ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟ್ ಆಟಗಾರ ಮ್ಯಾಕ್ಸ್ವೆಲ್, ಅವರ ಮದುವೆಯ ವೈರಲ್ ವೀಡಿಯೊ

0 5

ಆಸ್ಟ್ರೇಲಿಯಾದ ಫೇಮಸ್ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ನಮ್ಮ ಭಾರತ ದೇಶದ ವಿನಿ ರಾಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಮದುವೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಖ್ಯಾತ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಪ್ರಸಿದ್ಧ ಕ್ರಿಕೆಟ್ ಆಟಗಾರ. ಕ್ರಿಕೆಟ್ ಜಗತ್ತು ಕಂಡ ಖ್ಯಾತ ಆಟಗಾರರಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಒಬ್ಬರು. ಮೂಲತಃ ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರು ಅದೆಷ್ಟೊ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಸದ್ಯ ಕೆಲವು ಸಮಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿ ಇರುವ ವಿಚಾರ ಏನೆಂದರೆ ಅದು ಗ್ಲೆನ್ ಮ್ಯಾಕ್ಸ್ವೆಲ್ ಮದುವೆಯ ವಿಚಾರವಾಗಿದೆ. ಭಾರತ ಮೂಲದ ಹುಡುಗಿಯನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರು ಮದುವೆ ಮಾಡಿಕೊಳ್ಳುತ್ತಿದ್ದು ಅವರ ಪ್ರೀತಿಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.

ಗ್ಲೆನ್ ಮ್ಯಾಕ್ಸ್ವೆಲ್ ಅವರು ತಮ್ಮ ಪ್ರಿಯತಮೆಯನ್ನು ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದು ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಹಾಗಾದರೆ ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಮಾಡಿಕೊಂಡ ಭಾರತ ಹುಡುಗಿ ಯಾರು ಎನ್ನುವ ವಿಷಯದ ಬಗ್ಗೆ ಕುತೂಹಲ ಇರುತ್ತದೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರನ್ನು ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಕುರಿತು ವಿನಿ ರಾಮನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೊನ್ನೆ ಭಾನುವಾರ ಈ ಜೋಡಿ ಭಾರತೀಯ ಶೈಲಿಯ ಸಂಪ್ರದಾಯದಲ್ಲಿ ವಿವಾಹವಾದರು. ಸದ್ಯ ಅವರ ಮದುವೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿಗಳು ನೂತನ ಜೋಡಿಗೆ ಶುಭಹಾರೈಸಿದ್ದಾರೆ. ಭಾರತೀಯ ಸಂಪ್ರದಾಯದಂತೆ ಇಬ್ಬರು ಮದುವೆಯನ್ನು ಮಾಡಿಕೊಂಡಿದ್ದು ಅವರ ಮದುವೆಯ ಎಲ್ಲಾ ಫೋಟೋ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಇಬ್ಬರು ಹಾರವನ್ನು ಬದಲಾಯಿಸಿಕೊಂಡಿದ್ದು ಗುರು ಹಿರಿಯರು ಇಬ್ಬರಿಗೂ ಆಶೀರ್ವಾದವನ್ನು ಮಾಡಿದ್ದಾರೆ. ಇನ್ನು ಇವರ ಮದುವೆಯಲ್ಲಿ ತಮಿಳು ಬ್ರಾಹ್ಮಣರು ನುಡಿಸಿದ ವಿವಾಹ ಸಂಗೀತವು ಸಹ ಸಖತ್ ವೈರಲ್ ಆಗಿದೆ.

ಇನ್ನು ಮ್ಯಾಕ್ಸ್ವೆಲ್ ಶೆರ್ವಾನಿಯಲ್ಲಿದ್ದು, ವಿನಿ ಸಾಂಪ್ರದಾಯಿಕ ಭಾರತೀಯ ಸೀರೆಯಲ್ಲಿ ಮಿಂಚಿದ್ದಾರೆ. ಸದ್ಯ ಮ್ಯಾಕ್ಸ್ವೆಲ್ ಮತ್ತು ವಿನಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದು ಹಲವು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮ್ಯಾಕ್ಸ್ವೆಲ್ ಹಾಗೂ ವಿನಿ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿರಲಿ ಎಂದು ಆಶಿಸೋಣ. ಇಬ್ಬರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Leave A Reply

Your email address will not be published.