ಸಾವಿರಾರು ಜನರಿಗೆ ಉಚಿತವಾಗಿ ಸಿಗುತ್ತಿದ್ದ ಆಯುರ್ವೇದ ಔಷಧಿಗೆ ತಡೆಯಾಕೆ?

0 2

ನಮ್ಮ ದೇಶದಲ್ಲಿ ಲಸಿಕೆ ಎಲ್ಲರನ್ನೂ ತಲುಪಿಲ್ಲ. ಪ್ರತಿದಿನ ಬಹಳಷ್ಟು ಜನರು ಲಸಿಕಾ ಕೇಂದ್ರಕ್ಕೆ ಹೋಗುತ್ತಾರೆ ಆದರೆ ಲಸಿಕೆ ಇಲ್ಲ ಎನ್ನುವ ಉತ್ತರ ಕೇಳಿಬರುತ್ತಿದೆ ಅದಕ್ಕಾಗಿ ಕೆಲವು ಕಡೆ ಜಗಳ, ಗೊಂದಲ ಉಂಟಾಗಿರುವುದನ್ನು ಕೂಡ ನೋಡುತ್ತೇವೆ. ಇದರ ನಡುವೆ ಆಯುರ್ವೇದ ಔಷಧಿಯನ್ನು ಕಂಡುಹಿಡಿದು ಸಾಕಷ್ಟು ಜನರು ಔಷಧಿಯನ್ನು ತೆಗೆದುಕೊಂಡು ಗುಣಮುಖರಾಗಿದ್ದಾರೆ ಆದರೆ ಸರ್ಕಾರದ ಆಯುಷ್ ಇಲಾಖೆ ಅವರ ಆಯುರ್ವೇದ ಔಷಧಿಯನ್ನು ವಿತರಿಸದಂತೆ ನಿಷೇಧ ಹೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಕೃಷ್ಣ ಪಟ್ಟಣಂ ಎಂಬ ಗ್ರಾಮದಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾದ ಆನಂದಯ್ಯ ಅವರು ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿದ್ದಾರೆ. ಅವರು ಕೋವಿಡ್ ಸೋಂಕಿನ ನಿವಾರಣೆಗಾಗಿ ಆಯುರ್ವೇದ ಔಷಧಿಯನ್ನು ಕಂಡುಹಿಡಿದು ರೋಗಿಗಳಿಗೆ ನೀಡುತ್ತಿದ್ದ ವಿಷಯ ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆದಿತ್ತು. ಆನಂದಯ್ಯ ಅವರ ಆಯುರ್ವೇದ ಔಷಧಿಯನ್ನು ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಕೃಷ್ಣಪಟ್ಟಣಂಗೆ ಬಂದಿದ್ದ ಪೋಟೋಗಳು ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು ಆದರೆ ಆನಂದಯ್ಯ ಅವರು ನೀಡುತ್ತಿದ್ದ ಕೋವಿಡ್ ನಿವಾರಣೆಯ ಆಯುರ್ವೇದ ಔಷಧವನ್ನು ಕೇಂದ್ರ ಆಯುಷ್ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ವಿಷಯದ ಬಗ್ಗೆ ಜನರು ಅಸಮಧಾನವನ್ನು ಹೊರ ಹಾಕಿದ್ದಾರೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಆನಂದಯ್ಯ ಅವರು ಔಷಧಿ ನೀಡುವ ಮೂಲಕ ಈಗಾಗಲೆ ಸಹಸ್ರಾರು ಜನರ ಜೀವವನ್ನು ಕಾಪಾಡಿದ್ದರು ಆದರೆ ಆಯುಷ್ ಇಲಾಖೆ ಅವರು ನೀಡುತ್ತಿದ್ದ ಆಯುರ್ವೇದ ಔಷಧಿಯನ್ನು ಸ್ಥಗಿತಗೊಳಿಸಿದೆ. ಆನಂದಯ್ಯ ಅವರು ನೀಡುತ್ತಿರುವ ಔಷಧಿಗೆ ಇಂತಹ ಅಡ್ಡಗಾಲು ಹಾಕುತ್ತಿರುವುದಾದರೂ ಏತಕ್ಕೆ. ಕೊರೋನ ಸಂಕಷ್ಟದಲ್ಲಿ ಜನರ ನೆರವಿಗೆ ಬಂದಿರುವ ಆನಂದಯ್ಯ ಅವರ ವಿರುದ್ಧ ಸರ್ಕಾರ ಹೀಗೆ ತಿರುಗಿ ಬೀಳಲು ಕಾರಣವೇನು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಕೊರೋನ ಪಾಸಿಟಿವ್ ಬಂದವರು ಆನಂದಯ್ಯ ಅವರಿಂದ ಔಷಧವನ್ನು ಪಡೆದ ಎರಡು-ಮೂರು ದಿನಗಳಲ್ಲೆ ಚೇತರಿಸಿಕೊಂಡು ನಂತರ ಕೋವಿಡ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ, ಅಲ್ಲದೆ ಆಕ್ಸಿಜನ್ ಲೆವೆಲ್ ಕಡಿಮೆಯಾದವರಿಗೂ ಆನಂದಯ್ಯ ಅವರು ನೀಡಿದ ಔಷಧಿಯಿಂದ ಸುಧಾರಣೆ ಕಂಡಿತ್ತು. ಇಂತಹ ಉದಾಹರಣೆಗಳು ಈಗಾಗಲೆ ಸಾಕಷ್ಟು ನಮ್ಮ ಮುಂದೆ ಇದೆ, ಈ ವಿಚಾರವನ್ನು ತನಿಖೆ ಮಾಡಲು ಬಂದಿದ್ದ ಅಧಿಕಾರಿಗಳ ಮುಂದೆಯೂ ಇಂಥದೊಂದು ಘಟನೆ ನಡೆದಿದೆ ಎಂಬ ವರದಿಯನ್ನು ಸಹ ನೋಡಬಹುದು.

