ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್, ಸತತ ಎರಡನೇ ದಿನವೂ ಬೆಲೆ ಇಳಿಕೆ ಎಷ್ಟಿದೆ ನೋಡಿ

0 5

ಬಂಗಾರ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಮಹಿಳೆಯರಿಗಂತೂ ಬಂಗಾರವೆಂದರೆ ಮೋಹವಿರುತ್ತದೆ. ಬಂಗಾರದ ಬೆಲೆ ವರ್ಷದಿಂದ ವರ್ಷಕ್ಕೆ ಏರುತ್ತಲೆ ಇರುತ್ತದೆ. ಬಂಗಾರದ ಬೆಲೆ ಯಾವಾಗ ಕಡಿಮೆಯಾಗುತ್ತದೆ ಎಂದು ಜನ ಕಾಯುತ್ತಿರುತ್ತಾರೆ. ಬಂಗಾರದ ಬೆಲೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಎಲ್ಲೆಲ್ಲಿ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ಈ ಲೇಖನದಲ್ಲಿ ನೋಡೋಣ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,640 ರೂಪಾಯಿ ಆಗಿತ್ತು ಇಂದು 10 ರೂಪಾಯಿ ಕಡಿಮೆಯಾಗಿ 49,630 ರೂಪಾಯಿ ಆಗಿದೆ. ಅದೆ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 45,500 ರೂಪಾಯಿ ಆಗಿತ್ತು. ಇಂದು 10 ರೂಪಾಯಿ ಇಳಿಕೆಯಾಗಿ 45,490 ರೂಪಾಯಿ ಆಗಿದೆ. ಇನ್ನು ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೆ ಬೆಲೆ ಕಂಡುಬರುತ್ತಿದೆ. ಈ ಮಧ್ಯೆ ದೇಶದ ಮೆಟ್ರೊ ನಗರಗಳಾದ ಚೆನ್ನೈನಲ್ಲಿ 50,040 ರೂಪಾಯಿ ಇದ್ದರೆ ಮುಂಬೈನಲ್ಲಿ 49,520 ರೂಪಾಯಿ ಇದೆ. ದೆಹಲಿಯಲ್ಲಿ 52,090 ರೂಪಾಯಿ ಇದೆ.

ಕೋಲ್ಕತ್ತದಲ್ಲಿ 50,390 ರೂಪಾಯಿ ಇದೆ, ಅದೆ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 49 ಸಾವಿರ ರೂಪಾಯಿಯಿಂದ 50 ಸಾವಿರದ ಆಸುಪಾಸಿನಲ್ಲಿ ಇದೆ. ಬಂಗಾರದ ಬೆಲೆ ದೇಶದಲ್ಲಿ ಇಳಿಕೆಯಾಗಿದೆ ಆದರೆ ಬೆಳ್ಳಿ ದರ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 64,900 ರೂಪಾಯಿ ಆಗಿತ್ತು. ಇಂದು ಸಹ ಅದೆ ಬೆಲೆ ಮುಂದುವರೆದಿದೆ ಆದರೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ 69,000 ರೂಪಾಯಿ ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ವಿಜಯವಾಡ, ವಿಶಾಖಪಟ್ಟಣಂ ನಗರಗಳಲ್ಲಿ ಬೆಳ್ಳಿಯ ಬೆಲೆ 69,000 ರೂಪಾಯಿ ಆಗಿದೆ ಇನ್ನು ಮೆಟ್ರೋ ನಗರಗಳಾದ ಮುಂಬೈ, ದೆಹಲಿ ಹಾಗೂ ಕೋಲ್ಕತ್ತದಲ್ಲಿ 64,900 ರೂಪಾಯಿ ದರ ಇದೆ. ಒಟ್ಟಾರೆಯಾಗಿ ಬಂಗಾರ ಖರೀದಿಸುವವರಿಗೆ ಗಗನಕ್ಕೇರಿದ ಬಂಗಾರದ ಬೆಲೆ ಈಗ ಕಡಿಮೆಯಾಗುತ್ತಿದೆ.

ಬಂಗಾರ ಖರೀದಿಸುವವರು ಈ ಬಾರಿ ಖರೀದಿಸುವುದು ಒಳ್ಳೆಯದು. ಬಡವರಿರಲಿ ಶ್ರೀಮಂತರಿರಲಿ ಮಂಗಳ ಕಾರ್ಯಗಳಿಗೆ ಬಂಗಾರ ಅವಶ್ಯವಾಗಿ ಬೇಕು ಕೆಲವು ತಿಂಗಳುಗಳ ಹಿಂದೆ ಬಂಗಾರ ಸಾಮಾನ್ಯರಿಗೆ ಕೈಗೆ ಎಟುಕದಂತೆ ಆಗಿತ್ತು. ಇದೀಗ ಸ್ವಲ್ಪ ಮಟ್ಟಿಗೆ ಬಂಗಾರದ ಬೆಲೆ ಕಡಿಮೆಯಾಗಿದೆ, ಇನ್ನು ಕಡಿಮೆಯಾಗುವ ನಿರೀಕ್ಷೆಯಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಅದರಲ್ಲೂ ಬಂಗಾರ ಪ್ರಿಯರಿಗೆ ತಿಳಿಸಿ.

Leave A Reply

Your email address will not be published.