ಅಧಿಕಾರಿಗಳಿಂದ ನೊಂದ ದಾವಣಗೆರೆಯ ಡಾಕ್ಟರ್ ಆಟೋ ಮೇಲೆ ಬರೆಸಿರೋದು ಏನು ಗೊತ್ತೇ

0 2

ದಾವಣಗೆರೆ ಆಟೋ ಚಾಲಕರು ಒಬ್ಬರು ತಮ್ಮ ಆಟೋದ ಮೇಲೆ ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ ಎಂದು ತಮ್ಮ ಆಟೋದ ಮೇಲೆ ಬರೆಸಿಕೊಂಡಿದ್ದಾರೆ.ಇಂತಹ ಬರಹಗಳು ಅಥವಾ ಸಾಲುಗಳನ್ನು ಆಟದ ಮೇಲೆ ನೋಡಿದಾಗ ಯಾರಿಗೆ ಆದರೂ ಕೂಡ ಈ ರೀತಿಯಾಗಿ ಯಾಕೆ ಬರೆಸಿದ್ದಾರೆ ಎನ್ನುವ ಸಾಮಾನ್ಯ ಸಹಜ ಕುತೂಹಲ ಮೂಡುತ್ತದೆ. ದಾವಣಗೆರೆ ಜಿಲ್ಲೆಯ ಬಾಡ ತಾಲೂಕಿನ ಡಾಕ್ಟರ್ ರವೀಂದ್ರನಾಥ ಎಂಬ ಹೆಸರಿನ ವ್ಯಕ್ತಿ 24 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು ಈಗ ರವೀಂದ್ರನಾಥ್ ಅವರು ತಮ್ಮ ಮೇಲಧಿಕಾರಿಗಳ ವರ್ತನೆಯಿಂದ ,ಅವರ ಬ್ರಷ್ಟಾಚಾರದ ರೀತಿಯಿಂದ ಬೇಸತ್ತು ತಮ್ಮ ಜೀವನ ನಿರ್ವಹಣೆ ಸಲುವಾಗಿ ಆಟೋ ಚಾಲನೆ ಮಾಡುವುದನ್ನು ಆರಂಭಿಸಿದ್ದಾರೆ. ಎಲ್ಲರನ್ನೂ ಕಾಯುವ ಅಧಿಕಾರಿಗಳು ಈ ರೀತಿಯಾಗಿ ಭ್ರಷ್ಟರಾಗಿ ನಡೆದುಕೊಂಡರೆ ಅದು ಎಷ್ಟರಮಟ್ಟಿಗೆ ಸರಿ? ನಮ್ಮ ಕರ್ನಾಟಕದಲ್ಲಿ ಕೊರೋನ ಬಂದಾಗಲಿಂದ ಎಷ್ಟೋ ಜನ ಕೋರೋನ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂದು ಎಷ್ಟು ಜನರು ಹೊರಗಡೆ ಬಿದ್ದಿರುವುದು ಕಂಡು ಬರುತ್ತಿದೆ.

ನಮ್ಮ ಭಾರತ ದೇಶದಲ್ಲಿ ಈ ರೀತಿಯಾಗಿ ತಿಳಿದಂತೆ ಎಲ್ಲಿಯೂ ಸಹ ಆಗಿರುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ವಿಷಗಳು ನಮ್ಮ ಕರ್ನಾಟಕದ ರಾಜಕಾರಣಿಗಳು ಹೊರರಾಜ್ಯಗಳ ರಾಜಕಾರಣಿಗಳನ್ನು ನೋಡಿ ಕಲಿಯಬೇಕಾಗಿರುವ ವಿಷಯ ಎಷ್ಟು ಇದೆ ಅನಿಸುತ್ತದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚೆಗೆ ಅಷ್ಟೇ ಒಂದು ಆದೇಶವನ್ನು ಹೊರಡಿಸಿದ್ದಾರೆ. ಕೊರೊನಾ ಸೋಂಕಿತರ ಆಸ್ಪತ್ರೆಯಲ್ಲಿ ಯಾರಾದರೂ ತಮಗೆ ಬೆಡ್ ಸಿಗುತ್ತಿಲ್ಲ ಎಂದು ಹೇಳಿದರೆ, ಆಯಾ ತಾಲ್ಲೂಕು ಮತ್ತು ಜಿಲ್ಲೆಯ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಜನಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಜಗನ್ ಮೋಹನ್ ರೆಡ್ಡಿ ಅವರು ಈ ರೀತಿ ಆದೇಶವನ್ನು ಹೊರಡಿಸಿದ್ದಾರೆ. ಇತರೆ ಜನಸಾಮಾನ್ಯರಿಗೆ ಹಾಗೂ ಕೂಡ ಯಾವುದೇ ರೀತಿ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಹೊಸದಾಗಿ ಸಾವಿರದ 68 ಅಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ನಿಷ್ಠಾವಂತ ಅಧಿಕಾರಿಯೊಬ್ಬರಿಗೆ ಇಂತಹ ಮೋಸ ಆಗಿರೋದು ನಮ್ಮ ಕರ್ನಾಟಕ ರಾಜ್ಯಕ್ಕೆ ಒಂದು ರೀತಿಯ ಅವಮಾನಕರ ಸಂಗತಿ. ಬೇರೆ ರಾಜ್ಯದಲ್ಲಿ ನೀಡುವಂತಹ ಉಚಿತ ಸೌಲಭ್ಯಗಳ ವಿಷಯವನ್ನು ನಾವಿಲ್ಲಿ ಪರಿಗಣಿಸುವುದು ಬೇಡ . ನಮ್ಮ ರಾಜ್ಯದಲ್ಲಿ ಬಡವರಿಗೆ ಜನಸಾಮಾನ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದರೆ ಸಾಕು ಬಡವರ ತಿರುವು ಕೂಡ ಲಕ್ಷಾಂತರ ರೂಪಾಯಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ.

Leave A Reply

Your email address will not be published.