ಆನಂದಯ್ಯ ಅವರು ಔಷಧಿಯ ಉತ್ತಮ ಪರಿಣಾಮದ ಕುರಿತಾಗಿ ಸುದ್ದಿ ಆದ ನಂತರ ದೊಡ್ಡ ಸಂಖ್ಯೆಯಲ್ಲಿ ಜನರು ಕೃಷ್ಣ ಪಟ್ಟಣಂಗೆ ಬರಲು ಆರಂಭಿಸಿದ್ದರು ಆದರೆ ಈ ವಿಷಯ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಕೊರೋನ ವೈರಸ್ ಗೆ ಔಷಧಿ ಎನ್ನುವ ಹೆಸರಿನಲ್ಲಿ ಆನಂದಯ್ಯನವರು ಔಷಧಿ ನೀಡುತ್ತಿರುವುದು ಕಾನೂನು ಬಾಹಿರವೆಂದು ಹೇಳಿದೆ. ಅವರು ನೀಡುತ್ತಿರುವ ಔಷಧಿಯನ್ನು ಪರೀಕ್ಷೆ ಮಾಡಿ ಅಂತಿಮ ವರದಿ ಬರುವವರೆಗೂ ಅದನ್ನು ಬಳಸುವುದಕ್ಕೆ ಅವಕಾಶವಿಲ್ಲವೆಂದು ಆಯುಷ್ ಇಲಾಖೆಯು ಆನಂದಯ್ಯ ಅವರ ಆಯುರ್ವೇದ ಔಷಧಿಯ ಮೇಲೆ ನಿಷೇಧವನ್ನು ಹೇರಿದೆ. ಆನಂದಯ್ಯ ಅವರು ನೀಡುತ್ತಿರುವ ಔಷಧಿಯಿಂದ ಯಾರಾದರೂ ಪ್ರಾಣ ಕಳೆದುಕೊಂಡರೆ ಅದಕ್ಕೆ ಯಾರು ಜವಾಬ್ದಾರಿ ಎಂದು ಸರ್ಕಾರ ಪ್ರಶ್ನಿಸಿದೆ ಆದರೆ ವಾಸ್ತವವನ್ನು ನೋಡಿದರೆ ಸರ್ಕಾರ ನೀಡುತ್ತಿರುವ ಆಧುನಿಕ ಔಷಧಿಗಳಿಂದಲೂ ಬಹಳಷ್ಟು ಜನರು ಸಾಯುತ್ತಿದ್ದಾರೆ, ಅಲ್ಲದೆ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಔಷಧಿಗಳ ಅಡ್ಡ ಪರಿಣಾಮದಿಂದ ಈಗಾಗಲೇ ಬ್ಲಾಕ್, ವೈಟ್ ಹಾಗೂ ಯೆಲ್ಲೋ ಫಂಗಸ್ ಎಂಬ ಹೊಸ ಹೊಸ ಸೋಂಕುಗಳು ಕಾಣಿಸಿಕೊಂಡಿದೆ.

ಹೀಗಿರುವಾಗ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಆನಂದಯ್ಯನವರ ಔಷಧಿಗೆ ಆಯುಷ್ ಇಲಾಖೆ ಬ್ರೇಕ್ ಹಾಕಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ ಅಲ್ಲದೆ ಇದು ಎಷ್ಟರಮಟ್ಟಿಗೆ ಸರಿ. ಆನಂದಯ್ಯನವರು ಗಿಡಮೂಲಿಕೆಗಳನ್ನು ಬಳಸಿಕೊಂಡು ಕೊರೋನಾಗೆ ಔಷಧ ನೀಡುತ್ತಿದ್ದಾರೆ ಹೊರತು ಬೇರೇನೂ ಕೆಮಿಕಲ್ಸ್ ಸೇರಿಸಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಕೊಟ್ಟು ಕೂಡಾ ಗುಣಮುಖರಾಗದೆ ಬಹಳಷ್ಟು ಜನ ಸಾಯುತ್ತಿರುವ ಈ ಸಂದರ್ಭದಲ್ಲಿ, ಉಚಿತವಾಗಿ ನೀಡಲಾಗುತ್ತಿದ್ದ ಆಯುರ್ವೇದ ಔಷಧಿಗೆ ