ರಾಜ್ಯ ಹಾಗೂ ಕೇಂದ್ರ ಸರಕಾರ ಜನರ ಅನುಕೂಲಕ್ಕಾಗಿ ಹತ್ತಾರು ಯೋಜನೆಗಳನ್ನು ರೂಪಿಸಿವೆ ಅವುಗಳಲ್ಲಿ ಉಜ್ವಲ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯ ಮೂಲ ಉದ್ದೇಶ ಪ್ರತಿ ಬಡವರಿಗೆ ಹಾಗೂ ಮಾಧ್ಯಮ ವರ್ಗದ ಜನರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಹಾಗೂ ಸ್ಟೇವ್ ಸಿಗಲಿ ಇದರಿಂದ ಹೋಗೆ ರಹಿತ ಅಡುಗೆ ಮಾಡಲಿ ಅನ್ನೋದಾಗಿದೆ.

ಎಲ್ಪಿಜಿ ಗ್ಯಾಸ್ ಹೊಂದಿರುವವರಿಗೆ ಸರ್ಕಾರದ ಕಡೆಯಿಂದ ಪ್ರತಿ ತಿಂಗಳು ಅವರ ಖಾತೆಗೆ ಇಂತಿಷ್ಟು ಎಂಬುದಾಗಿ ಸಬ್ಸಿಡಿ ಹಣ ಜಮೆ ಆಗುತಿತ್ತು ಆದ್ರೆ ಇದೆ ಸೆಪ್ಟೆಂಬರ್ 1 ರಿಂದ ಸಬ್ಸಿಡಿ ಹಣವನ್ನು ರದ್ದು ಮಾಡಲಾಗಿದೆ ಎಂಬುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಹೌದು ಇದಕ್ಕೆ ಕಾರಣ ಜಾಗತಿಕ ಮಟ್ಟದಲ್ಲಿ ತೈಲ ದರ ಕುಸಿತ ಹಾಗೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರದಲ್ಲಿನ ನಿಯಮಿತ ಏರಿಕೆಯಿಂದಾಗಿ ಎಲ್‌ಪಿಜಿ ದರವು ಮಾರುಕಟ್ಟೆ ದರಕ್ಕೆ ಸಮವಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರಕಾರ ಘೋಷಿಸಿದೆ.

ಇನ್ನು ಎಲ್ಪಿಜಿ ಗ್ಯಾಸ್ ದರ ಹೇಗಿದೆ ಅಂದ್ರೆ 14.2 ಕೆಜಿ ಅಡುಗೆ ಅನಿಲದ ದರವು ಸಿಲಿಂಡರ್‌ಗೆ 594 ರೂ. ಆಗಿದೆ. ಹೀಗಾಗಿ ಖಾತೆಗೆ ನೇರ ವರ್ಗಾವಣೆಯ ರೂಪದಲ್ಲಿ ಇನ್ನು ಮುಂದೆ ಫ‌ಲಾನುಭವಿಗಳಿಗೆ ಸಬ್ಸಿಡಿಯನ್ನು ನೀಡುವ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!