ಪ್ರಾಣಿಗಳು ಮನುಷ್ಯರಿಗಿಂತ ಮಾನವೀಯತೆ, ಪ್ರೀತಿ, ನಂಬಿಕೆಯನ್ನು ಹೊಂದಿರುತ್ತವೆ ಎನ್ನುವುದಕ್ಕೆ ಸಾಕ್ಷಿಯಾದ ತಮಿಳುನಾಡಿನ ಒಬ್ಬ ರೈತ ಮತ್ತು ಅವನ ಹಸುವಿನ ಕಥೆಯನ್ನು ಈ ಲೇಖನದಲ್ಲಿ ನೋಡೋಣ, ಈ ಕಥೆಯನ್ನು ಒಮ್ಮೆಯಾದರೂ ಕೇಳಲೇಬೇಕು.

ತಮಿಳುನಾಡು ರಾಜ್ಯದ ತಾವರೆಪುರಂ ಎಂಬ ಸಣ್ಣ ಹಳ್ಳಿಯಲ್ಲಿ ಕಂದಸ್ವಾಮಿ ಎಂಬ ರೈತ ವಾಸವಾಗಿದ್ದ. ಕಂದಸ್ವಾಮಿ ಒಬ್ಬ ರೈತನಾಗಿದ್ದು ಬಹಳ ವರ್ಷಗಳಿಂದ ಒಂದು ಹಸುವನ್ನು ಪ್ರೀತಿಯಿಂದ ಸಾಕುತ್ತಿದ್ದನು. ಹಸು ಒಂದು ದಿನಕ್ಕೆ ಬೆಳಗ್ಗೆ ಐದು ಲೀಟರ್ ಹಾಗೂ ಸಂಜೆ ಐದು ಲಿಟರ್ ಹಾಲು ಕೊಡುತ್ತಿತ್ತು. ಹಾಲನ್ನು ಪ್ರತಿದಿನ ಡೇರಿಗೆ ಹಾಕಿ ಅದರಿಂದ ಬರುತ್ತಿದ್ದ ಹಣದಲ್ಲಿ ಕಂದಸ್ವಾಮಿ ತನ್ನ ಸಂಸಾರವನ್ನು ಸಾಗಿಸುತ್ತಿದ್ದನು. ಕಂದಸ್ವಾಮಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದರು. ಹಸು ಕೂಡ ಕಂದಸ್ವಾಮಿ ಮತ್ತು ಅವನ ಕುಟುಂಬವನ್ನು ಹಚ್ಚಿಕೊಂಡಿತ್ತು, ಒಂದು ನಿಮಿಷವೂ ಕಂದಸ್ವಾಮಿ ಮತ್ತು ಅವನ ಕುಟುಂಬವನ್ನು ಬಿಟ್ಟು ಒಬ್ಬಂಟಿಯಾಗಿ ಇರುತ್ತಿರಲಿಲ್ಲ.

ಕಂದಸ್ವಾಮಿ ಮನೆಯಿಂದ ಹೊರಗಡೆ ಹೋದರೆ ಅವನು ವಾಪಸ್ ಬರುವುದು ತಡವಾದರೆ ಹಸು ಅವನು ಬರುವವರೆಗೂ ಕೂಗುತ್ತಲೆ ಇರುತ್ತಿತ್ತು. ಒಂದು ದಿನ ಒಂದು ಕೆಲಸದ ನಿಮಿತ್ತ ಕಂದಸ್ವಾಮಿ ಪಕ್ಕದ ಊರಿಗೆ ಹೋಗಿದ್ದ ಎರಡು ದಿನದಲ್ಲಿ ಕೆಲಸ ಮುಗಿಸಿ ಬರಬೇಕು ಅಂದುಕೊಂಡಿದ್ದನು ಆದರೆ ಕೆಲಸದ ನಿಮಿತ್ತ ಐದು ದಿನ ಅಲ್ಲಿಯೆ ಇರಬೇಕಾಗಿತ್ತು ಹೀಗೆ ಒಂದು ವಾರವಾದರೂ ಕಂದಸ್ವಾಮಿ ಮನೆಯ ಕಡೆಗೆ ಬರಲಿಲ್ಲ. ಕಂದಸ್ವಾಮಿಯ ಮಕ್ಕಳು ಕಂದಸ್ವಾಮಿಗೆ ಫೋನ್ ಮಾಡಿ ಹಸು ಸರಿಯಾಗಿ ಹುಲ್ಲು ತಿನ್ನುತ್ತಿಲ್ಲ ನೀರು ಕುಡಿಯುತ್ತಿಲ್ಲ ನೀವು ಬೇಗ ಬನ್ನಿ ಎಂದು ಹೇಳಿದರು. ಕಂದಸ್ವಾಮಿ ಕೆಲಸವಿದೆ ಎರಡು ದಿನ ತಡವಾಗುತ್ತದೆ ಹಸುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾನೆ. ಇತ್ತ ಹಸು ಸರಿಯಾಗಿ ಹುಲ್ಲು ನೀರು ಕುಡಿಯದೆ ಅದರ ಆರೋಗ್ಯ ಹದಗೆಟ್ಟಿತ್ತು. ಹಸುವಿನ ಆರೋಗ್ಯ ಕ್ಷೀಣಿಸುತ್ತಿರುವುದನ್ನು ನೋಡಿ ಕಂದಸ್ವಾಮಿಯ ಮಕ್ಕಳು ಪಶು ವೈದ್ಯರಿಗೆ ಮನೆಗೆ ಬರಲು ತಿಳಿಸಿದರು.

ಮನೆಗೆ ಬಂದ ಪಶುವೈದ್ಯರು ಹಸುವಿಗೆ ಒಂದು ಇಂಜೆಕ್ಷನ್ ಕೊಟ್ಟು ಹಸು ಆರಾಮಾಗುತ್ತದೆ ಭಯಪಡಬೇಡಿ ಎಂದು ಹೇಳಿ ಹೋಗುತ್ತಾರೆ. ಮಾರನೇ ದಿನ ಹಸುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಸುವಿಗೆ ತನ್ನ ತಲೆಯನ್ನು ಕೂಡ ಮೇಲೆತ್ತಲು ಶಕ್ತಿ ಇಲ್ಲದಂತಾಗಿತ್ತು. ಇದನ್ನು ನೋಡಿದ ಕಂದಸ್ವಾಮಿಯ ಮಕ್ಕಳು ಮತ್ತೆ ಪಶುವೈದ್ಯರನ್ನು ಕರೆಸಿದರು ಅವರು ಹಸುವನ್ನು ಚೆಕ್ ಮಾಡಿ ಗ್ಲೂಕೋಸ್ ಮತ್ತು ಇಂಜೆಕ್ಷನ್ ಕೊಟ್ಟರು ಆದರೂ ಸಹ ಹಸುವಿಗೆ ಸುಸ್ತು ಹೋಗಲಿಲ್ಲ ಆಗ ಪಶುವೈದ್ಯರು ಈ ಹಸು ಮುಂಚಿನ ರೀತಿಯಲ್ಲಿ ಎದ್ದೇಳುವುದಿಲ್ಲ, ನೀವು ಈಗಲೇ ಕಸಾಯಿಖಾನೆಗೆ ಮಾರಿಬಿಡಿ ಸ್ವಲ್ಪ ಹಣವಾದರೂ ಸಿಗುತ್ತದೆ ಇಲ್ಲವೆಂದರೆ ಈ ಹಸುವಿಗೆ ನೀವು ಬಿಟ್ಟಿ ಊಟ ಹಾಕಬೇಕಾಗುತ್ತದೆ, ಈ ಹಸುವಿನಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ, ಕೆಲವು ದಿನಗಳಲ್ಲೇ ಈ ಹಸು ಸಾಯುತ್ತದೆ ಎಂದು ಹೇಳಿ ಹೋಗುತ್ತಾರೆ. ವೈದ್ಯರ ಮಾತನ್ನು ಕೇಳಿದ ಕಂದಸ್ವಾಮಿಯ ಕುಟುಂಬದವರು ಕಣ್ಣೀರು ಹಾಕುತ್ತಾರೆ.

