ದರ್ಶನ್ ಹಾಗು ಶಿವಣ್ಣ ಒಟ್ಟಿಗೆ ಸಿನಿಮಾ ಮಾಡ್ತಾರಾ?

0 0

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ವರ್ಷಗಳಿಂದ ಕೇಳಿ ಬರುತ್ತಿದೆ. ಆಗಾಗ ಈ ಬಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಚಿತ್ರಾಭಿಮಾನಿಗಳು ಸಹ ಇಬ್ಬರನ್ನು ಒಟ್ಟಿಗೆ ನೋಡಲು ಕಾತರರಾಗಿದ್ದಾರೆ. ಆದರೆ ಆ ಸಮಯ ಇನ್ನು ಬಂದಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಸ್ಟಾರ್ ನಟರನ್ನು ಒಟ್ಟಿಗೆ ಒಂದೆ ವೇದಿಕೆಯಲ್ಲಿ ನೋಡುವುದೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಇನ್ನು ಇತ್ತೀಚೆಗೆ ಅಷ್ಟೇ ನಡೆದ ಸಂದರ್ಶನ ಒಂದರಲ್ಲಿ ದರ್ಶನ್ ಅವರು ಶಿವರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳುವುದರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಯಾಂಡಲ್ ವುಡ್ ನಲ್ಲಿ ಈಗ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಶಿವಣ್ಣ ಮತ್ತು ಸುದೀಪ್, ಸುದೀಪ್ ಮತ್ತು ಉಪೇಂದ್ರ ಈಗಾಗಲೇ ಸಿನಿಮಾ ಮಾಡಿದ್ದಾರೆ. ಆದರೆ ಇದೀಗ ಡಿ ಬಾಸ್ ದರ್ಶನ್ ಜೊತೆ ಪುನೀತ್ ಮತ್ತು ಶಿವಣ್ಣ ಸಿನಿಮಾ ಮಾಡುತ್ತಾರಾ ಎನ್ನುವ ಸುದ್ದಿ ಬಂದಿದೆ. ಇತ್ತೀಚಿಗಷ್ಟೆ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಪಿ.ಆರ್.ಕೆ ಆಡಿಯೋ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ನೀವು ದರ್ಶನ್ ಜೊತೆ ಯಾವಗ ಸಿನಿಮಾ ಮಾಡುತ್ತೀರ ಎಂದು ಶಿವಣ್ಣ ಮತ್ತು ಪುನೀತ್ ಗೆ ಕೇಳಿದರು. ಇನ್ನು ಅಭಿಮಾನಿಯ ಪ್ರಶ್ನೆಗೆ ಇಬ್ಬರು ನಟ ಉತ್ತರಿಸಿದರು. ಖಂಡಿತ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ. ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವುದು ಗ್ಯಾರೆಂಟಿ. ದರ್ಶನ್ ಅವರನ್ನು ಸಣ್ಣ ಹುಡುಗನಿಂದ ನೋಡುತ್ತಿತ್ತೇನೆ. ಅಂದಿನಿಂದ ತೂಗುದೀಪ ಕುಟುಂಬ ಮತ್ತು ನಮ್ಮ ಕುಟುಂಬ ತುಂಬ ಹತ್ತಿರವಾಗಿದೆ. ನನಗೂ ದರ್ಶನ್ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ. ಅದಷ್ಟು ಬೇಗ ಮಾಡುತ್ತೇವೆ. ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಕಂಠೀರವ ಸ್ಟುಡಿಯೊದಲ್ಲಿ ನಡೆದ ಹೊಸಬರ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಗೆಸ್ಟ್ ಆಗಿ ಆಗಮಿಸಿದ್ದರು. ಈ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಇಬ್ಬರು ಸ್ಟಾರ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಇಬ್ಬರಿಗೂ ಹೊಂದಿಕೆಯಾಗುವಂತ ಕಥೆ ಇರಬೇಕು ಎಂದು ಹೇಳಿದ್ದಾರೆ.

ಇಬ್ಬರು ಒಟ್ಟಿಗೆ ನಟಿಸುವ ಸಮಯ ಬರುತ್ತೆ ಹೇಳಳಿಕ್ಕೆ ಆಗಲ್ಲ ಎಂದು ಶಿವಣ್ಣ ಮಾತು ಪ್ರಾರಂಭಿಸುತ್ತಿದ್ದಂತೆ ದರ್ಶನ್, ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ದೇಶಕರಿಲ್ಲ. ಅಂತಹ ಕಥೆ ಮಾಡಿಕೊಂಡು ಬರಲಿ ಖಂಡಿತಾ ಇಬ್ಬರು ಮಾಡುತ್ತೀವಿ ಎಂದು ಖಡಕ್ ಆಗಿ ಹೇಳಿದರು. ಲಾಂಗ್ ಹಿಡಿಯುವ ಸನ್ನಿವೇಶ ಬಂದರೆ ಶಿವಣ್ಣ ಸೀನಿಯರ್ ಅವರೇ ಹಿಡಿಯುತ್ತಾರೆ ನಾನು ಪಕ್ಕದಲ್ಲಿ ಇರ್ತೀನಿ ಎಂದು ದರ್ಶನ್ ಹೇಳಿದ್ದಾರೆ.

Leave A Reply

Your email address will not be published.