ಆರಸಿಬಿ ಅಭಿಮಾನಿಗಳಿಗೆ ಸಂತಸ ನೀಡಿತು ಕ್ರಿಸ್ ಗೇಲ್ ಅವರ ತಂದೆಯ ಹುಟ್ಟು ಹಬ್ಬ. ಈ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕ್ರಿಸ್ ಗೇಲ್ ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಂಡ ಕ್ರಿಸ್ ಗೇಲ್ ಅವರು ಕೇವಲ ಏಳು ಪಂದ್ಯಗಳನ್ನು ಆಡಿ 288 ರನ್ ಬಾರಿಸಿದ್ದರು. ಜೊತೆಗೆ ಇದೇ ಐಪಿಎಲ್ನಲ್ಲಿ ಸಿಕ್ಸರ್ ಬಾರಿಸಿ ಟಿ-20 ಕ್ರಿಕೆಟ್ನಲ್ಲಿ 1000 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಟಿ-20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಗೇಲ್ ಅವರು ಪಾತ್ರರಾಗಿದ್ದಾರೆ. 2011-2017 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ ಆದರೆ 2018 ರಲ್ಲಿ ನಡೆದ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಹೋದರು. ಗೇಲ್ ಅವರ ತಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ ತೊಟ್ಟು ಹುಟ್ಟುಹಬ್ಬ ಆಚರಿಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕಳೆದ ಮೂರು ದಿನದ ಹಿಂದೆ ಗೇಲ್ ಅವರ ತಂದೆ ಡಡ್ಲಿ ಗೇಲ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಫೋಟೋಗಳನ್ನು ಕ್ರಿಸ್ ಗೇಲ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಗೇಲ್ ತಂದೆ ಆರ್ಸಿಬಿ ತಂಡದ ಹ್ಯಾಟ್ ಧರಿಸಿರುವುದು ಬೆಂಗಳೂರಿಗರಿಗೆ ಸಂತಸವಾಯಿತು. ಕ್ರಿಸ್ ಗೇಲ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದರೂ ಅವರ ತಂದೆ ಬೆಂಗಳೂರು ತಂಡದ ಮೇಲಿನ ಪ್ರೀತಿಯನ್ನು ಮರೆತಿಲ್ಲ ಎಂದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಗೇಲ್ ಅವರು ತಮ್ಮ ತಂದೆಯ ಹುಟ್ಟುಹಬ್ಬದ ಫೋಟೋಗಳನ್ನು ಶೇರ್ ಮಾಡಿ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ ಕೊನೆಯಿಲ್ಲದ ಪ್ರೀತಿ ನಿಮಗೆ. ಮನೆಯಲ್ಲಿರುವ ನೈಟ್ ಕ್ಲಬ್ ನಿಮಗಾಗಿ ತೆರದಿದೆ. ಲೀವಿಂಗ್ ದಿ ಲೈಫ್ ಅಪ್ಪ ಎಂದು ಬರೆದುಕೊಂಡಿದ್ದರು. ಕ್ರಿಸ್ ಗೇಲ್ ಅವರು ಕ್ರಿಕೆಟ್ ಪ್ರಪಂಚದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸೋಣ.