ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಕೆಲವು ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹಾಗಾದರೆ ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅನಿಲ ಕುಮಾರ್ ಇವರು ಮೂಲತಃ ಹಾಸನದವರು ಇವರು ಇನಫೋಸಿಸ್ ನಲ್ಲಿ 25 ವರ್ಷ ಕೆಲಸ ಮಾಡಿ ನಂತರ ಮಂಡ್ಯ ಜಿಲ್ಲೆಯ ಪಾಂಡುಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅವರು ರೈತ ಕುಟುಂಬದಿಂದ ಬಂದಿದ್ದು ಕೃಷಿಯಲ್ಲಿ ತೊಡಗೀಕೊಳ್ಳಬೇಕೆಂಬ ಮಹದಾಸೆಯನ್ನು ಹೊಂದಿದ್ದರು. ಅವರ ಹತ್ತಿರ 42 ಹಸುಗಳಿವೆ. ಒಂದು ಹಸು ಒಂದು ದಿನಕ್ಕೆ 44 ಲೀಟರ್ ಹಾಲು ಕೊಡುತ್ತದೆ. ದಿನಕ್ಕೆ ಅವರು 650 ಲೀಟರ್ ಹಾಲನ್ನು ಮಾರುತ್ತಾರೆ. ಅವರು 6-7 ಜನರಿಗೆ ಕೆಲಸ ಕೊಟ್ಟಿದ್ದಾರೆ. ಹೈನುಗಾರಿಕೆ ಪ್ರಾರಂಭಿಸುವಾಗ ಒಳ್ಳೆಯ ಹೈಬ್ರಿಡ್ ಹಸುಗಳನ್ನು ಸಾಕಬೇಕು, ಹಸು ಸೆಲೆಕ್ಟ್ ಮಾಡುವಾಗ ಅದರ ಶರೀರ ಮತ್ತು ಅದರ ಕೆಚ್ಚಲು ನೋಡಬೇಕು, ಹಸು ನಾಲ್ಕು ಹಲ್ಲಿನಲ್ಲಿದ್ದಷ್ಟು ಒಳ್ಳೆಯದು ಅವುಗಳಿಗೆ ಸಮಯಕ್ಕೆ ಸರಿಯಾಗಿ ಫೀಡಿಂಗ್ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಹಸುಗಳನ್ನು ಕಟ್ಟಲು ಶೆಡ್ ಮಾಡಬೇಕು, ಶೆಡ್ ಮಾಡಲು ಅನಗತ್ಯ ಹಣ ಖರ್ಚು ಮಾಡಬಾರದು. ಸರಳವಾಗಿ ಸಾಕಷ್ಟು ಪ್ರಮಾಣದಲ್ಲಿ ಗಾಳಿ, ಬೆಳಕು ಬರುವಂತಿರಬೇಕು. ಶೆಡ್ ಇಕ್ಕಟ್ಟಾಗಿರದೆ ಸಾಕಷ್ಟು ಜಾಗ ಇರಬೇಕು. ಹಸುಗಳನ್ನು ಇಡೀ ದಿನ ಕಟ್ಟಿ ಸಾಕಬಾರದು ಅವುಗಳನ್ನು ಹೊರಗಡೆ ಬಿಟ್ಟು ಮೇಯಿಸಬೇಕು. ಅವರು ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಅಳವಡಿಸಿದ್ದಾರೆ ಇದರಿಂದ ದಿನಕ್ಕೆ ಮೂರು ಸಾರಿ ಹಸುವಿನ ಮೇಲೆ ನೀರು ಬೀಳುತ್ತದೆ ಆಗ ಹಸು ತಂಪಾಗಿರುತ್ತದೆ, ಆರೋಗ್ಯವಾಗಿರುತ್ತದೆ. ಅವರು ಒಂದು ಹಸುವಿಗೆ ನಾಲ್ಕರಿಂದ ನಾಲ್ಕೂವರೆ ಕೆಜಿ ಫೀಡ್ಸ್ ಹಾಕುತ್ತಾರೆ ಜೊತೆಗೆ ಅರ್ಧ ಕೆಜಿ ಹಿಂಡಿಯನ್ನು ಹಾಕುತ್ತಾರೆ. ಅವರು ಮಿನರಲ್ ಮಿಕ್ಚರ್ ಹಾಗೂ ಸೋಡಾ ಹಾಕುತ್ತಾರೆ ಇದರಿಂದ ಹಾಲಿನ ಕ್ವಾಲಿಟಿ ಉತ್ತಮವಾಗಿರುತ್ತದೆ ಮತ್ತು ಸೋಡಾದಿಂದ ಹಸುವಿಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಬರುವುದಿಲ್ಲ.

