ನಿ’ಮೋನಿಯ ಗುಣಪಡಿಸುವ 10 ಸೂತ್ರಗಳು

0 44

ನ್ಯೂಮೋನಿಯಾ ಎಂದರೆ ಸಾಮಾನ್ಯ ಜನರಿಗೆ ಏನೆಂದು ತಿಳಿದಿರುವುದಿಲ್ಲ, ಈಗ ಇದನ್ನು ಕೊರೋನಾ ನ್ಯೂಮೋನಿಯಾ ಎಂದೂ ಕರೆಯಲಾಗುತ್ತದೆ. ಹೇಗೆ ಮನೆಯಲ್ಲಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ನ್ಯೂಮೋನಿಯಾ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಉಸಿರಾಟದ ಮೇಲೆ ಪ್ರಭಾವ ಬೀರುತ್ತದೆ. ಉಸಿರಾಟದ ಪ್ರಕ್ರಿಯೆಯನ್ನು ಮೇಲ್ಭಾಗ ಹಾಗೂ ಕೆಳಭಾಗ ಎಂದು ಎರಡು ತರದಲ್ಲಿ ವಿಭಾಗಿಸಲಾಗಿದೆ. ಗಂಟಲು ಮತ್ತು ಮೂಗನ್ನು ಮೇಲ್ಭಾಗ ಹಾಗೂ ಶ್ವಾಸಕೋಶವನ್ನು ಕೆಳಭಾಗ ಎಂದು ಕರೆಯಲಾಗುತ್ತದೆ. ನೆಗಡಿ ಎಂದುದನ್ನು ತೆಗೆದುಕೊಂಡಾಗ ಬ್ಯಾಕ್ಟೀರಿಯಾ ಮೂಗಿನಲ್ಲಿ ಬಂದು ಕೂತಾಗ ಅದು ಬೆಳೆಯಲು ಪ್ರಾರಂಭಿಸುತ್ತದೆ. ಆಗ ನಮ್ಮ ದೇಹವು ಅದಕ್ಕೆ ಪ್ರತಿಕ್ರಿಯೆ ನೀಡಲು ಪ್ರಾರಂಭಿಸುತ್ತದೆ. ಆಗ ಬಿಳಿ ರಕ್ತ ಕಣಗಳು ಮೂಗಿಗೆ ಬಂದು ಸೇರಿ ಅಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಪ್ರಾರಂಭಿಸುತ್ತದೆ. ಈ ಕೊಲ್ಲುವ ಪ್ರಕ್ರಿಯೆಯನ್ನು ಇನ್ ಫ್ಲಾಮೇಷನ್ ಎಂದು ಕರೆಯುತ್ತಾರೆ. ಅಂತಹ ಜಾಗದಲ್ಲಿ ಊತ ಮತ್ತು ನೀರು ಬರುತ್ತದೆ. ನೀರು ಬರುವುದು ಉಸಿರಾಡಲು ತೊಂದರೆಯಾಗುವುದನ್ನ ನೆಗಡಿ ಎಂದು ಕರೆಯುತ್ತಾರೆ. ಈ ಕ್ರಿಯೆ ಕೆಳಭಾಗದಲ್ಲಿ ಆದಾಗ ಕೆಮ್ಮು ಮತ್ತು ಉಸಿರಾಡಲು ತೊಂದರೆಯಾಗುತ್ತದೆ ಇದನ್ನು ನ್ಯೂಮೋನಿಯಾ ಎನ್ನಲಾಗುತ್ತದೆ. ಇದು ಕೆಳಭಾಗದಲ್ಲಿ ಆದ ಸಣ್ಣ ಸೋಂಕಾಗಿದೆ . ಮುಂಚೆ ನೆಗಡಿ, ಕೆಮ್ಮು, ಕಫ ಬ್ಯಾಕ್ಟೀರಿಯಲ್ ಸೊಂಕಾಗಿದ್ದರೆ ಆಂಟಿ ಬಯೋಟಿಕ್ ಔಷಧಿ ನೀಡುತ್ತಿದ್ದರು. ವೈರಲ್ ಸೋಂಕಾಗಿದ್ದರೆ ಅದಾಗೆ ಕಡಿಮೆ ಆಗುತ್ತದೆ. ಅಂತಹ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಅಥವಾ ಎಕ್ಸರೇ ತೆಗೆಸಿದ್ದರೆ ಈಗ ಕೊವೀಡ್ ಸೋಂಕಿತರಿಗೆ ತೆಗೆಸಿದ ಸಿಟಿ ಸ್ಕ್ಯಾನ್ ಅಥವಾ ಎಕ್ಸರೆ ವರದಿ ರೀತಿಯಲ್ಲೇ ಮೊದಲು ಬರುತ್ತಿದ್ದವು ಎನ್ನುವುದು ಕೆಲ ವೈಧ್ಯರ ಹೇಳಿಕೆಯಾಗಿದೆ.

