astrology Kannada: ಕನಸು ಸಾಮಾನ್ಯವಾಗಿ ಎಲ್ಲರಿಗೂ ಬೀಳುತ್ತದೆ. ಕೆಲವರಿಗೆ ಕನಸು ಬೀಳುವುದೇ ಇಲ್ಲ. ಇನ್ನು ಕೆಲವರಿಗೆ ಕನಸು ಬಿದ್ದರೂ ಆ ಕ್ಷಣಕ್ಕೆ ಮಾತ್ರ ನಂತರದಲ್ಲಿ ಮರೆತು ಹೋಗುತ್ತದೆ. ಹಾಗೆಯೇ ಕೆಲವೊಮ್ಮೆ ಕನಸುಗಳು ಕೆಲವು ವಿಷಯಗಳ ಬಗ್ಗೆ ಯಾವುದೇ ಯೋಚನೆಗಳನ್ನು ಮಾಡದೇ ಇದ್ದರೂ ಬೀಳುತ್ತವೆ. ಕೆಟ್ಟ ಕನಸುಗಳು ಬಿದ್ದರೆ ಭಯವಾಗುತ್ತದೆ. ಹಾಗೆಯೇ ಒಳ್ಳೆಯ ಕನಸುಗಳು ಬಿದ್ದರೆ ಖುಷಿಯಾಗುತ್ತದೆ. ಆದರೆ ದೊಡ್ಡವರು ಹೇಳುವ ಪ್ರಕಾರ ಕೆಲವು ಕನಸುಗಳು ಜೀವನದಲ್ಲಿ ಬರುವ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಆದ್ದರಿಂದ ನಾವು ಇಲ್ಲಿ ಕನಸುಗಳ ಬೇರೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕನಸು ಕಾಣುವುದು ಪರಿಯೊಬ್ಬರ ಜೀವನದಲ್ಲಿ ಒಂದು ಸಾಮಾನ್ಯವಾದ ಪ್ರಕ್ರಿಯೆ ಆಗಿದೆ. ಪ್ರಕೃತಿಗೆ ಸಂಬಂಧಿಸಿದ ಕನಸು ಕೆಲವೊಮ್ಮೆ ಬೀಳುತ್ತದೆ. ಅಂದರೆ ಕನಸಿನಲ್ಲಿ ಸಮುದ್ರ ಬರಬಹುದು ಅಥವಾ ಗಿಡಮರಗಳು ಬರಬಹುದು ಅಥವಾ ಬೆಟ್ಟ ಗುಡ್ಡಗಳು ಬರಬಹುದು. ಇಂತಹ ಕನಸುಗಳು ಬಿದ್ದರೆ ಜೀವನದಲ್ಲಿ ಅಂದರೆ ಅತೀ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರುತ್ತದೆ. ಹೇಗೆ ಪ್ರಕೃತಿಯ ಹತ್ತಿರ ಹೋದರೆ ಮನಸ್ಸಿಗೆ ಮುದ ಸಿಗುತ್ತದೆಯೋ ಹಾಗೆ ಜೀವನಕ್ಕೆ ಖುಷಿ ಬರುತ್ತದೆ. ಹಾಗೆಯೇ ಸತ್ತವರು ಕೆಲವೊಮ್ಮೆ ಕನಸಿನಲ್ಲಿ ಬರುತ್ತಾರೆ. ಇದರಿಂದ ಕೆಲವರು ಭಯ ಪಡುತ್ತಾರೆ. ಆದರೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ.
ಏಕೆಂದರೆ ಇದರಿಂದ ಜೀವನದ ಸಮಸ್ಯೆಗಳು ನಾಶವಾಗಬಹುದು. ಹಾಗೆಯೇ ಸಾಮಾನ್ಯವಾಗಿ ಜನರಿಗೆ ಹಾವಿನ ಕನಸು ಬೀಳುತ್ತದೆ. ಇದರಿಂದ ಭಯ ಪಡುವ ಅವಶ್ಯಕತೆ ಇಲ್ಲ. ಹೀಗೆ ಕನಸುಗಳು ಬಿದ್ದರೆ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ಇದರಿಂದ ಧನಲಾಭ ಕೂಡ ಆಗಬಹುದು. ಹಾಗೆಯೇ ಕನಸಿನಲ್ಲಿ ದೇವರು ಬರುತ್ತಾರೆ. ಆಗ ಜೀವನದಲ್ಲಿ ಸುಖ ಮತ್ತು ಸಮೃದ್ಧಿಗಳು ಪ್ರಾಪ್ತವಾಗುತ್ತವೆ ಎಂದು ಅರ್ಥ. ಕನಸಿನಲ್ಲಿ ಯಾವುದಾದರೂ ದೇವರು ಬಂದರೆ ಇದು ಮುಂದೆ ಯಶಸ್ಸನ್ನು ಖಂಡಿತ ನೀಡುತ್ತದೆ. ಹಾಗೆಯೇ ಕನಸಿನಲ್ಲಿ ಮೀನುಗಳು ಕಾಣಬಹುದು.
ಇಲ್ಲವಾದಲ್ಲಿ ಯಾರಾದರೂ ಮೀನು ಹಿಡಿಯುವುದು ಕಾಣಬಹುದು. ಯಾರಾದರೂ ಮೀನು ತಿನ್ನುತ್ತಿರುವುದು ಕಾಣಬಹುದು. ಇದು ಬಹಳ ಶುಭ ಎಂದು ಹೇಳಲಾಗುತ್ತದೆ. ಹಾಗೆಯೇ ಧನಲಾಭ ಆಗುತ್ತದೆ. ಆದರೆ ಈ ಮೇಲಿನ ಐದು ಕನಸುಗಳು ಬಿದ್ದರೆ ಇದನ್ನು ಯಾರ ಹತ್ತಿರವೂ ಹೇಳಿಕೊಳ್ಳಬಾರದು. ಏಕೆಂದರೆ ಇದರ ಲಾಭಗಳು ದೊರೆಯದೇ ಇರಬಹುದು ಅಥವಾ ಕಡಿಮೆ ದೊರೆಯಬಹುದು. ಹಾಗಾಗಿ ಎಲ್ಲಾ ಕನಸುಗಳನ್ನು ಎಲ್ಲರ ಹತ್ತಿರ ಹಂಚಿಕೊಳ್ಳಬಾರದು. ಅದರಲ್ಲೂ ಈ ಮೇಲಿನ ಐದು ಕನಸುಗಳು ಬಿದ್ದರೆ ಹಂಚಿಕೊಳ್ಳಲೇಬಾರದು.