ಅನಿಲ್ ಅವರು ಹಸುಗಳಿಗೆ ಹಸಿರು ಹುಲ್ಲನ್ನು ಹಾಕುತ್ತಾರೆ. ಹಸಿರು ಮೇವು ಸಿಗದೆ ಇದ್ದಾಗ ಹುಲ್ಲುಗಳನ್ನು ಸಣ್ಣದಾಗಿ ಕಟ್ ಮಾಡಿ 10 ಅಡಿ ಆಳ ಹತ್ತು ಅಡಿ ಅಗಲವಿರುವ ಗುಂಡಿಗೆ ಹಾಕಿ 10 ಲೀಟರ್ ನೀರಿಗೆ ಒಂದು ಕೆಜಿ ಬೆಲ್ಲ, 1ಕೆಜಿ ಉಪ್ಪು, ಅರ್ಧ ಲೀಟರ್ ನಿಂದ ಮುಕ್ಕಾಲು ಲೀಟರ್ ವರೆಗೆ ಮೊಸರು ಹಾಕಿ ಮಿಕ್ಸ್ ಮಾಡಿ ಒಂದಡಿಯಷ್ಟು ತುಂಬಿ ಹರಡಿ ಅದರ ಮೇಲೆ ಮತ್ತೆ ಒಂದಿಷ್ಟು ಕಟ್ ಮಾಡಿದ ಹುಲ್ಲನ್ನು ಹಾಕಿ ಎರಡು ಕಡೆ ಪ್ಲಾಸ್ಟಿಕ್ ಹಾಕಿ ಗಾಳಿಯಾಡದಂತೆ ಟೈಟ್ ಮಾಡಿ ಅದರ ಸುತ್ತಲೂ ಕಲ್ಲು ಜೋಡಿಸಿ ಬಿಗಿಮಾಡಿ ಇಡಬೇಕು. ವಿಡಿಯೋ ಕ್ರೆಡಿಟ್ for ಕೃಷಿ ಬೆಳಕು

45 ದಿವಸಗಳ ನಂತರ ಒಂದರಿಂದ ಮೂರು ತಿಂಗಳವರೆಗೂ ಹಸುಗಳಿಗೆ ಹಾಕಬಹುದು, ಇದನ್ನು ರಸಮೇವು ಎಂದು ಕರೆಯುತ್ತಾರೆ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಯಾವುದೇ ಹಸು ಕರು ಹಾಕಿ 90 ದಿನಗಳ ನಂತರ ಹೀಟಿಗೆ ಬಂದರೆ ಇನ್ಸುಲೇಷನ್ ಮಾಡಿಸಬೇಕು. ಕರ ಹಾಕುವ ಸಮಯದಲ್ಲಿ ಹಸುಗಳಿಗೆ ಹೀಟಿನ ಪದಾರ್ಥಗಳನ್ನು ಹಾಕಬಾರದು. ಏಳು ತಿಂಗಳು ಇರುವಾಗ ಹಸು ಹಾಲು ಕೊಡುತ್ತಿದ್ದರೂ ನಿಲ್ಲಿಸಬೇಕು.

