Diabetes Health: ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಹವ್ಯಾಸವನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ ಆದರೆ ತಮ್ಮ ದಿನನಿತ್ಯದ ರೂಢಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡು ತಮ್ಮ ಆರೋಗ್ಯದ ಕಡೆ ಗಮನಹರಿಸುವವರು ಬಹಳ ಕಡಿಮೆ. ತಮ್ಮ ಪ್ರತಿನಿತ್ಯದ ಚಹಾದೊಡನೆ ಸ್ವಲ್ಪ ಏಲಕ್ಕಿಯನ್ನು (cardamom) ಬೆರೆಸಿ ಕುಡಿಯುವುದರಿಂದ ದೇಹದ (Health) ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.
Diabetes Health
ಏಲಕ್ಕಿ ಚಹಾ ಸೇವಿಸುವುದರಿಂದ ಸಕ್ಕರೆ ಕಾಯಿಲೆಗೆ (Diabetes) ಗುಡ್ ಬೈ ಹೇಳಬಹುದು ಅಷ್ಟೇ ಅಲ್ಲದೆ ಏಲಕ್ಕಿ (Cardamom) ಹಲವಾರು ವಿಧದ ಉಪಯೋಗಗಳನ್ನು ನಮ್ಮ ದೇಹಕ್ಕೆ ನೀಡುತ್ತದೆ. ಊಟದ ನಂತರ ಏಲಕ್ಕಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ ಎಂಬುದು ಆಯುರ್ವೇದದಲ್ಲಿ (Ayurveda) ತಿಳಿದು ಬಂದಿದೆ ವಿಶೇಷವಾಗಿ ಊಟದ ನಂತರ ಸಾಂಬಾರು ಪದಾರ್ಥ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲಿಯತೆ ಎದುರಾಗುತ್ತದೆ ಆದ್ದರಿಂದ ಏಲಕ್ಕಿ ಸೇವನೆಯೂ ಅಜೀರ್ಣ ಶಕ್ತಿಯನ್ನು ದೂರ ಮಾಡುತ್ತದೆ.
ಅಷ್ಟೇ ಅಲ್ಲದೆ ಹಲ್ಲು ನೋವಿಗೂ ಸಹ ಏಲಕ್ಕಿ ಚಹಾ (Cardamom tea) ಕುಡಿಯುವುದು ತುಂಬಾ ಉತ್ತಮ ಇದು ನೈಸರ್ಗಿಕವಾದ ಬ್ಯಾಕ್ಟೀರಿಯ ನಿವಾರಕ ಗುಣವನ್ನು ಹೊಂದಿರುವುದರಿಂದ ಹಲ್ಲುಗಳ ಸಂದುಗಳಲ್ಲಿ ಬೆಳೆಯುತ್ತಿರುವ ಬ್ಯಾಕ್ಟೀರಿಯಾವನ್ನು ಕೊಂದು ಹಲ್ಲುಗಳನ್ನು ಸ್ವಚ್ಛವಾಗಿಡಲು ಉಪಕಾರಿಯಾಗಿದೆ ಇದರ ಜೊತೆಗೆ ಬಾಯಿಯ ದುರ್ವಾಸನೆಯನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಗಂಟಲು ನೋವು ಕಫ ಕೆಮ್ಮು ಅಥವಾ ಕಟ್ಟಿರುವ ಮೂಗು ಇತ್ಯಾದಿ ಸಮಸ್ಯೆಗಳಿಗೆ ಏಲಕ್ಕಿ ಪರಿಹಾರ ನೀಡುತ್ತದೆ.
ಹೃದಯ (Heart Health) ರೋಗಕ್ಕೂ ಏಲಕ್ಕಿಯಿಂದ ಪರಿಹಾರ ದೊರೆಯುತ್ತದೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ದಿನಕ್ಕೆ ಒಂದು ಬಾರಿಯಾದರೂ ಏಲಕ್ಕಿ ಚಹಾ ವನ್ನು ಸೇವನೆ ಮಾಡುವುದು ಉತ್ತಮ. ವಿಶೇಷವಾಗಿ ಏಲಕ್ಕಿ ಚಹಾ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಬಹುದು ತೀವ್ರ ತಲೆನೋವಿನ ಸಮಸ್ಯೆಯನ್ನ ಹೊಂದಿರುವವರು ಇದರ ಚಹಾವನ್ನು ಸೇವಿಸಬಹುದು.
ಇದನ್ನೂ ಓದಿ..Heart Attack: ಹಾರ್ಟ್ ಅಟ್ಯಾಕ್ ಬರಬಾರದು ಅಂದ್ರೆ ಈ ಹಣ್ಣು ತಿನ್ನಿ ಯಾಕೆಂದರೆ..
ಅಧಿಕ ರಕ್ತದ ಒತ್ತಡ ಇದ್ದವರಿಗೆ, ಉಸಿರಾಟದ ತೊಂದರೆ ಇದ್ದವರಿಗೆ, ದೇಹದಲ್ಲಿ ಕಬ್ಬಿಣಾಂಶದ ಕೊರತೆ, ಅಧಿಕ ಬೊಜ್ಜಿನ ಸಮಸ್ಯೆ ಇತ್ಯಾದಿ ರೋಗಗಳಿಗೆ ಏಲಕ್ಕಿ ಚಹಾದಿಂದ ಪರಿಹಾರ ದೊರೆಯುತ್ತದೆ.
ಆದ್ದರಿಂದ ಪ್ರತಿನಿತ್ಯವೂ ಏಲಕ್ಕಿ ಚಹಾವನ್ನು ಸೇವಿಸುವ ರೂಢಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇರಿಸಿಕೊಳ್ಳಬಹುದು.