ನ್ಯೂಮೋನಿಯಾ ಇದೆ ಎಂದು ತಿಳಿಯುವುದು ಹೇಗೆಂದರೆ ಮೊದಲು ಸ್ವಲ್ಪ ಜ್ವರ, ಕೆಮ್ಮು, ಕಫ ಕೆಲವೊಂದು ಬಾರಿ ಕಫದಲ್ಲಿ ಸ್ವಲ್ಪ ಪ್ರಮಾಣದ ರಕ್ತ ಕಂಡುಬರುತ್ತದೆ. ಉಸಿರಾಟದ ತೊಂದರೆ ಹಾಗೂ ಎದೆನೋವು ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ, ಕೆಮ್ಮಿದಾಗ ಸ್ವಲ್ಪ ಚುಚ್ಚಿದ ರೀತಿಯಲ್ಲಿ ಆಗುತ್ತದೆ. ಇದರ ಲಕ್ಷಣ ಕಡಿಮೆ ಇದ್ದರೆ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರುವುದಿಲ್ಲ. ನ್ಯೂಮೋನಿಯಾ ಎಂದು ತಿಳಿಯಲು ಡಯೋಗ್ನಾಸೀಸ್ ಮಾಡಬೇಕು ಹೊರತು ಸಿಟಿ ಸ್ಕ್ಯಾನ್ ಹಾಗೂ ಎಕ್ಸರೆಯನ್ನು ಮಾಡುವ ಆವಶ್ಯಕತೆ ಇರುವುದಿಲ್ಲ. ಬ್ಯಾಕ್ಟೀರಿಯಲ್ ನ್ಯೂಮೋನಿಯಾ ಮತ್ತು ವೈರಲ್ ನ್ಯೂಮೋನಿಯಾ ಎಂದು ಕಂಡು ಹಿಡಿಯುವುದು ಕಷ್ಟ ಕೆಲವೊಂದು ಬಾರಿ ಅಸಾಧ್ಯವಾಗಿದೆ. ವೈರಲ್ ನ್ಯೂಮೋನಿಯಾ ಹಾಗೂ ಕೊರೋನಾ ನ್ಯೂಮೋನಿಯಾಕ್ಕು ಕೂಡ ಆಂಟಿಬಯೋಟಿಕ್ ಔಷಧಿಯನ್ನು ನೀಡಲಾಗುತ್ತದೆ ಏಕೆಂದರೆ ಇದು ವೈರಲ್ ನ್ಯೂಮೋನಿಯಾ ಅಥವಾ ಬ್ಯಾಕ್ಟೀರಿಯಲ್ ನ್ಯೂಮೋನಿಯಾ ಎಂದು ಗುರುತಿಸುವುದು ಅಸಾಧ್ಯವಾಗಿರುತ್ತದೆ. ಸ್ವೇಬ್ ಟೆಸ್ಟ್ ಮೂಲಕ ಪರೀಕ್ಷಿಸಿ ವೈರಸ್ ಸಿಕ್ಕಿದೆ ಎಂದು ಅದು ಕೋರೋನಾ ಎಂದು ಪರಿಗಣಿಸುವುದು ತಪ್ಪಾಗುತ್ತದೆ. ನ್ಯೂಮೋನಿಯಾ ಎಂಬುದು ಲಂಗ್ಸ್ ನಲ್ಲಿ ಆಗುವ ಇನ್ ಫೆಕ್ಷನ್ ಆಗಿರುತ್ತದೆ. ಲಂಗ್ಸ್ ನಲ್ಲಿ ವೈರಸ್ ಸಿಕ್ಕಿದ ತಕ್ಷಣ ಇದನ್ನು ಕೋವಿಡ್ ನ್ಯೂಮೋನಿಯಾ ಎಂದು ಕರೆಯುವುದು ಸರಿ ಅಲ್ಲ ಎಂಬುದು ಕೆಲ ವೈಧ್ಯರ ಹೇಳಿಕೆಯಾಗಿದೆ.

ಬ್ಯಾಕ್ಟೀರಿಯಲ್ ನ್ಯೂಮೋನಿಯಾ ಆಗಿದ್ದರೆ ಆಂಟಿಬಯೋಟಿಕ್ ನೀಡಿ ಇನ್ ಫೆಕ್ಷನ್ ಕಡಿಮೆ ಮಾಡಬಹುದು ವೈರಲ್ ನ್ಯೂಮೋನಿಯಾ ಅಥವಾ ವೈರಲ್ ಲಂಗ್ಸ್ ಇನ್ಫೆಕ್ಷನ್ ಗೆ ಟ್ರೀಟ್ಮೆಂಟ್ ಇಲ್ಲ. ದೇಹದಲ್ಲಿ ಆಂಟಿ ಬಾಡಿ ಪ್ರಾಪರ್ಟೀಸ್ ಉತ್ಪತ್ತಿಯಾಗಿ ತಾನಾಗಿಯೇ ಕಡಿಮೆ ಮಾಡುತ್ತದೆ. ಕೊರೋನಕ್ಕೆ ಎಫ್ ಡಿ ಎ ಇಂದ ಅನುಮೋದಿಸಿದ ಡ್ರಗ್ ಇಲ್ಲಿಯವರೆಗೂ ಸಿಕ್ಕಿಲ್ಲ. ಆದ್ದರಿಂದ ಕೊರೋನಾ ಪಾಸಿಟೀವ್ ಬಂದಾಕ್ಷಣ ರೋಗಿಗೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಔಷಧಿಯನ್ನು ನೀಡಿ ರೋಗಿಯ ದೇಹವನ್ನು ಸಮತೋಲನದ್ದಲ್ಲಿ ಇರುವಂತೆ ಮಾಡಬೇಕು. ಕೊರೊನಾಗೆ ಯಾವ ಔಷದಿ ಇಲ್ಲವಾಗಿದೆ. ಕೊರೊನಾ ಹೆಸರಿನಲ್ಲಿ ಬೇರೆ ರೋಗಗಳು ರೋಗಿಯನ್ನು ಕೊಲ್ಲುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗೂ ರೋಗದ ಲಕ್ಷಣ ತೀವ್ರವಿದ್ದಾಗ ಆಸ್ಪತ್ರೆಗೆ ದಾಖಲಾಗಬೇಕು. ಪಾಸಿಟೀವ್ ಬಂದಾಕ್ಷಣ ಆಸ್ಪತ್ರೆಗೆ ಹೋಗಿ ಸೇರುವ ಆವಶ್ಯಕತೆ ಇರುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.

ಮನೆಯಲ್ಲೇ ನ್ಯೂಮೋನಿಯಾ ಕಡಿಮೆ ಮಾಡಲು ತೆಗೆದುಕೊಳ್ಳುವ ಕ್ರಮಗಳು ,ಮೊದಲನೆಯದಾಗಿ ಭಯವನ್ನು ಬಿಡಬೇಕು ಏಕೆಂದರೆ ಕೆಲವೊಂದು ಜನರಲ್ಲಿ ಭಯದಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆಂಟಿ ಬಾಡಿ ಪ್ರೊಡಕ್ಷನ್ ಕಡಿಮೆಯಾಗುತ್ತದೆ. ಏನೇ ತೊಂದರೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಹಾಗೂ ಅವರ ಬಳಿ ಚಿಕಿತ್ಸೆ ಪಡೆಯುವುದರಿಂದ ಸೋಂಕು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಸಂಪೂರ್ಣವಾಗಿ ವಿಶ್ರಾಂತಿ ಮಾಡುವುದರಿಂದ ಬಹಳ ಬೇಗ ನಿಮೋನಿಯ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಸ್ವಲ್ಪ ಮುಂದೆ ಬಾಗಿ ಕುಳಿತುಕೊಳ್ಳುವುದರಿಂದ ಉಸಿರಾಡಲು ಸುಲಭವಾಗುತ್ತದೆ . ಮಗ್ಗಲಾಗಿ ಮಲಗುವುದು ಉತ್ತಮ. ಪ್ರತಿನಿತ್ಯ ಜಾಸ್ತಿ ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು.
ಬೆಚ್ಚಾಗಿರಬೇಕು, ಸುತ್ತಮುತ್ತಲೂ ತಂಪಿನ ವಾತಾವರಣ ಇರದಂತೆ ನೋಡಿಕೊಂಡರೆ ಉತ್ತಮ ನ್ಯೂಮೋನಿಯಾ ಆದಾಗ ಹಸಿವು ಕಡಿಮೆ ಇರುತ್ತದೆ ಆಗ ಬೇಕಾದಷ್ಟು ಮಾತ್ರ ಆಹಾರ ಸೇವಿಸಬೇಕು, ತರಕಾರಿಗಳು , ಹಣ್ಣುಗಳನ್ನು ಹೆಚ್ಚಾಗಿದೆ ಸೇವಿಸಬೇಕು. ರೋಗಿಯು ಇರುವ ಕೋಣೆಯಲ್ಲಿ ವೆಂಟಿಲೇಶನ್ ಇರುವಂತೆ ನೋಡಿಕೊಳ್ಳಬೇಕು.

ರೋಗಿಯು ಮಾಸ್ಕ್ ಉಪಯೋಗಿಸಬಾರದು, ಏಕೆಂದರೆ ಅವರಿಗೆ ಉಸಿರಾಡಲು ತೊಂದರೆ ಉಂಟುಮಾಡಬಹುದು. ಅಕ್ಸಿಜನ್ ಸಿಲೆಂಡರ್ ಮನೆಯಲ್ಲಿ ಇರಿಸಿಕೊಳ್ಳಬೇಕು. ಇದು ನ್ಯೂಮೋನಿಯಾ ರೋಗದ ಲಕ್ಷಣ ಹಾಗೂ ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳಲು ತೆಗದುಕೊಳ್ಳುವ ಪ್ರಮುಖ ಕ್ರಮಗಲಾಗಿವೆ.

Leave A Reply

Your email address will not be published.