Daily Astrology on Kannada:ಶಿವನ ಪ್ರೀತಿಯ ದೃಷ್ಟಿಯನ್ನು ಅಪಾರವಾಗಿ ಪಡೆದಂತವರು ಹೇಗಿರುತ್ತಾರೆ ಎನ್ನುವುದು ನಿಮಗೆ ತಿಳಿದಿದಿಯೇ? ತಿಳಿದಿಲ್ಲವಾದರೆ ಈಗ ತಿಳಿಯಿರಿ. ಪ್ರಕೃತಿಯು ಬಹಳ ಅನಾದಿಕಾಲದಿಂದಲೂ ಇರುವಂತದ್ದು. ಪಂಚಭೂಗಳಿಂದ ಕೂಡಿದ ಈ ಸೃಷ್ಟಿಯನ್ನು ಬ್ರಹ್ಮನು ತನ್ನ ದಿವ್ಯ ನೇತ್ರಗಳಿಂದ ಸೃಷ್ಟಿಸಿದ್ದರೆ, ವಿಷ್ಣುವು ತನ್ನ ಯೋಚನೆಗಳಿಂದ ಬ್ರಹ್ಮಾಂಡವನ್ನು ನೋಡುತ್ತ ಇಲ್ಲಿಯ ಆಗುಹೋಗುಗಳನ್ನು ನಿಯಂತ್ರಿಸುತ್ತಾನೆ. ಇವರಿಬ್ಬರಿಗೂ ಮೂಲನಾದಂತವನು ಪರಶಿವನಾಗಿದ್ದಾನೆ. ಹಾಗಾಗಿ ಹರನಿಗೆ ಅಪಾರ ಶಕ್ತಿ ಸಹ ಇರುತ್ತದೆ. ಹರ ಮುನಿದರೆ ಜಗತ್ತು ಉಳಿಯಲಾರದು.
ಬ್ರಹ್ಮ ಸೃಷ್ಟಿಸಿದ ಜೀವಿಗಳ ಸಂರಕ್ಷಣೆ ಮಾಡುತ್ತ, ಆ ಜೀವಿಗಳ ಹಸಿವು ನೀಗಿಸುವವನು ಮಹಾದೇವನಾಗಿದ್ದಾನೆ. ಮಹಾದೇವ ತನ್ನ ಪ್ರೀತಿಯಿಂದಲೇ ಜಗತ್ತನ್ನು ಕಾಯುತ್ತಾನೆ. ಹಾಗೆಯೇ ಪರಶಿವನ ಕೋಪವು ಸಹ ಅಷ್ಟೇ ಶಕ್ತಿಯುತವಾದಂತದ್ದು. ಆ ಕೋಪಾಗ್ನಿಗೆ ಬ್ರಹ್ಮಾಂಡವನ್ನೇ ಸುಟ್ಟು ಬಿಡುವಂತಹ ತಾಕತ್ತು ಇದೆ. ಶಿವನು ಕೋಪಗೊಂಡು ತನ್ನ ಮೂರನೇ ಕಣ್ಣನ್ನು ತೆರೆದನೆಂದರೆ ಪ್ರಪಂಚವು ಉಳಿಯುವುದಿಲ್ಲ. ಇಲ್ಲಿ ಯಾವ ಜೀವಿಗಳು ಸಹ ಅವನ ತಾಂಡವದ ಮುಂದೆ ನಿಲ್ಲಲಾರವು. ಅದೆಷ್ಟೋ ದೇವಾನುದೇವತೆಗಳಿಗೂ ಅವನ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆದರೆ ಶಿವನ ಮೂರನೇ ಕಣ್ಣು ಕೇವಲ ಕೋಪಕ್ಕೆ ಮಾತ್ರ ತೆರೆಯೋದಿಲ್ಲ. ಬದಲಾಗಿ ಪ್ರೀತಿಯಿಂದ ಅವನನ್ನು ಧ್ಯಾನಿಸುವವರನ್ನು ಅವನು ಮೂರನೇ ಕಣ್ಣಿನಿಂದ ನೋಡುತ್ತಾನೆ. ಅಂತಹ ಅಪಾರ ಶಕ್ತಿಯುಳ್ಳ ಕಣ್ಣಿನಷ್ಟೇ ಶಕ್ತಿಯನ್ನು ಹೊಂದಿರುವ ಎರಡು ರಾಶಿಗಳು ಯಾವವು ಗೊತ್ತಿದೆಯೇ? ಈ ಎರಡು ರಾಶಿಗಳಲ್ಲಿ ಜನಿಸಿದಂತವರು ಜನ್ಮತಃ ಶಿವ ಪ್ರೀತಿಗೆ ಪಾತ್ರರಾಗುತ್ತಾರೆ. ಇವರಿಗೆ ಶಿವನ ಶಕ್ತಿಗಳು ಯೋಚನೆಗಳಲ್ಲಿ ಬಂದಿರುತ್ತವೆ. ಇವರಿಗೆ ಅದರ ಅರಿವು ಇರುವುದಿಲ್ಲ.
ಅಂತಹ ಅದೃಷ್ಟ ರಾಶಿಗಳಲ್ಲಿ ಮೊದಲನೆಯದು ತುಲಾ ರಾಶಿ. ಈ ರಾಶಿಯಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿರುತ್ತಾರೆ. ತುಲಾ ರಾಶಿಯಲ್ಲಿ ಜನಿಸಿದವರು ಬಹು ಬೇಗನೇ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಾರೆ. ಇವರಿಗೆ ಶಿವನ ಮೂರನೇ ಕಣ್ಣಿನಂತಹ ಶಕ್ತಿಯು ಬಂದಿರುವುದರಿಂದ ಇವರನ್ನು ಯಾರು ಸಹ ಹಿಂದಿಕ್ಕಲಾರರು. ಎಲ್ಲ ಕೆಲಸಗಳಲ್ಲಿಯೂ ಇವರದೇ ಮೇಲುಗೈ ಇರುತ್ತದೆ. ಇವರು ಶಿವನ ಕೃಪಾ ಕೃಟಾಕ್ಷದಿಂದ ಚೆನ್ನಾಗಿ ಬದುಕುತ್ತಾರೆ. ಇವರನ್ನು ದುಷ್ಟ ಶಕ್ತಿಗಳು ಬಾಧಿಸುವುದಿಲ್ಲ.
ಇದನ್ನೂ ಓದಿ..ಕನ್ಯಾ ರಾಶಿಯವರ ಪಾಲಿಗೆ ಈ ವರ್ಷದ ಯುಗಾದಿ ಹೇಗಿರತ್ತೆ ತಿಳಿದುಕೊಳ್ಳಿ
ತುಲಾ ರಾಶಿಯಲ್ಲಿ ಜನಿಸಿದಂತವರು ಕಷ್ಟಗಳಿಗೆ ಎಂದು ಹೆದರುವುದಿಲ್ಲ. ಇವರು ಬಹಳ ಧೈರ್ಯಶಾಲಿಗಳಾಗಿರುತ್ತಾರೆ. ತಮಗೆ ನೋವು ಮಾಡಿದವರಿಗೆ ಇವರು ತಕ್ಕ ಪಾಠವನ್ನು ಕಲಿಸಿಯೆ ಬರುತ್ತಾರೆ. ಇವರು ಬಹಳ ನೇರ ದೃಷ್ಟಿಯವರಾಗಿದ್ದು, ತಮಗೆ ಬೇಕಾಗಿರುವುದನ್ನು ಪಡೆಯಲು ಕಷ್ಟಪಡುತ್ತಾರೆ. ಹಾಗೂ ಕಷ್ಟಪಟ್ಟಾದರೂ ತಾವು ಇಚ್ಛಿಸಿದ್ದನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಯಾರೂ ಸಹ ಮೋಸ ಮಾಡಲು ಸಾಧ್ಯವೇ ಇಲ್ಲ. ಇವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ದೊರೆಯುತ್ತವೆ. ಏಕೆಂದರೆ ಇವರಿಗೆ ಶಿವನ ಅನುಗ್ರಹವು ಬಹಳ ಗಟ್ಟಿಯಾಗಿ ಇರುತ್ತದೆ.
ಅದೇ ರೀತಿ ಶಿವನ ಮೂರನೇ ಕಣ್ಣಿನ ಕೃಪಾಕಟ್ಟಾಕ್ಷ ಇರುವಂತಹ ಮತ್ತೊಂದು ರಾಶಿಯೆಂದರೆ ಕುಂಭರಾಶಿ. ಕುಂಭರಾಶಿಯು ಸಹ ಬಹಳ ಅದೃಷ್ಟದ ರಾಶಿಯಾಗಿದೆ. ಇದರಲ್ಲಿ ಜನಿಸಿದವರು ಪುಣ್ಯವಂತರು. ಏಕೆಂದರೆ ಕುಂಭರಾಶಿಯಲ್ಲಿ ಜನಿಸಿದವರ ಮೇಲೆಯೂ ಸಹ ಶಿವನಿಗೆ ಪ್ರೀತಿ, ಮಮತೆಗಳು ಇರುತ್ತದೆ. ನೇರವಾಗಿ ಶಿವನ ಮೂರನೇ ಕಣ್ಣಿನ ದೃಷ್ಟಿಯೂ ಈ ರಾಶಿಯ ಮೇಲೆ ಇರುವುದರಿಂದ, ಕುಂಭರಾಶಿಯವರ ಸುತ್ತಲೂ ಯಾವುದೇ ಕೆಟ್ಟ ಶಕ್ತಿಗಳು ಬರುವುದಿಲ್ಲ.
ಇದನ್ನೂ ಓದಿ..ಯುಗಾದಿಯಿಂದ ತುಲಾ ರಾಶಿಯವರ ಹೊಸಜೀವನ ಆರಂಭ, ಹೇಗಿರತ್ತೆ ಗೊತ್ತಾ ಇವರ ಲೈಫ್
ಹಾಗೆ ಅವರು ಯಾವುದೇ ಕೆಲಸ ಮಾಡಬೇಕು ಎಂದುಕೊಂಡರು ಮುನ್ನುಗ್ಗಲು ಪರಶಿವನು ಸಹಾಯ ಮಾಡುತ್ತಾನೆ. ಇವರು ಏನು ಅಂದುಕೊಂಡರು ಅದು ಶೀಘ್ರವಾಗಿ ನೇರವೇರುತ್ತದೆ. ಕುಂಭರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ಏನನ್ನು ಸಾಧಿಸಬೇಕು ಎಂದುಕೊಂಡಿರುತ್ತಾರೋ ಅದನ್ನು ಸಾಧಿಸುವ ಛಲವು ಪರಶಿವನ ಅನುಗ್ರಹದಿಂದ ಅವರಿಗೆ ದೊರಕಿರುತ್ತದೆ. ಇವರಿಗೆ ಅಚಾನಕ್ ಆಗಿ ಲಕ್ಷ್ಮೀ ಸಹ ಪ್ರಾಪ್ತವಾಗುತ್ತದೆ. ಅಲ್ಲದೆ ಇವರು ಜನರ ಮನ್ನಣೆಗೂ ಪಾತ್ರರಾಗುತ್ತಾರೆ. ಹಾಗಾಗಿ ಕುಂಭರಾಶಿಯಲ್ಲಿ ಜನಿಸಿದವರು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ.