ಈ ಗುಣ ಇರುವ ಹೆಣ್ಣನ್ನ ಮದುವೆಯಾದವನೆ ಪುಣ್ಯವಂತ ಅಂತಾರೆ ಚಾಣಿಕ್ಯ

0 3

ಮದುವೆ ಅನ್ನುವುದು ಹೆಣ್ಣಿನ ಬಾಳಿನಲ್ಲಾಗಲಿ, ಗಂಡಿನ ಬಾಳಿನಲ್ಲಾಗಲಿ ಹೊಸ ತಿರುವು ಇದ್ದಂತೆ. ಮದುವೆ ಮಾಡುವಾಗ ಹೆಣ್ಣಿನ ಬಗ್ಗೆ ತಿಳಿದುಕೊಂಡೆ ಮುಂದುವರೆಯುತ್ತಾರೆ. ಚಾಣಕ್ಯನ ನೀತಿಯ ಪ್ರಕಾರ ಇಂತಹ ಗುಣವುಳ್ಳ ಹೆಣ್ಣನ್ನು ಮದುವೆ ಮಾಡಿಕೊಂಡರೆ ದುರದೃಷ್ಟವೂ‌ ಅದೃಷ್ಟವಾಗುತ್ತದೆ. ಹಾಗಾದರೆ ಎಂತಹ ಗುಣವಿರುವ ಹೆಣ್ಣನ್ನು ಮದುವೆಯಾಗಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚಾಣಕ್ಯ ನೀತಿಯು ಬದುಕಿನ ಹಲವು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯಗಳ ಬಗ್ಗೆ ಆಚಾರ್ಯ ಚಾಣಕ್ಯ ವಿವರಣೆ ನೀಡಿದ್ದಾರೆ. ಒಂದು ಸಮರ್ಥ ಆಡಳಿತ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕೆಂಬುದನ್ನು ವಿವರಿಸಿದ್ದಾರೆ. ಇನ್ನು ಅವರು ಬಾಳ ಸಂಗಾತಿಯ ವಿಷಯದಲ್ಲಿ ಯಾವ ಗುಣವುಳ್ಳ ಮಹಿಳೆಯನ್ನು ವಿವಾಹವಾದರೆ ದುರದೃಷ್ಟವೂ ಅದೃಷ್ಟವಾಗಿ ಬದಲಾಗಲಿದೆ ಎಂಬುದನ್ನು ಹೇಳಿದ್ದಾರೆ. ಯಾವುದೆ ಒಂದು ಆಡಳಿತವಿರಲಿ, ವ್ಯಕ್ತಿ ಇರಲಿ, ಮನೆ ಇರಲಿ ಅದು ಅಚ್ಚುಕಟ್ಟಾಗಿ ನಿರ್ವಹಣೆ ಆಗಬೇಕೆಂದರೆ, ಯಾವ ಜಾಗದಲ್ಲಿ ಯಾರು ಇರಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಆಚಾರ್ಯ ಚಾಣಕ್ಯ ನೀತಿ ಉತ್ತಮ ನಿದರ್ಶನವಾಗಿದೆ.

