್ಟ ನಿಯಮಗಳಲ್ಲಿ ವೈಜ್ಞಾನಿಕ ಸತ್ಯವು ಅಡಗಿರುತ್ತದೆ ಆದ್ದರಿಂದ ನಾವು ಗೌರವಿಸೋಣ ಹಾಗೂ ಪಾಲಿಸೋಣ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *