ಮಾನವರಲ್ಲಿ ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ. ಈ ಕರೋನ ವೈರಸ್ ನಿಂದ ಜಗತ್ತಿನಾದ್ಯಂತ ಅನೇಕ ಜನರು ಸಾವಿಗೀಡಾಗುತ್ತಿದ್ದಾರೆ. ಚೀನಾದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡ ಈ ವೈರಸ್ ಜಗತ್ತಿನಾದ್ಯಂತ ಹರಡಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ರೋಗಕ್ಕೆ ಯಾವುದೇ ಸರಿಯಾದ ಒಂದು ಔಷಧವು ಇನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಭಾರತ ದೇಶದಲ್ಲಿ ಇದು ದೇಶವ್ಯಾಪಿ ಹರಡಿ ಅನೇಕ ಜನರ ಸಾವು ಮತ್ತು ನೋವುಗಳಿಗೆ ಕಾರಣವಾಗಿದೆ. ಆದ್ದರಿಂದ ಕರೋನಾ ನಿಯಂತ್ರಣವನ್ನು ಮನೆಯಲ್ಲಿಯೇ ಇದ್ದುಕೊಂಡು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕರೋನಾ ಬಂದ 90% ವ್ಯಕ್ತಿಗಳು ಮನೆಯಲ್ಲಿಯೇ ಇದ್ದು ಸರಿಯಾದ ಔಷಧಿಗಳನ್ನು ತೆಗೆದುಕೊಂಡು ಗುಣಮುಖವಾಗಬಹುದು. 10% ವ್ಯಕ್ತಿಗಳಿಗೆ ಉಸಿರಾಟ ಸಂಬಂಧಿ ಸಮಸ್ಯೆಗಳು ಇನ್ನಿತರ ಸಮಸ್ಯೆಗಳು ಇದ್ದವರಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವುದು ಅನಿವಾರ್ಯವಾಗಿರುತ್ತದೆ. ಈ ರೋಗಾಣುವು ಗಾಳಿಯಲ್ಲಿ ಹರಡುವುದರಿಂದ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಬಂದರೆ ಪ್ರತಿಯೊಬ್ಬರಿಗೂ ಇದು ಸಹಜವಾಗಿಯೇ ಬರುತ್ತದೆ. ಈ ರೋಗದ ಗುಣಲಕ್ಷಣಗಳು ಇಲ್ಲದಿದ್ದರೂ ಸಹ ಆ ಮನೆಯ ವ್ಯಕ್ತಿಗಳಿಗೆ ಬಂದೇ ಬರುತ್ತದೆ. ಇದಕ್ಕೆ ಮನೆಯಲ್ಲಿಯೇ ಸರಿಯಾದ ಔಷಧವನ್ನು ಮನೆಯ ಎಲ್ಲಾ ಸದಸ್ಯರು ಮಾಡಿಕೊಳ್ಳುವುದು ಉತ್ತಮ.

ಮೊದಲನೆಯದಾಗಿ ಕರೋನಾ ಪಾಸಿಟಿವ್ ಎಂದು ವ್ಯಕ್ತಿಗಳು ಮತ್ತು ಮನೆಯವರು ಮನಸ್ಸಿನಿಂದ ಭಯವನ್ನು ತೆಗೆದುಹಾಕಬೇಕು. ಜೊತೆಗೆ ಸರಿಯಾಗಿ ವಿಶ್ರಾಂತಿ ಮಾಡಬೇಕು. ಕರೋನ ಬಂದ ದಿನದಿಂದ 7 ದಿನಗಳವರೆಗೆ ಸರಿಯಾದ ವಿಶ್ರಾಂತಿಯನ್ನು ಮಾಡಬೇಕು. ಕಾರಣ ಕೊರೋನಾ ಬಂದ ಏಳು ದಿನಗಳ ನಂತರ ನಮ್ಮ ದೇಹದಲ್ಲಿ ತಾನಾಗಿಯೇ ಆಂಟಿಬಯೋಟಿಕ್ ಉತ್ಪತ್ತಿಯಾಗುತ್ತದೆ. ಇದರ ಕಾರಣ ಸರಿಯಾದ ವಿಶ್ರಾಂತಿ ಮಾಡಬೇಕಾಗುತ್ತದೆ. ಜೊತೆಗೆ ಮನೆಯನ್ನು ಹಾಗೂ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸರಿಯಾಗಿ ನಿದ್ರೆಯನ್ನು ಮಾಡುವುದು ಉತ್ತಮವಾಗಿದೆ.

ಕರೋನಾ ಬಂದ ಸಂದರ್ಭದಲ್ಲಿ ದೇಹಕ್ಕೆ ಸರಿಯಾದ ವಿಶ್ರಾಂತಿ ಅವಶ್ಯಕತೆ ಇದ್ದು ಸರಿಯಾಗಿ ನಿದ್ದೆ ಮಾಡಿದ್ದಲ್ಲಿ ದೇಹದಲ್ಲಿ ಆಂಟಿಬಯೋಟಿಕ್ ಉತ್ಪತ್ತಿ ಮಾಡಲು ಸಹಾಯಕವಾಗುತ್ತದೆ. ಜೊತೆಗೆ ಬೇಗನೇ ಜೀರ್ಣವಾಗುವಂತಹ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಪದಾರ್ಥವನ್ನು ಸೇವಿಸುವುದು ಉತ್ತಮ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ತಂಡಿ, ಕೆಮ್ಮು ಇದ್ದ ಪಕ್ಷದಲ್ಲಿ ಟೀಯನ್ನು ಮಾಡಿ ಸೇವಿ ಸುವುದು ಉತ್ತಮವಾಗಿದೆ. ಕೆಮ್ಮು ಇದ್ದ ಪಕ್ಷದಲ್ಲಿ ಮನೆಯಲ್ಲಿಯೇ ಕಷಾಯ ಮಾಡಿಕೊಂಡು ಕುಡಿಯುವುದು ಮತ್ತು ಮನೆಮದ್ದನ್ನು ಮಾಡಿ ಸೇವಿಸುವುದು ಉತ್ತಮ. ಹೀಗೆ ಮಾಡಿಕೊಂಡು ಮನೆಯಲ್ಲಿಯೇ ಕರೋನವನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!