ಚಾಣಕ್ಯನ ನೀತಿ ಎಂದರೆ ಹಾಗೆ, ಎಲ್ಲದಕ್ಕೂ ಮಾದರಿಯಾಗಿರುತ್ತದೆ ಅಲ್ಲದೆ ಅರ್ಥಶಾಸ್ತ್ರಜ್ಞ ಆಗಿರುವ ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಧನ, ಸಂಪತ್ತು, ಸ್ತ್ರೀ, ಉದ್ಯೋಗ ಮತ್ತು ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಹಲವು ವಿಚಾರಗಳನ್ನು ವಿವರಿಸಿದ್ದಾರೆ. ಎಲ್ಲಿ ಹೇಗಿರಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಯಾವುದು ಹಿತ, ಯಾವುದು ಅಹಿತ ಎಂದು ಹೇಳಿಕೊಟ್ಟಿದ್ದಾರೆ. ಮಹಿಳೆಯರ ಗುಣಗಳ ಬಗ್ಗೆಯೂ ಚಾಣಕ್ಯ ವಿವರಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಹಾಗೆ ಮನೆ – ಮನಕ್ಕೆ ಒಪ್ಪುವ ಮಡದಿ ಇದ್ದರೆ ಸುಖ ಸಂಸಾರ ನಿಮ್ಮದಾಗುತ್ತದೆ. ಹೀಗಾಗಿ ಉತ್ತಮ ಜೀವನ ಸಂಗಾತಿ ಸಿಕ್ಕರೆ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಬಹುದು ಎಂಬ ಮಾರ್ಗವನ್ನು ಚಾಣಕ್ಯ ಹೇಳಿಕೊಟ್ಟಿದ್ದಾರೆ. ಚಾಣಕ್ಯನ ನೀತಿಯಲ್ಲಿ ಆದರ್ಶ ಪತ್ನಿಯ ವಿಶೇಷ ಗುಣಗಳು ಯಾವುವು, ಇಂಥಹ ಗುಣಗಳುಳ್ಳ ಮಹಿಳೆಯರನ್ನು ವಿವಾಹವಾದರೆ ದುರದೃಷ್ಟವಿದ್ದರೂ ಸಹ ಅದೃಷ್ಟವಾಗಿ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿಯಬಹುದು.

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಚಾಣಕ್ಯನ ನೀತಿಯಲ್ಲಿ ಅಳವಡಿಸಲಾಗಿದೆ. ಯಾವಾಗಲೂ ಧರ್ಮದ ಹಾದಿಯಲ್ಲಿ ನಡೆಯುವ ಮಹಿಳೆ ಎಂದಿಗೂ ಯಾರಿಗೂ ಸಹ ಹಾನಿ ಮಾಡಲಾರಳು. ಜೊತೆಗೆ ಇಂತಹ ಮಹಿಳೆಯಿಂದ ಕುಟುಂಬಕ್ಕೆ ಶ್ರೀರಕ್ಷೆ ಸಿಗಲಿದೆ. ಆಕೆ ತನ್ನ ಕುಟುಂಬದ ಬೆನ್ನಿಗೆ ನಿಲ್ಲುವುದಲ್ಲದೆ, ತನ್ನ ಪೀಳಿಗೆಗೆ ಉತ್ತಮ ಶಿಕ್ಷಣವನ್ನು ಸಹ ನೀಡುತ್ತಾಳೆ. ಮಹಿಳೆಯನ್ನು ಸಹನಾಮಯಿ, ಪ್ರಕೃತಿ ಮಾತೆ ಎಂದೆಲ್ಲಾ ಹೇಳುತ್ತಾರೆ. ಹೀಗಾಗಿ ಮಹಿಳೆಗೆ ತಾಳ್ಮೆಯ ಗುಣ ಇದ್ದರೆ, ಆಕೆ ಎಂಥಹ ಸಂದರ್ಭವನ್ನೂ ಕೂಡ ನಿಭಾಯಿಸುವ ಚಾಕಚಕ್ಯತೆಯನ್ನು ಹೊಂದಿರುತ್ತಾಳೆ. ಯಾವುದಕ್ಕೂ ವಿಚಲಿತಳಾಗದೆ, ಧೈರ್ಯದಿಂದ ಎದುರಿಸುತ್ತಾಳೆ. ಎಂಥದ್ದೆ ಕ್ಲಿಷ್ಟಕರ ಸಮಸ್ಯೆಗಳು ಎದುರಾದರೂ ತಾಳ್ಮೆಯಿಂದ ಯೋಚಿಸಿ, ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಆರಾಮವಾಗಿ ಪರಿಹರಿಸಿಬಿಡುವ ಗುಣವನ್ನು ಹೊಂದಿರುತ್ತಾಳೆ. ಇಂಥಹ ಮಹಿಳೆಯನ್ನು ವಿವಾಹವಾದರೆ ಅಂಥಹ ವ್ಯಕ್ತಿಯ ಭವಿಷ್ಯ ಉಜ್ವಲವಾಗುತ್ತದೆ.

