ಮೇಷ ರಾಶಿ (Aries) ಮನೆಯ ಕೆಲ ವಸ್ತುಗಳು ಹಾಳಾಗಿ ಕಿರಿಕಿರಿಯಾಗಬಹುದು. ಹೊಸದನ್ನು ಕಲಿಯುವ ಮನಸ್ಥಿತಿಯಿಂದ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ತೆರೆಯುತ್ತದೆ. ಮನರಂಜನೆಗಾಗಿ ಮಾರ್ಗಗಳನ್ನು ಹುಡುಕುವಿರಿ. ಶನಿ ಚಾಲೀಸಾ ಹೇಳಿಕೊಳ್ಳಿ.

ವೃಷಭ ರಾಶಿ ಯಾವುದೋ ವಿಚಾರಕ್ಕೆ ಸಾಕಷ್ಟುಹಣ ಹೂಡಿಕೆ ಮಾಡುತ್ತೀರಿ. ಕೂಡಿಟ್ಟಿರುವ ಹಣ ಎಲ್ಲ ಅಲ್ಲಿ ಹೋಗಿರುವ ಕಾರಣ ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು. ಯಾವುದೇ ಅನಗತ್ಯ ಪ್ರಯಾಣವು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.

ಮಿಥುನ ರಾಶಿ ಹೆತ್ತವರು ಇಲ್ಲವೇ ಅತ್ತೆ ಮಾವನ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಒಂಟಿತನ, ಅಸಹಾಯಕತೆ ಕಾಡಲಿದೆ. ತಿರುಗಾಟಗಳಿಂದ ಧನವ್ಯಯ. ಸಹೋದರರ ಬೆಂಬಲ ಸಿಗುವುದು. ಹೊಸ ವಸ್ತು ಖರೀದಿಸುವಿರಿ. ಶಿವ ಶತನಾಮಾವಳಿ ಜಪಿಸಿ.

ಕಟಕ ರಾಶಿ ಸ್ನೇಹಿತರೊಂದಿಗೆ ಸಂಬಂಧ ಸುಧಾರಿಸುತ್ತದೆ. ವೃಥಾ ಹರಟೆ, ತಿರುಗಾಟದಿಂದ ಸಂತಸ, ನಿಮ್ಮಿಂದ ಅಪರಿಚಿತರಿಗೆ ನೆರವು ದೊರಕುವ ಅವಕಾಶಗಳು ಎದುರಾಗುತ್ತವೆ. ತಾಯಿಗೆ ಅನಾರೋಗ್ಯ ಕಾಡಬಹುದು. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ.

ಸಿಂಹ ರಾಶಿ ಮನೆ ಕೆಲಸಗಳಿಗೆ ಖರ್ಚು ಮಾಡುವಿರಿ. ಆಸ್ತಿ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸುವಿರಿ. ಖರ್ಚು ಹೆಚ್ಚಾದರೂ ಕೆಲಸಗಳು ಮುಂದುವರೆಯುತ್ತಿರುವ ಸಮಾಧಾನವಿರಲಿದೆ. ಕುಟುಂಬದ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ.

ಕನ್ಯಾ ರಾಶಿ ಸ್ವಂತ ವ್ಯಾಪಾರ ಮಾಡುವವರಿಗೆ ಅದ್ಭುತ ಲಾಭವಿರುತ್ತದೆ. ವಿದೇಶದ ಸಂಪರ್ಕ ಹೊಂದಿದ್ದರೆ ಹಣಕಾಸಿನ ಪ್ರಯೋಜನಗಳನ್ನು ಪಡೆಯುವಿರಿ. ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಮಾಡಿ. ತಂದೆ ತಾಯಿಯ ಅಭಿಪ್ರಾಯಗಳನ್ನು ಪ್ರಮುಖ ವಿಚಾರಗಳಲ್ಲಿ ಕೇಳಿ.

ತುಲಾ ರಾಶಿ ಮಾನಸಿಕ ದುಃಖ, ಸಂಕಟ, ಆರೋಗ್ಯ ಸಮಸ್ಯೆ ಉಂಟಾಗಬಹುದು. ದೇವಸ್ಥಾನಗಳಿಗೆ ಹೋಗುವುದು, ಗುರುವಿನ ಭೇಟಿ ಇತ್ಯಾದಿಯಿಂದ ಮನಸ್ಸಿಗೆ ಸಮಾಧಾನ. ತಾಯಿಯ ಮುನಿಸು ಕಠಿಣವೆನಿಸುವುದು. ಮನಸ್ಸು ಬಿಚ್ಚಿ ಮಾತನಾಡಿ.

