Cow buffalo subsidy in karnataka: ರಾಜ್ಯ ಸರ್ಕಾರವು ಈಗ ರೈತರಿಗೆ ಮತ್ತು ಹೊಸದಾಗಿ ಹೈನುಗಾರಿಕೆ ಉದ್ಯಮ ಶುರು ಮಾಡಬೇಕು, ತಮ್ಮದೇ ಆದ ಸ್ವಯಂ ಉದ್ಯೋಗ ಮಾಡಬೇಕು ಎಂದುಕೊಂಡಿರುವವರಿಗೆ ಒಂದು ಉತ್ತಮವಾದ ಯೋಜನೆಯನ್ನು ಹೊರತಂದಿದೆ. ಇದರ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸಲು, ಹಸು ಮತ್ತು ಎಮ್ಮೆಗಳ ಖರೀದಿ ಮೇಲೆ ಸುಮಾರು 85% ವರೆಗು ಸಬ್ಸಿಡಿ ಸಿಗಲಿದ್ದು, ಯಾವ ತಳಿಯ ಹಸು ಅಥವಾ ಎಮ್ಮೆಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಮತ್ತು ಇನ್ನಿತರ ಮಾಹಿತಿಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಹಸುಗಳ ಖರೀದಿಗೆ 50 ಇಂದ 75% ವರೆಗು ಸಬ್ಸಿಡಿ ಕೊಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಹಾಲಿನ ಉತ್ಪನ್ನ ಜಾಸ್ತಿ ಮಾಡಬೇಕು ಎನ್ನುವ ಕಾರಣಕ್ಕೆ ಸರ್ಕಾರವು ಹಾಲಿನ ಉತ್ಪನ್ನವನ್ನು ಜಾಸ್ತಿ ಮಾಡಬೇಕು ಎಂದು ಸರ್ಕಾರ ಈ ನಿರ್ಧಾರವನ್ನು ಜಾರಿಗೆ ತಂದಿದ್ದು, ಹಸುಗಳ ಖರೀದಿ ಮೇಲೆ ಸಬ್ಸಿಡಿ ನೀಡುವ ಮೂಲಕ ರೈತರಿಗೆ ಮತ್ತು ಹೈನುಗಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಉತ್ತೇಜನ ನೀಡುತ್ತಿದೆ.

ಈ ಭರ್ಜರಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ, ರಾಜ್ಯದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ರಾಜ್ಯದ ಜನತೆಗೆ ಈ ಒಂದು ಸಂತೋಷದ ಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರಿಗೆ ಮತ್ತು ರೈತರಿಗೆ ಈ ಆಫರ್ ಸಿಕ್ಕಿದೆ, ಹಸುಗಳ ಖರೀದಿ ಮೇಲೆ ಸಿಗುವ 50 ಇಂದ 75% ಸಬ್ಸಿಡಿ ಪ್ರಯೋಜನವನ್ನು ಆಸಕ್ತಿ ಇರುವವರು ಪಡೆದುಕೊಳ್ಳಬಹುದು.

ಹಾಲಿನ ಉತ್ಪಾದನೆ ಹೆಚ್ಚಳ ಮಾಡುವುದು ಈ ಯೋಜನೆಯ ಉದ್ದೇಶ ಆಗಿದೆ, ಇಷ್ಟು ದಿವಸಗಳ ಕಾಲ ಪಶು ಸಂಗೋಪನೆ ಮಾಡುವ ರೈತರು ತಮಗೆ ಹತ್ತಿರ ಇರುವ ಹಳ್ಳಿಗಳು ಅಥವಾ ನಗರಗಳಿಂದ ಹಸುಗಳನ್ನು ಖರೀದಿ ಮಾಡುತ್ತಿದ್ದರು, ಇದರಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಜಾಸ್ತಿ ಆಗಿರಲಿಲ್ಲ, ಹಾಗಾಗಿ ರೈತರಿಗೆ ಒಂದು ಕಂಡೀಷನ್ ಹಾಕಲಾಗಿದ್ದು, ಪಶು ಸಂಗೋಪನೆ ಇಲಾಖೆಯ ಅಧ್ಯಕ್ಷರಾದ ಸಂಜಯ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದಾರೆ..

Cow buffalo subsidy in karnataka

ಈ ಯೋಜನೆಯಲ್ಲಿ ಹಸು ಖರೀದಿ ಮಾಡಲು ಹೆಚ್ಚಿನ ಆಯ್ಕೆಯನ್ನು ನೀಡಲಾಗಿದ್ದು, ರೈತರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಿಂದ ಹಸುಗಳನ್ನು ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ. ಹಾಗೆಯೇ ಸೆಪ್ಟೆಂಬರ್ 15 ರಿಂದ ಈ ಯೋಜನೆ ಶುರುವಾಗಿದ್ದು, ರೈತರಿಗೆ ಅನುಕೂಲ ಅಗುವುದಾದರೆ ಅವರೇ ಹೊರಗಡೆ ಇಂದ ಹಸುಗಳನ್ನು ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ. ಈ ಯೋಜನೆಗೆ ಅರ್ಜಿ ಹಾಕಲು 2023ರ ಆಕ್ಟೊಬರ್ 15ನೇ ತಾರೀಕು ಕೊನೆಯ ದಿನಾಂಕ ಆಗಿದೆ.

ಈ ದಿನಾಂಕದ ಒಳಗೆ ರೈತರು ಅರ್ಜಿ ಹಾಕಿ, ಸರ್ಕಾರದ ಸಹಾಯ ಪಡೆಯಬಹುದು. ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಳ ಮಾಡುವ ಕೆಲಸದಲ್ಲಿ ನೀವು ಕೂಡ ಸರ್ಕಾರದ ಜೊತೆಗೆ ಇರಬಹುದು. ಈ ಯೋಜನೆಯಲ್ಲಿ 2, 4, 5, 10 ಮತ್ತು 15 ಹಸುಗಳನ್ನು ಖರೀದಿ ಮಾಡುವುದಕ್ಕೆ ಸರ್ಕಾರದ ಕಡೆಯಿಂದ 40 ರಿಂದ 75%ವರೆಗು ಸಬ್ಸಿಡಿ ಸಿಗುತ್ತದೆ.. ಸಾಮಾನ್ಯ ವರ್ಗದ ಜನರಿಗೆ 50% ಮ್ಯಾಕ್ಸಿಮಮ್ ಸಬ್ಸಿಡಿ, SC/ST ಸಮುದಾಯಕ್ಕೆ ಸೇರಿದವರಿಗೆ 75% ವರೆಗು ಸಬ್ಸಿಡಿ ಸಿಗುತ್ತದೆ. ತಡಮಾಡದೆ ಇಂದೇ ಅರ್ಜಿ ಸಲ್ಲಿಸಿ.

By

Leave a Reply

Your email address will not be published. Required fields are marked *