ಹಳ್ಳಿ ಜನರಲ್ಲಿ ಒಂದು ಮನಸ್ಥಿತಿ ಬೆಳೆದುಕೊಂಡಿದೆ. ಅವರಿಗೆ ಮಕ್ಕಳು ವ್ಯವಸಾಯ ಮಾಡುವುದು ಬೇಕಾಗಿಲ್ಲ ಬೆಂಗಳೂರಿನಲ್ಲಿ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳಬೇಕು. ಆದರೆ ಬೆಂಗಳೂರಿಗೆ ಕೆಲಸ ಆರಿಸಿಕೊಂಡು ಬರುವಂತಹ ಮಕ್ಕಳ ಪರಿಸ್ಥಿತಿ ಹೇಳತೀರದು. ತಂದೆ ತಾಯಿ, ಹುಟ್ಟು ಬೆಳೆದ ಊರಿನಿಂದಲೂ ದೂರವಿದ್ದು ಬೆಳಗ್ಗೆ ಎದ್ದು ಹಚ್ಚ ಹಸಿರಿನ ವಾತಾವರಣ ನೋಡುವುದು ಬಿಟ್ಟು ನಗರದಲ್ಲಿನ ಧೂಳು, ಕರ್ಕಶ ಶಬ್ದ ಇವುಗಳನ್ನು ಅನುಭವಿಸಬೇಕು. ತಾಯಿ ಮಾಡೋ ರುಚಿಕರವಾದ ಹಾಗೂ ಆರೋಗ್ಯಕರವಾದ ಊಟವನ್ನು ತಿನ್ನುವ ಬದಲು ರಸ್ತೆಯ ಪಕ್ಕದಲ್ಲಿ ಫಾಮೈಲ್ ಊಟ ಆತುರಾತುರವಾಗಿ ಮಾಡುವ ಗೊಜ್ಜನ್ನು ತಿಂದು ಬೊಜ್ಜು ಬೆಳೆಸಿಕೊಂಡು, ಕೊನೆಗೆ ಒಂದು ದಿನ ನನ್ನ ಜೀವನ ಇದೇ ರೀತಿ ಇಷ್ಟೇನಾ ಎಂದೆನಿಸಿ ಬಿಡುತ್ತದೆ ಆದರೆ ಇಲ್ಲಿ ಒಬ್ಬರು ಬೆಂಗಳೂರಿನಲ್ಲಿರುವ ಕೆಲಸವನ್ನು ತಿರಸ್ಕರಿಸಿ ಹಳ್ಳಿಯಲ್ಲೇ ಇದ್ದುಕೊಂಡು ಒಂದು ಕಂಪನಿಯ ಸಿಇಒ ಗಳಿಸುವಷ್ಟು ಹಣವನ್ನು ಗಳಿಸುತ್ತಿದ್ದಾರೆ ಅದು ಹಳ್ಳಿಯಲ್ಲಿದ್ದುಕೊಂಡು ಆರೋಗ್ಯದಿಂದ.