ಕಂದಸ್ವಾಮಿಯ ಮಕ್ಕಳು ತಾವು ಪ್ರೀತಿಯಿಂದ ಸಾಕಿದ ಹಸು ಸಾಯುತ್ತದೆ ಎಂದು ದುಃಖದಿಂದ ಕಂದಸ್ವಾಮಿಗೆ ಕರೆಮಾಡಿ ನಾವು ಪ್ರೀತಿಯಿಂದ ಸಾಕಿದ ಹಸು ಸಾಯುತ್ತದೆ ಎಂದು ವೈದ್ಯರು ಹೇಳಿದರು ನೀವು ಬೇಗ ಮನೆಗೆ ಬನ್ನಿ, ವೈದ್ಯರು ಹಸುವನ್ನು ಕಸಾಯಿಖಾನೆಗೆ ಮಾರಿಬಿಡಿ ಎಂದು ಹೇಳಿದರು ಎಂದು ಹೇಳುತ್ತಾ ಕಣ್ಣೀರು ಹಾಕುತ್ತಾರೆ. ಇದನ್ನು ಕೇಳಿದ ಕಂದಸ್ವಾಮಿಗೆ ಗಾಬರಿಯಾಗಿ ತನ್ನ ಎಲ್ಲಾ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಮನೆಗೆ ಓಡಿ ಬಂದನು. ಕಂದಸ್ವಾಮಿ ಮನೆ ಹತ್ತಿರ ಬರುತ್ತಿದ್ದಂತೆ ದೂರದಿಂದಲೇ ನೋಡಿದ ಹಸು ಕೂಗುತ್ತಾ ಮೇಲೆ ಎದ್ದು ನಿಂತುಕೊಂಡಿತು. ಹಸು ಎದ್ದು ನಿಂತಿರುವುದನ್ನು ನೋಡಿದ ಕುಟುಂಬದವರಿಗೆ ಆಶ್ಚರ್ಯವಾಗುತ್ತದೆ. ಒಂದುವಾರದಿಂದ ಹುಲ್ಲು ನೀರು ಕುಡಿಯದ ಹಸು ಈಗ ಎದ್ದು ನಿಂತಿರುವುದನ್ನು ನೋಡಿ ಶಾಕ್ ಆಗುತ್ತದೆ, ಹಾಗೆಯೇ ಕಂದಸ್ವಾಮಿ ಕುಟುಂಬದವರಿಗೆ ಖುಷಿಯಾಗುತ್ತದೆ. ವೈದ್ಯರು ಬದುಕುವುದಿಲ್ಲ ಎಂದು ಹೇಳಿದ್ದರು ಆದರೆ ಕಂದಸ್ವಾಮಿ ನೋಡಿ ಹಸು ಎದ್ದು ನಿಂತುಕೊಂಡಿತು ಇದೆಂಥಾ ಚಮತ್ಕಾರ ಎಂದುಕೊಂಡರು.

ಹಸುವಿನ ಹತ್ತಿರ ಬಂದಾಗ ಕಂದಸ್ವಾಮಿ ಹಸುವನ್ನು ಅಪ್ಪಿಕೊಂಡು ಯಾಕಪ್ಪ ಚಿನ್ನು ನಿನಗೆ ಏನಾಯಿತು, ಒಂದು ವಾರದಿಂದ ಹುಲ್ಲು ನೀರು ಕುಡಿದಿಲ್ಲ ಎಂದು ಕೇಳಿದನು ಆಗ ಹಸು ತನ್ನ ನಾಲಿಗೆಯಿಂದ ಕಂದಸ್ವಾಮಿಯ ಕೈಯನ್ನು ಸವರುತಿತ್ತು. ಮತ್ತೆ ಕಂದಸ್ವಾಮಿ ಹಸುವಿನ ಹತ್ತಿರ ನನಗೆ ಏನು ಆಗೋಯ್ತು ಎಂದು ತಿಳಿದುಕೊಂಡೆಯಾ, ಕೆಲಸದ ನಿಮಿತ್ತ ನಾನು ಬೇರೆ ಊರಿಗೆ ಹೋಗಿದ್ದೆ ಎಂದು ಹೇಳಿದ ನಂತರ ಕಂದಸ್ವಾಮಿ ಹಸುವಿನ ಮುಂದೆ ನೀರನ್ನು ಇಟ್ಟನು ಹಸು ನೀರನ್ನು ಕುಡಿಯಿತು. ನಂತರ ನಿಧಾನವಾಗಿ ಹಸು ಹುಲ್ಲು, ಬೂಸಾ ತಿನ್ನಲು ಪ್ರಾರಂಭಿಸಿತು. ಸ್ವಲ್ಪ ದಿನಗಳ ನಂತರ ಸಾಯುವ ಸ್ಥಿತಿಗೆ ತಲುಪಿದ್ದ ಹಸು ಚೇತರಿಸಿಕೊಂಡಿತು ಮತ್ತೆ ಹಾಲು ಕೊಡಲು ಪ್ರಾರಂಭಿಸಿತು. ಹಸು ಚೇತರಿಸಿಕೊಂಡ ವಿಷಯವನ್ನು ಕೇಳಿದ ಪಶುವೈದ್ಯರು ಕೂಡ ಶಾಕ್ ಆದರು. ಮೂಕ ಪ್ರಾಣಿಗಳನ್ನು ರಕ್ಷಿಸಿ ಹಿಂಸೆ ಮಾಡದಿರಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!