ತಾಳ್ಮೆಯ ಗುಣವು ಮಕ್ಕಳಿಗೂ ಬರಲಿದೆ. ಮಾತನಾಡಿದರೆ ಮುತ್ತು ಉದುರುವಂತಿರಬೇಕು ಎನ್ನುವಂತೆ ಮಧುರವಾಗಿ ಮಾತನಾಡುವ ಮಹಿಳೆಯು ಯಾರ ಹೃದಯವನ್ನು ಬೇಕಾದರೂ ಗೆಲ್ಲಬಲ್ಲಳು. ಇಂತಹ ಮಹಿಳೆಯನ್ನು ಕುಟುಂಬದವರೆಲ್ಲರೂ ಪ್ರೀತಿಯಿಂದ ನೋಡುತ್ತಾರೆ. ಕಾರಣ ಇವರಿಗೆ ಸದಾ ತಮ್ಮ ಕುಟುಂಬದ ಬಗ್ಗೆಯೆ ಚಿಂತೆ ಕಾಡುತ್ತಿರುತ್ತದೆ. ಎಲ್ಲರೂ ತಮ್ಮವರು ಎಂಬ ಭಾವನೆಯಲ್ಲಿ ನೋಡುವ ಗುಣವನ್ನು ಇವರು ಹೊಂದಿರುತ್ತಾರೆ. ಹೀಗಾಗಿ ಪ್ರತಿಯೊಂದು ಹಂತವನ್ನು ಸಹ ಈ ಗುಣವುಳ್ಳ ಮಹಿಳೆಯರು ಬಹಳ ಆಪ್ಯತೆಯಿಂದಲೆ ನಿಭಾಯಿಸಿಕೊಂಡು ಹೋಗುತ್ತಾಳೆ.

ಸದಾ ತನ್ನ ಕುಟುಂಬದ ಘನತೆಯ ಬಗ್ಗೆ ಕಾಳಜಿ ವಹಿಸುವ ಈಕೆ ಪ್ರೀತಿಯಿಂದಲೆ ಎಲ್ಲವನ್ನೂ ಗೆಲ್ಲುತ್ತಾಳೆ. ಸಹಿಷ್ಣುತಾ ಗುಣವುಳ್ಳ ಮಹಿಳೆಯು ಬಹಳ ಶ್ರೇಷ್ಠ. ಯಾವುದಕ್ಕೂ ಕೋಪ ಮಾಡಿಕೊಳ್ಳದೆ, ಸಹಿಷ್ಣುತಾ ಭಾವದಿಂದ ಇದ್ದರೆ ಬಹಳ ಉತ್ತಮ. ಸಣ್ಣ ಸಣ್ಣ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳುವವರಿದ್ದರೆ ಬಹಳವೆ ಕಷ್ಟ. ಹೀಗಾಗಿ ಸಹಿಷ್ಣುತೆವುಳ್ಳವಳಿಗೆ ಬುದ್ಧಿಮತ್ತೆಯೂ ಅಷ್ಟೆ ಚುರುಕಾಗಿ ಇರಲಿದೆ. ಇದರಿಂದ ಮನೆ ಮತ್ತು ಮನೆಯವರನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಇರಲಿದೆ. ಇದು ಮನೆಯಲ್ಲಿ ಪ್ರಶಾಂತವಾದ ವಾತಾವರಣ ನಿರ್ಮಾಣವಾಗಲೂ ಕಾರಣವಾಗುತ್ತದೆ. ಒಂದು ಹೆಣ್ಣಿನಿಂದ ಮನೆ ನಾಶವಾಗಬಹುದು ಬೆಳಗಲುಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.