ನ್ಯಾಯಾಂಗದಲ್ಲಿ ನಮಗೆ ಗೊತ್ತಿರದ ಹಲವಾರು ವಿಷಯಗಳು ಅಡಕವಾಗಿರುತ್ತವೆ. ಅದರಲ್ಲಿ ಒಂದು ಈ ಪದ್ಧತಿಯು ಆಗಿದೆ ಕೋರ್ಟನಲ್ಲಿ ಅಪರಾಧಿಯ ವಿರುದ್ಧ ವಾದ ವಿವಾದ ಇದ್ದಮೇಲೆ ನ್ಯಾಯಾಧೀಶರು ಶಿಕ್ಷೆಯ ತೀರ್ಪನ್ನು ಪಟ್ಟಿ ಮಾಡುತ್ತಾರೆ. ಆದರೆ ಆ ಶಿಕ್ಷೆಯ ಗಲ್ಲುಶಿಕ್ಷೆ ಆಗಿದ್ದರೆ ಅಪರಾಧಿಯನ್ನು ಗಲ್ಲಿಗೇರಿಸಲು ಹೇಳಿದ ನ್ಯಾಯಾಧೀಶರು ವ್ಯಕ್ತಿಯನ್ನು ಗಲ್ಲಿಗೇರಿಸಲು ಹೇಳುವ ನ್ಯಾಯಾಧೀಶರು ವ್ಯಕ್ತಿಯ ಪೇಪರ್ ಗಳ ಮೇಲೆ ತಮ್ಮ ಸಹಿಯನ್ನು ಮಾಡಿ ಪೆನ್ನಿನ ನಿಬ್ಬನ್ನು ಮುರಿಯುತ್ತಾರೆ. ಅದು ಯಾಕೆ ಗೊತ್ತಾ? ಅದನ್ನ ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.
ಒಬ್ಬ ಅಪರಾಧಿಕ ಗಲ್ಲುಶಿಕ್ಷೆಯನ್ನು ಪ್ರಕಟಿಸಿ ಪೇಪರ್ ಮೇಲೆ ಸಹಿಯನ್ನು ಮಾಡಿದ ಮೇಲೆ ಪೆನ್ನಿನ ನಿಬ್ಬನ್ನು ಮುರಿದು ಹಾಕುವ ವಿಧಾನ ಈಗಿನ ಕಾಲದ್ದೇನೂ ಅಲ್ಲ. ಇಂದು ವಿಧಾನ ಹಿಂದೆ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಇದರ ಹಿಂದೆ ಯಾವುದೇ ರೀತಿಯ ವೈಜ್ಞಾನಿಕ ಕಾರಣಗಳು ಸಹ ಸಿಗುವುದಿಲ್ಲ.
ಗಲ್ಲುಶಿಕ್ಷೆಯಿಂದ ಒಬ್ಬ ವ್ಯಕ್ತಿಯ ಜೀವನಕ್ಕೆ ಪೂರ್ಣವಿರಾಮ ಬಿದ್ದಂತೆ. ಅದಕ್ಕೆ ಕಾರಣ ನ್ಯಾಯಾಧೀಶರ ಒಂದು ಸಹಿ. ಆ ಸಹಿ ಮಾಡುವುದು ಒಂದು ಪೆನ್ನಿನಿಂದ ಹಾಗಾಗಿ ಒಂದು ಪೆನ್ನು ನೋಡಿದಾಗ ಪ್ರತಿಬಾರಿಯೂ ಒಬ್ಬ ವ್ಯಕ್ತಿಯ ಪ್ರಾಣವನ್ನು ತಾನು ತೆಗೆದೆನಲ್ಲ ಎನ್ನುವ ಗಿಲ್ಟಿ ಫೀಲಿಂಗ್ ಆ ಒಬ್ಬ ನ್ಯಾಯಾಧೀಶರಿಗೆ ಬಾರದೆ ಇರಲು ಹಾಗೂ ಆ ಒಂದು ಗಿಲ್ಟಿ ಫೀಲಿಂಗ್ ಆ ಒಬ್ಬ ನ್ಯಾಯಾಧೀಶರಿಗೆ ಇರಲಿ ಎಂದೂ. ಆ ಪೆನ್ನನ್ನು ಮುರಿದ ಹಾಕುತ್ತಾರೆ.
ಒಂದು ಬಾರಿ ಅತ್ಯುನ್ನತ ಕೋರ್ಟ್ ನಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿದ ನಂತರ ಅದನ್ನು ತಡೆಯುವ ಅಧಿಕಾರ ಬೇರೆ ಯಾವ ಗೊರಟಿನ ನ್ಯಾಯಾಧೀಶರಿಗೂ ಸಹ ಇರುವುದಿಲ್ಲ. ಒಂದು ಬಾರಿ ತೀರ್ಪನ್ನು ಕೊಟ್ಟು ಪೇಪರ್ ಗಳ ಮೇಲೆ ಸಹಿ ಮಾಡಿದ ಮೇಲೆ ಮತ್ತೆ ತನ್ನ ಮನಸ್ಸು ಬದಲಾಗಬಹುದು ಎನ್ನುವ ಉದ್ದೇಶದಿಂದ ಎರಡನೇ ಆಲೋಚನೆ ಬರಬಾರದು ಎನ್ನುವ ಉದ್ದೇಶಕ್ಕೆ ನ್ಯಾಯಾಧೀಶರು ಪೆನ್ನಿನ ನಿಬ್ಬನ್ನು ಮುರಿಯುತ್ತಾರೆ ಎಂದು ಹೇಳಲಾಗುತ್ತದೆ.
ಒಬ್ಬ ವ್ಯಕ್ತಿಗೆ ಗಲ್ಲುಶಿಕ್ಷೆಯನ್ನು ಕೊಟ್ಟಾಗ ನ್ಯಾಯಾಧೀಶರು ಸಹ ತುಂಬಾ ನೋವು ಅನುಭವಿಸುತ್ತಾರೆ. ಆಗ ನ್ಯಾಯಾಧೀಶರು ತಾವು ಸಹಿ ಮಾಡಿದ ಪೆನ್ನನ್ನು ಮುರಿಯುವುದರ ಮೂಲಕ ತಮಗಾದ ನೋವನ್ನು ತಕ್ಕಮಟ್ಟಿಗೆ ಹೊರಹಾಕುತ್ತಾರೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ನ್ಯಾಯಾಧೀಶರ ತೀರ್ಪನ್ನು ನೀಡಿದ ನಂತರ ಪೆನ್ನಿನ ನಿಬ್ಬನ್ನು ಮುರಿಯುವುದರ ಹಿಂದೆ ಇಷ್ಟೆಲ್ಲಾ ವಿಷಯಗಳು ಅಡಗಿವೆ.