Ultimate magazine theme for WordPress.

ಅರ್ಜುನ್ ಸರ್ಜಾ ಅವರ ಸಿನಿ ಜರ್ನಿ ಹೇಗಿತ್ತು ಗೊತ್ತಾ

0 3

ಅರ್ಜುನ್ ಸರ್ಜಾ ಅವರು ತಮ್ಮ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಪ್ರವೇಶ ಮಾಡಿದರು. ಇವರು ಚಿಕ್ಕವರಿದ್ದಾಗಲೇ ಕರಾಟೆಯನ್ನು ಕಲಿತಿದ್ದರು. ಇವರು ಒಬ್ಬ ಅದ್ಭುತ ಕಲಾವಿದ ಎಂದು ಹೇಳಬಹುದು. ಹಾಗೆಯೇ ಇವರ ಶ್ರೀ ಮಂಜುನಾಥ ಸಿನೆಮಾ ಇವರ ನಟನೆಯಿಂದ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ ಹಾಡುಗಳು ಬಹಳ ಚೆನ್ನಾಗಿ ಇವೆ. ಆದ್ದರಿಂದ ನಾವು ಇಲ್ಲಿ ಅರ್ಜುನ್ ಸರ್ಜಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು 1964ರಲ್ಲಿ ಆಗಸ್ಟ್15ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಮೂಲತಃ ಭಾರತೀಯರಾಗಿದ್ದಾರೆ. ಇವರಿಗೆ ಐಶ್ವರ್ಯ ಮತ್ತು ಅಂಜನಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಕನ್ನಡ ಚಲನಚಿತ್ರ ಶ್ರೀ ಮಂಜುನಾಥದಲ್ಲಿ ನಾಯಕ ನಟನಾಗಿ ಸೌಂದರ್ಯ ಜೊತೆ ನಟಿಸಿದ್ದಾರೆ.

ಇವರು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಆದ್ದರಿಂದ ಇವರು ಪಂಚಭಾಷಾ ನಟ ಎಂದು ಹೆಸರು ಪಡೆದಿದ್ದಾರೆ. ಸಿಂಹದಮರಿ ಸೈನ್ಯ ಎಂಬ ಸಿನೆಮಾದಲ್ಲಿ ಇವರು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ. ಇವರ ಮೊದಲ ಹೆಸರು ಅಶೋಕ್ ಬಾಬು ಆಗಿತ್ತು. ಈ ಸಿನೆಮಾ ನಂತರ ಇವರನ್ನು ಅರ್ಜುನ್ ಸರ್ಜಾ ಎಂದು ಕರೆಯಲಾಯಿತು. ಈ ಸಿನಿಮಾದಲ್ಲಿ ನಟನೆ ಮಾಡುವಾಗ ಇವರಿಗೆ 17ವರ್ಷ ವಯಸ್ಸಾಗಿತ್ತು. ಈ ನಟನೆಯಿಂದಾಗಿ ಇವರಿಗೆ ತೆಲುಗು ಸಿನಿಮಾಗಳಿಗೆ ಕರೆ ಬಂದವು. ದಿನಕ್ಕೆ 7ಶೂಟ್ ಮಾಡುವಷ್ಟು ಬ್ಯುಸಿ ಮನುಷ್ಯರಾದರು.

ನಂತರದಲ್ಲಿ ಇವರು 2ಸಿನಿಮಾಗಳಿಗೆ ತಮಿಳುನಾಡು ಸ್ಟೇಟ್ ಅವಾರ್ಡ್ ನ್ನು ಪಡೆದರು. ಹಾಗೆಯೇ ಕನ್ನಡದಲ್ಲಿ ಇವರು ನಟಿಸಿದ ಪ್ರತಾಪ್, ಅಳಿಮಯ್ಯ, ಪ್ರೇಮಾಗ್ನಿ, ಸ್ನೇಹದ ಕಡಲಲ್ಲಿ, ವಿಸ್ಮಯ ಇನ್ನೂ ಹಲವಾರು ಸಿನೆಮಾಗಳಲ್ಲಿ ನಟನೆ ಮಾಡಿದರು. 2001ರಲ್ಲಿ ಇವರು ನಟಿಸಿದ ಶ್ರೀ ಮಂಜುನಾಥ ಸಿನೆಮಾ ಅದ್ಭುತವಾದ ಯಶಸ್ಸನ್ನು ಕಂಡಿತು. ನಂತರದಲ್ಲಿ ತೆಲುಗು ಚಿತ್ರರಂಗದ ಕಡೆ ಸ್ವಲ್ಪ ಲಕ್ಷ್ಯ ವಹಿಸಿದರು. ತಮ್ಮ ಮಗಳು ಐಶ್ವರ್ಯ ಅವರನ್ನು ಪ್ರೇಮ ಬರಹ ಎಂಬ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಈಗ ಅವರಿಗೆ 58ವರ್ಷ ಈಗಲೂ ಸಹ ಮೊದಲಿನ ದೇಹ ದಾರ್ಢ್ಯತೆಯನ್ನು ಉಳಿಸಿಕೊಂಡಿದ್ದಾರೆ.

Leave A Reply

Your email address will not be published.