ವೃಶ್ಚಿಕ ರಾಶಿ ಕೊಂಚ ಸೋಮಾರಿತನ ಕಾಡಬಹುದು. ನಕಾರಾತ್ಮಕ ಪರಿಣಾಮ ಬೀರುವಂತಹ ಪರಿಸ್ಥಿತಿಯನ್ನು ಎದುರಿಸದಿರಲು ಸಿದ್ಧರಾಗಿ. ಸರಿತಪ್ಪುಗಳನ್ನು ಪರಾಮರ್ಶಿಸಿ ಮುಂದುವರಿಯಿರಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ.

ಧನುಸ್ಸು ರಾಶಿ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೆಲಸ ಸರಾಗವಾಗಿ ನಡೆದು ಹೋಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ನಿರೀಕ್ಷೆಗೆ ತಕ್ಕ ಲಾಭ ಸಿಗದಿದ್ದರೂ ಸಮಾಧಾನವಿರುತ್ತದೆ. ಸಾಲ ಕೊಂಚ ಮಟ್ಟಿಗೆ ತೀರಲಿದೆ. ಆದಷ್ಟು ಆರೋಗ್ಯದ ಬಗ್ಗೆ ಸ್ವಲ್ಪ ಗಮನವನ್ನು ಹರಿಸಿ ನಿಮ್ಮ ಆರೋಗ್ಯ ಹದೆಗಡುವ ಸಾಧ್ಯತೆ ಇದೆ.

ಮಕರ ರಾಶಿ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತೀರಿ. ನಿಮ್ಮೆಲ್ಲ ಯೋಜನೆಗಳನ್ನು ಸಫಲಗೊಳಿಸುತ್ತೀರಿ. ಹಿರಿಯರ ಸಲಹೆಗಳನ್ನು ಪರಿಗಣಿಸಿ. ಅವಿವಾಹಿತರಿಗೆ ಕಂಕಣ ಬಲ. ದಾಂಪತ್ಯದಲ್ಲಿ ಹೆಚ್ಚುವ ಸಂತಸ. ಎಷ್ಟು ದಿನ ಅಂದುಕೊಂಡಂತಹ ಸ್ನೇಹಿತರೊಂದಿಗೆ ಪ್ರವಾಸ ಸಾಧ್ಯತೆಯೋಗಲಿದೆ.

ಕುಂಭ ರಾಶಿ ಜೀವನಶೈಲಿಯಲ್ಲಿ ಬದಲಾವಣೆ ಕಾಣಲಿದ್ದೀರಿ. ಇದರಿಂದ ಹೆಚ್ಚು ಕಿರಿಕಿರಿ ಉಂಟಾಗಬಹುದು. ಹೊಸಬರ ಭೇಟಿಯಿಂದ ಸಂತಸವೂ, ಮುಜುಗರವೂ ಎದುರಾಗುವುದು. ಸುಸ್ತು, ತಲೆನೋವು ಕಾಡುವುದು. ಹಿರಿಯರ ಸಹಾಯದಿಂದ ಹೊಸ ವ್ಯಾಪಾರವನ್ನು ಶುರು ಮಾಡುತ್ತೀರಾ.

ಮೀನ ರಾಶಿ ನಿಮ್ಮ ಮಕ್ಕಳ ಕಡೆಗೆ ಭಾವನಾತ್ಮಕ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಿಸುವ ಅಗತ್ಯವಿದೆ. ಮಕ್ಕಳಲ್ಲಿ ಅಭದ್ರತೆ ಕಾಡಬಹುದು. ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ಆದಷ್ಟು ಹಿರಿಯರ ಸಲಹೆದಿಂದ ನಿಮ್ಮ ಮುಂದೆ ನಿರ್ಧಾರಗಳನ್ನು ಪಡೆದುಕೊಳ್ಳಿ.

By

Leave a Reply

Your email address will not be published. Required fields are marked *