Cough for phlegm home remedy ಕೆಮ್ಮು ನೆಗಡಿ ಕಫ ಸಮಸ್ಯೆ ಬಂದುಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಹಾಗೂ ಇಂತಹ ಸಮಸ್ಯೆ ಬಂದ ತಕ್ಷಣ ನಾವು ಮೆಡಿಕಲ್ ಸ್ಟೋರ್ ಗೆ ಹೋಗಿ ಮಾತ್ರೆಗಳು ಅಥವಾ ಟಾನಿಕ್ ಗಳನ್ನು ತೆಗೆದುಕೊಳ್ಳುತ್ತೇವೆ ಆದರೆ ತಕ್ಷಣಕ್ಕೆ ನಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಆದರೆ ನಮಗೆ ಮುಂದೆ ತುಂಬಾ ಸೈಡ್ ಎಫೆಕ್ಟ್ ಆಗುತ್ತದೆ ಈ ರೀತಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅದಕ್ಕಾಗಿ ಒಂದು ಸುಲಭವಾದಂತಹ ಮತ್ತು ಅದ್ಭುತವಾದಂತಹ ಮನೆಮದ್ದು ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಳೆಗಾಲ, ಚಳಿಗಾಲ ಬಂತೆಂದರೆ ಸಾಕು ಗಂಟಲಿನಲ್ಲಿ ಕಫ ಉತ್ಪತ್ತಿಯಾಗಿ ಗಂಟಲಿನಲ್ಲಿ ಕಿರಿ ಕಿರಿಯನ್ನುಂಟು ಮಾಡುತ್ತದೆ. ಇದು ಕೆಮ್ಮಿಗೆ ಕಾರಣವಾಗುತ್ತದೆ ಕೆಮ್ಮು ಉಂಟಾದರೆ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆ ಮಾಡಲೂ ಆಗದೆ, ಕೆಮ್ಮಿ ಕೆಮ್ಮಿ ಎದೆನೋವು ನಿದ್ರಾಹೀನತೆ ಸಮಸ್ಯೆಗಳು ಕಾಡತೊಡಗುತ್ತವೆ. ಇದಕ್ಕೆ ಅದೆಷ್ಟೋ ಮನೆಮದ್ದುಗಳು ಅಥವಾ ಮಾತ್ರೆ, ಸಿರಪ್ ಗಳನ್ನು ತಗೊಂಡರು ಕೆಲವೊಮ್ಮೆ ಕೆಮ್ಮು ಗುಣವಾಗದೆ, ದೀರ್ಘಕಾಲದವರೆಗೆ ಕಾಡುವುದುಂಟು.

ಆದರೆ ವೀಳ್ಯದೆಲೆಯಲ್ಲಿದೆ ಇದಕ್ಕೆ ಪರಿಣಾಮಕಾರಿ ಔಷಧಿ. ಅಷ್ಟೇ ಅಲ್ಲ, ಇದರಲ್ಲಿದೆ ಇನ್ನೂ ಹಲವಾರು ಔಷಧೀಯ ಗುಣಗಳಿವೆ. ವೀಳ್ಯದೆಲೆ ರಸಕ್ಕೆ ತುಳಸಿ ಎಲೆಯ ರಸ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿಯಾಗುತ್ತದೆ. ಒಂದರೆಡು ವೀಳ್ಯದೆಲೆಯನ್ನು ದಿನಕ್ಕೆ ಎರಡು ಮೂರು ಬಾರಿ ಜಗಿದರೆ ಕಫ ನೀರಾಗುತ್ತದೆ. ಇದರಿಂದ ಕೆಮ್ಮು ಕೂಡ ಒಂದು ಚಮಚ ವೀಳ್ಯದೆಲೆಯ ರಸವನ್ನು ಒಂದು ಚಮಚ ಜೇನುತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ.

ವೀಳ್ಯದೆಲೆಯನ್ನು ಕಿವಿಗಳ ಮೇಲೆ ಕಟ್ಟಿದರೆ ಗ್ಯಾಸ್ಟಿಕ್‌ನಿಂದ ಉಂಟಾಗುವ ತಲೆ ನೋವು ವಾಸಿಯಾಗುತ್ತದೆ. ಗಾಯಕ್ಕೆ ವೀಳ್ಯದೆಲೆಯ ರಸದ ಜೊತೆಗೆ ನಿಂಬೆ ರಸವನ್ನು ಬೆರೆಸಿ, ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ. ಕೆಮ್ಮು ಹಾಗೂ ಕಫದ ಸಮಸ್ಯೆ ಉಂಟಾದಾಗ ಒಂದು ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಬೇಕಾಗುವ ಪದಾರ್ಥಗಳು (ಮಕ್ಕಳಿಗೆ) (ಅಳತೆ ಕಪ್ = 240 ಎಂಎಲ್ )
1 ವೀಳ್ಯದೆಲೆ
9 ದಳ ತುಳಸಿ
1/2 ಚಮಚ
ಬೇಕಾಗುವ ಪದಾರ್ಥಗಳು (ದೊಡ್ಡವರಿಗೆ): (ಅಳತೆ ಕಪ್ = 240 ಎಂಎಲ್ )
2 ವೀಳ್ಯದೆಲೆ
9 ದಳ ತುಳಸಿ
ದೊಡ್ಡ ಚಿಟಿಕೆ ಒಣ ಶುಂಠಿ ಪುಡಿ

೨ – ೪ ಕಾಳುಮೆಣಸು
1/2 ಚಮಚ
ಮಕ್ಕಳಿಗೆ ಮನೆಮದ್ದು ತಯಾರಿಸುವ ವಿಧಾನ ವೀಳ್ಯದೆಲೆ ಮತ್ತು ತುಳಸಿಯನ್ನು ಚೆನ್ನಾಗಿ ತೊಳೆಯಬೇಕು.
ಎಲೆಗಳನ್ನು ಚೂರುಗಳಾಗಿ ಮಾಡಿ, ಒಂದು ಸಣ್ಣ ಬಟ್ಟಲಿನಲ್ಲಿ ಅಥವಾ ಒರಳಿನಲ್ಲಿ ತೆಗೆದುಹಾಕಲಾಗಿದೆ.

ಪುರುಷರು ಬೆಳ್ಳುಳ್ಳಿ ತಿಂದ್ರೆ ಸ್ವರ್ಗ ಸುಖ ಅಂತಾರೆ ಮಹಿಳೆಯರು, ಯಾಕೆ ಗೊತ್ತಾ ಸಂಶೋಧನೆ ಬಿಚ್ಚಿಟ್ಟ ಸತ್ಯ

ನಂತರ ಚೂರುಮಾಡಿದ ಎಲೆಗಳನ್ನು ಚೆನ್ನಾಗಿ ಗುದ್ದಿ. ಒಂದು ಬಟ್ಟೆಯ ಸಹಾಯದಿಂದ ಅಥವಾ ಕೈಬೆರಳುಗಳ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ. ಅದಕ್ಕೆ ಅರ್ಧ ಚಮಚ ಜೇನು ಬೆರೆಸಿ, ಮಗುವಿಗೆ ಕುಡಿಸಿ. ದಿನಕ್ಕೆ ಎರಡು ಬಾರಿ ಕುಡಿಸಿದರೆ ಸಾಕು. ದೊಡ್ಡವರಿಗೆ ಮನೆಮದ್ದು ತಯಾರಿಸುವ ವಿಧಾನ ವೀಳ್ಯದೆಲೆ ಮತ್ತು ತುಳಸಿಯನ್ನು ಚೆನ್ನಾಗಿ ತೊಳೆಯಬೇಕು. ಎಲೆಗಳು, ಒಣ ಶುಂಠಿ ಪುಡಿ ಕಾಳುಮೆಣಸು ಮತ್ತು ಜೇನು ತೆಗೆದುಕೊಂಡಿತು. ಎಲ್ಲವನ್ನು ಒಟ್ಟು ಸೇರಿಸಿ, ಮಡಸಿ ಜಗಿದು ತಿನ್ನಿ. ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!