ಪ್ರತಿದಿನ ಅನಿಲ್ ಕುಮಾರ್ ಅವರು ಬೆಳಗ್ಗೆ 5:30 ಗೆ ಹಸುಗಳಿಗೆ ಫೀಡಿಂಗ್ ಕೊಡುತ್ತಾರೆ ನಂತರ ಹಾಲು ಕರೆಯುತ್ತಾರೆ. ನಂತರ ಹಸುಗಳಿಗೆ ಹಿಂಡಿ, ಬೂಸಾಗಳನ್ನು ಕೊಡುತ್ತಾರೆ ಹಾಲು ಕರೆದ ತಕ್ಷಣ ಹಸು ಮಲಗಿದರೆ ಕೆಚ್ಚಲುಬಾವು ಆಗುವ ಸಂಭವವಿರುತ್ತದೆ. ನಂತರ ಹಸುಗಳ ಮೈ ತೊಳೆಯುತ್ತಾರೆ ನಂತರ ಅವುಗಳಿಗೆ ಹಸಿರು ಹುಲ್ಲನ್ನು ಹಾಕುತ್ತಾರೆ. ನಂತರ ಹಸುಗಳನ್ನು ಕಟ್ಟುವ ಜಾಗದಲ್ಲಿ ಸಗಣಿ ಹಾಕಿದ್ದರೆ ಅವುಗಳನ್ನು ಕ್ಲೀನ್ ಮಾಡಲಾಗುತ್ತದೆ. ಹಸುಗಳ ಮುಂದೆ ಅವುಗಳಿಗೆ ಕುಡಿಯಲು ನೀರನ್ನು ಹಾಕಿರುತ್ತಾರೆ. ಸಂಜೆ 4 ಗಂಟೆಗೆ ಫೀಡಿಂಗ್ ಮಾಡಲಾಗುತ್ತದೆ ನಂತರ ಹಾಲು ಕರೆಯುತ್ತಾರೆ.

ನಂತರ ಹಿಂಡಿ ಬೂಸಾ ಕೊಡಲಾಗುತ್ತದೆ. ಸಂಜೆ ಸಮಯದಲ್ಲಿ ರಸಮೇವು ಕೊಡುತ್ತಾರೆ. 24 ಗಂಟೆಯೂ ಹಸುಗಳ ಹತ್ತಿರ ಇರಬೇಕಾದ ಅವಶ್ಯಕತೆ ಇರುವುದಿಲ್ಲ, ಸರಿಯಾದ ಸಮಯಕ್ಕೆ ಹುಲ್ಲು ಮೇವು ಹಾಕಬೇಕು. ಹಸುಗಳು ಕರು ಹಾಕುವ ಸಮಯ ಹತ್ತಿರ ಬಂದಾಗ ಮಣ್ಣಿನಲ್ಲಿ ವಿಶಾಲವಾಗಿ ಜಾಗ ಇರುವಂತೆ ಕಟ್ಟಬೇಕು. ಅವರು ಹಸುಗಳಿಗೆ ಮೂಗುದಾರ ಹಾಕಿದ್ದಾರೆ ಹಾಕದೇನು ಇರಬಹುದು. ಅವರು ಹಸುಗಳಿಗೆ ಯಾವುದೇ ಖಾಯಿಲೆ ಬಂದಾಗ ಡಾಕ್ಟರ ಸಲಹೆಯನ್ನು ಪಡೆಯುತ್ತಾರೆ.

42 ವರ್ಷಗಳಿಂದ ಅವರಿಗೆ ತಿಂಗಳಿಗೆ 15 ಕಿಂತ ಹೆಚ್ಚು ಗೊಬ್ಬರ ಸಿಗುತ್ತದೆ. ಒಂದು ಲೋಡಿಗೆ 3-4 ಸಾವಿರ ರೂಪಾಯಿಯಂತೆ ರೈತರಿಗೆ ಮಾರುತ್ತಾರೆ. ಅನಿಲ್ ಕುಮಾರ್ ಅವರು ಯಾವುದೇ ಕೆಲಸ ಮಾಡಬೇಕಾದರೂ ಅದರಲ್ಲಿ ಶ್ರದ್ಧೆ ಆಸಕ್ತಿ ಹೊಂದಿರಬೇಕು ಹೈನುಗಾರಿಕೆಯನ್ನು ಶ್ರದ್ದೆಯಿಂದ ಮಾಡಿದಾಗ ಹೆಚ್ಚಿನ ಆದಾಯ ಗಳಿಸಬಹುದು ಎಂದು ಅವರು ಹೇಳಿದ್ದಾರೆ

Leave a Reply

Your email address will not be published. Required fields are marked *