ಯಾವುದೇ ಒಬ್ಬ ವ್ಯಕ್ತಿ ಸಾಮಾಜಿಕ ಕೆಲಸಕ್ಕೆ ಕೈ ಹಾಕಿದ್ರೆ ಅದು ಸುಲಭವಾಗಿ ಯಶಸ್ಸು ಕಾಣೋದಿಲ್ಲ, ಆದ್ರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಸ್ವಾರ್ಥವಿಲ್ಲದೆ ಮಾಡಿದಂತ ಕೆಲಸಕ್ಕೆ ಇಂದು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೌದು ಅಷ್ಟಕ್ಕೂ ಇವರು ಮಾಡಿರುವಂತ ಕೆಲಸವೇನು ಹಾಗು ಇದರ ಹಿಂದಿನ ಉದ್ದೇಶವೇನು ಅನ್ನೋದನ್ನ ನೀವು ತಿಳಿದರೆ ನಿಜಕ್ಕೂ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿರ.

ಹೌದು ಹೆಸರು ಕಾಮೇ ಗೌಡ ಎಂಬುದಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು, ತಂಡೆ ನೀಲಿ ವೆಂಕಟಗೌಡ. ತಾಯಿ ರಾಜಮ್ಮಅವರ ಪುತ್ರ, ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ಪರಿಸರ ಪ್ರೇಮಿಯಾಗಿ ಬೇರೆಯವರಿಗೂ ಮಾದರಿಯಾಗಿದ್ದಾರೆ. ವಯಸ್ಸು 82 ಆದ್ರೂ ವೃತ್ತಿಯಲ್ಲಿ ಕುರಿಗಾಹಿ ಪ್ರತಿದಿನ ಬೆಟ್ಟ ಗುಡ್ಡ ಕಾಡಿನಲ್ಲಿ ಓಡಾಡುವ ಇವರು ತನ್ನ ಕುರಿಗಳಿಗಾಗಿ ಹಾಗು ಬೆಟ್ಟ ಗುಡ್ಡದಲ್ಲಿ ಇರುವಂತ ಪ್ರಾಣಿ ಪಕ್ಷಿ ಮುಂತಾದವುಗಳ ದಾಹ ನೀಗಿಸಲು ೧೬ ಕೆರೆಗಳನ್ನು ಚಿಕ್ಕ ಚಿಕ್ಕದಾಗಿ ಸ್ವತಃ ತಾವೇ ನಿರ್ಮಿಸಿದ್ದಾರೆ.

ಇವರು ಮೊದಲ ಬಾರಿಗೆ ಕೆರೆಯನ್ನು ನಿರ್ಮಿಸಿದಾಗ ಹಳ್ಳಿಯ ಜನರು ಇವರನ್ನು ಗೇಲಿ ಮಾಡಿ ನಗುತ್ತಿದ್ದರು ಕೆರೆ ನಿರ್ಮಿಸುತ್ತಾನಂತೆ ಎಂಬುದಾಗಿ ಇದಕ್ಕೆಲ್ಲ ಲೆಕ್ಕಿಸದ ಕಾಮೇಗೌಡ್ರು ತಮ್ಮ ಪ್ರಯತ್ನಕ್ಕೆ ಮುಂದಾದರು. ಅದೇನೇ ಇರಲಿ ಇವತ್ತು ಇವರು ಮಾಡಿರುವಂತ ಕೆಲಸವನ್ನು ಮೆಚ್ಚಿ ಹಲವು ಪ್ರಶಸ್ತಿಗಳು ಬಂದಿವೆ ಹಾಗು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಇವರನ್ನು ಪ್ರಧಾನಿ ಮೋದಿಜಿಯವರು ಹೊಗಳಿದ್ದಾರೆ. ಅಷ್ಟೇ ಅಲ್ದೆ ಹಳ್ಳಿಯಿಂದ ದಿಲ್ಲಿಯವರೆಗೂ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಲಾಗುತ್ತಿದೆ. ೧೬ ಕೆರೆ ಕಟ್ಟೆಗಳನ್ನ ನಿರ್ಮಿಸೋದು ಅಷ್ಟೇ ಅಲ್ದೆ ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕೆಂದು ಬೆಟ್ಟದ ಸುತ್ತ ೨ ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಿನಲ್ಲಿ ಸುತ್ತಾಡುತ್ತಾರೆ. ಇನ್ನು ಇವರು ಇತರರಿಗೂ ಪರಿಸರ ಕಾಳಜಿಯ ಬಗ್ಗೆ ತಿಳಿಸುತ್ತಾರೆ.

ಇವರು ಈ ರೀತಿಯ ಕೆರೆ ಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದು ಯಾಕೆ ಗೊತ್ತೇ? ತಾನು ಕುರಿಗಾಹಿ ಕುರಿಗಳನ್ನು ಕಾಯಲು ಬೆಟ್ಟಕ್ಕೆ ಹೋಗಿದ್ದಾಗ ಅಲ್ಲಿ ಬಿಸಿಲಿನ ತಾಪಕ್ಕೆ ಕೆರೆ ಕಟ್ಟೆಗಳು ಇಲ್ಲದೆ ನೀರು ಬತ್ತಿ ಹೋಗಿದ್ದವು ನೀರಿನ ದಾಹಕ್ಕೆ ತತ್ತರವಾಗಿದ್ದರು ಇದನ್ನು ಅರಿತ ಕಾಮೇಗೌಡರು ಬೆಟ್ಟವನ್ನು ಸದಾ ಹಸಿರಾಗಿ ಇಡಬೇಕು ಹಾಗು ಇಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿದರೆ ನೀರಿನ ಅಭಾವ ಇರೋದಿಲ್ಲ ಅನ್ನೋ ಯೋಜನೆಯನ್ನು ರೂಪಿಸಿಕೊಂಡು ಇಂದಿಗೂ ಕೂಡ ಪರಿಸರ ಕಾಳಜಿಯನ್ನು ವಹಿಸುತ್ತಿದ್ದಾರೆ. ನಿಜಕ್ಕೂ ಇವರ ಕಾಟಕ್ಕೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್.

By

Leave a Reply

Your email address will not be published. Required fields are marked *