ಇವರ ಹೆಸರು ಸತೀಶ್. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರ ನವರು. ಡಬಲ್ ಡಿಗ್ರಿ ಮಾಡಿರುವಂತಹ ಸತೀಶ್ ಅವರಿಗೆ ಬೆಂಗಳೂರಿನಲ್ಲಿ ಒಂದು ಕೆಲಸ ಸಿಕ್ಕಿತು ಆದರೆ ಅವರು ಆ ಕೆಲಸಕ್ಕಾಗಿ 16 ಲಕ್ಷ ಲಂಚವನ್ನು ಕೊಡಬೇಕಾಗಿತ್ತು. ಕೆಲಸಕ್ಕಾಗಿ ಸಾಲ ಮಾಡಿ ಆದರೂ ಲಂಚವನ್ನು ಕೊಟ್ಟು ಮಗನನ್ನು ಕೆಲಸಕ್ಕೆ ಸೇರಿಸಲು ಸತೀಶ್ ಅವರ ತಂದೆ ಸಿದ್ಧರಿದ್ದರೂ. ಆದರೆ ತನಗೆ ಆ ಕೆಲಸ ಬೇಡವೇ ಬೇಡ ಎಂದು ನಿರಾಕರಿಸಿದ ಸತೀಶ್ ಅವರು ತನಗೆ ಇದ್ದ ಒಂದುವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರೂ. ಸತೀಶ್ ಅವರ ತಂದೆ 15 ವರ್ಷಗಳಿಂದ ತರಕಾರಿಯನ್ನು ಬೆಳೆಯುತ್ತಿದ್ದರು. ಆದರೆ ಇಳುವರಿಯ ಮಟ್ಟ ಕಳಪೆ ಆಗಿದ್ದರಿಂದ ಅಷ್ಟೊಂದು ಏನು ಆದಾಯ ಬರುತ್ತಿರಲಿಲ್ಲ. ವ್ಯವಸಾಯಕ್ಕೆ ಇಳಿದ ಸತೀಶ್ ಅವರು ಒಂದಷ್ಟು ದಿನ ಬೆಳೆ ಹಾಗೂ ಮಾರುಕಟ್ಟೆ ಕುರಿತಾಗಿ ರಿಸರ್ಚ್ ಮಾಡಿ ಯಾವ ಬೆಳೆಯನ್ನು ಬೆಳೆಯಬಹುದು ಹಾಗೂ ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುವುದನ್ನು ತಿಳಿದುಕೊಂಡರು. ಅದರಂತೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವಂತಹ ಹಾಗಲಕಾಯಿಯನ್ನು ಬೆಳೆಯಲು ತೀರ್ಮಾನ ಮಾಡಿ ತಮ್ಮ ಒಂದುವರೆ ಎಕರೆ ಜಮೀನನ್ನು ಭಾಗವಾಗಿ ಮಾಡಿಕೊಂಡು ವರ್ಷವಿಡಿ ಬೆಳೆಗಳನ್ನು ಬೆಳೆಯಲು ಮುಂದಾದರು. ಕೊನೆಗೂ ಹಾಗಲಕಾಯಿ ಬೆಳೆಯಲ್ಲಿ ಯಶಸ್ಸನ್ನು ಕಂಡಿರುವ ಸತೀಶ್ ಅವರು ಋತುವಿನಲ್ಲಿ 50 ಕ್ವಿಂಟಾಲ್ ಹಾಗಲಕಾಯಿಯನ್ನು ಬೆಳೆಯುತ್ತಾರೆ. ಕಳೆದ ವರ್ಷ 48 ಸಾವಿರಕ್ಕೆ ಒಂದು ಕ್ವಿಂಟಲ್ ನಂತೆ ಮಾರಾಟ ಮಾಡಿದ್ದರು. ಋತುಗಳಲ್ಲಿ ದಿನಕ್ಕೆ 35000 ರೂಪಾಯಿಯಂತೆ ಹಣವನ್ನು ಗಳಿಸುತ್ತಿದ್ದಾರೆ ಸತೀಶ್ ಅವರು. ಹಾಗಲಕಾಯಿ ಹಲವಾರು ರೋಗಗಳಿಗೆ ರಾಮಬಾಣ ಆಗಿರುವುದರಿಂದ ಇತ್ತೀಚೆಗೆ ಜನರು ಹೆಚ್ಚೆಚ್ಚು ಹಾಗಲಕಾಯಿಯನ್ನು ಬಳಸುತ್ತಿದ್ದಾರೆ ಹಾಗೂ ಹಾಗಲಕಾಯಿಯನ್ನು ಔಷಧಿ ರೂಪದಲ್ಲಿ ಸಹ ಬಳಸುತ್ತಾರೆ.

ಸಸಿಗಳಿಗೆ ಹೆಚ್ಚು ಗಮನ ನೀಡುವ ಸತೀಶ್ ಅವರು ಸಸಿಗಳನ್ನು ಮಗುವಿನಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಗುಣಮಟ್ಟದ ಇಳುವರಿ ಸಿಗುತ್ತದೆ ವ್ಯವಸಾಯದಿಂದ ಉತ್ತಮ ಹಾಗೂ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆತನ ಪೋಷಕರನ್ನು ಸಹ ನೋಡಿಕೊಳ್ಳುತ್ತಾ ಆರ್ಥಿಕವಾಗಿ ಸದೃಢರಾಗಿದ್ದು ಪ್ರಕೃತಿಯ ಮಡಿಲಲ್ಲಿ ದೊಡ್ಡ ಬಂಗಲೆಯನ್ನು ಕಟ್ಟಲು ಸಹ ಪ್ಲಾನ್ ಮಾಡುತ್ತಿದ್ದಾರೆ. ವ್ಯವಸಾಯವನ್ನು ನೆಚ್ಚಿಕೊಂಡ ಸತೀಶ್ ಅವರೇ ಶ್ರದ್ಧೆ ಎಲ್ಲರಿಗೂ ಮಾದರಿಯಾಗಬೇಕಾಗಿದೆ.

By

Leave a Reply

Your email address will not be published. Required fields are marked *