ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಮುನ್ನ ಇದನೊಮ್ಮೆ ಗಮನಿಸಿ

0 5,275

ಈಗ ಹೆಚ್ಚಾಗಿ ಎಲ್ಲರೂ ಕಾರನ್ನು ಖರೀದಿ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಹೊಸ ಬೈಕ್ ಖರೀದಿ ಮಾಡುವುದು ಒಂದೇ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡುವುದು ಒಂದೇ. ಏಕೆಂದರೆ ಅವುಗಳ ಬೆಲೆ ಅಲ್ಲಿಯ ತನಕ ಹೋಗಿಮುಟ್ಟಿದೆ. ನಾವು ಇಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡುವಾಗ ಹೇಗೆ ಚೆಕ್ ಮಾಡಬೇಕು ಎನ್ನುವುದರ ಬಗ್ಗೆ ಸಿರಾಝ್ ಅವರು ತಿಳಿಸಿಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಾರ್ ಮೊದಲು ಖರೀದಿಸುವಾಗ ಗಾಡಿಯ ಬಾಡಿ ಲೈನ್ ನೋಡಬೇಕು. ಅದರಲ್ಲಿ ಪೇಂಟ್, ಟಚ್ ಅಪ್, ಮತ್ತು ರೀಪ್ಲೇಸ್ಮೆಂಟ್ ಗಳು ಎಲ್ಲೆಲ್ಲಿ ಆಗಿದೆ ಎಂದು ಅನುಭವ ಇದ್ದವರಿಗೆ ನೋಡಿದರೆ ಸಾಕು ತಿಳಿಯುತ್ತದೆ. ಒಂದು ರೀತಿಯ ಮೊಬೈಲ್ ತರಹದ ಮಶಿನ್ ಇರುತ್ತದೆ. ಇದು ಗಾಡಿಯ ಎಲ್ಲಾ ಮಾಹಿತಿಯನ್ನು ತಿಳಿಸುತ್ತದೆ. ಅದರಲ್ಲಿ 100 ಅಥವಾ 120 ಎಂದು ಬಂದರೆ ಪೇಂಟ್ ಆಗಿಲ್ಲ ಎಂದು ಅರ್ಥ. ಹಾಗೆಯೇ 120ರ ಮೇಲೆ ತೋರಿಸಿದರೆ ಒಂದು ಬಾರಿ ಪೇಂಟ್ ಆಗಿದೆ ಎಂದು ಅರ್ಥ. 250 ಮತ್ತು 300ರ ಮೇಲೆ ತೋರಿಸಿದರೆ 3ಬಾರಿ ಪೇಂಟ್ ಆಗಿದೆ ಎಂದು ಅರ್ಥ.

ಕಾರಿಗೆ ಆಫ್ರಾನ್ ತುಂಬಾ ಮುಖ್ಯ. ಏಕೆಂದರೆ ಆಫ್ರಾನ್ ಕಾರಿನ ಹೃದಯ ಇದ್ದ ಹಾಗೆ. ಡೋರ್ ಗೆ ಡಬ್ಬಲ್ ಸೀಲಿಂಗ್ ಇದ್ದರೆ ಆಕ್ಸಿಡೆಂಟ್ ಆಗಿಲ್ಲ ಎಂದು ಅರ್ಥ. ಏಕೆಂದರೆ ಡಬ್ಬಲ್ ಸೀಲಿಂಗ್ ಕೊಡುವುದು ಖರೀದಿ ಮಾಡಿದಾಗ ಮಾತ್ರ. ಸಿಂಗಲ್ ಸೀಲಿಂಗ್ ಇದ್ದರೆ ಆಕ್ಸಿಡೆಂಟ್ ಆಗಿದೆ ಎಂದು ಅರ್ಥ. ರಿಪೇರಿಗೆ ಹೋದಾಗ ಸಿಂಗಲ್ ಸೀಲಿಂಗ್ ಹಾಕಿಕೊಡುತ್ತಾರೆ. ರಿಪೇರಿ ಮಾಡುವಾಗ ಡಬ್ಬಲ್ ಸೀಲಿಂಗ್ ಹಾಕುವುದಿಲ್ಲ. ಹಾಗೆಯೇ ಪಾರ್ಕ್ ಮಾಡಿದಾಗ ಯಾರಾದರೂ ಗಾಡಿಯಿಂದ ಡಿಕ್ಕಿ ಕೊಟ್ಟಿದ್ದರೆ ಲೈಟ್ ಆಗುವ ಮೇಲಿನ ಭಾಗ ಕಂಪನಿ ಸೀಲಿಂಗ್ ಪ್ಲಾಟ್ ಆಗಿರುತ್ತದೆ.

ಚಾವಿ ಹಾಕಿ ಆನ್ ಮಾಡಿದರೆ ಇಂಜಿನ್ ಲೈಟ್, ಪೆಟ್ರೋಲ್ ಲೈಟ್, ಸೀಟ್ ಬೆಲ್ಟ್ ಲೈಟ್ ಮತ್ತು ಡೋರ್ ಗೆ ಸಂಬಂಧಿಸಿದ ಲೈಟ್ ಮುಂತಾದವುಗಳು ಲೈಟ್ ಆಗುತ್ತದೆ. ಆಗ ಆಫ್ ಮಾಡಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಆಗ ಲೈಟ್ ಆಫ್ ಆಗುತ್ತದೆ. ಆ ಎಲ್ಲಾ ಲೈಟ್ ಗಳು ಹೋಗಬೇಕು. ಯಾವುದೂ ಕೂಡ ಇರಬಾರದು. ಗೇರ್ ಹೇಗಿದೆ ಎಂದು ನೋಡಿಕೊಳ್ಳಬೇಕು. ಒಂದು ಬಾರಿ ಡ್ರೈವ್ ಮಾಡಿ ಅದರ ಕಂಡಿಷನ್ಸ್ ನೋಡಬೇಕು. ಹಾಗೆಯೇ ಸ್ಟೇರಿಂಗ್ ಕಂಟ್ರೋಲ್ ಹೇಗಿದೆ ಎಂದು ಸರ್ಕಲ್ ಹಾಕಿ ನೋಡಬೇಕು. ಎಲ್ಲಾ ಆಂಗಲ್ ನಲ್ಲಿ ಸ್ಟೇರಿಂಗ್ ನ್ನು ಕಟ್ ಮಾಡಬೇಕು. ಹೀಗೆ ಇನ್ನು ಹಲವಾರು ವಿಷಯಗಳನ್ನು ನೋಡಿ ಕಾರನ್ನು ಖರೀದಿ ಮಾಡಬೇಕು.

Leave A Reply

Your email address will not be published.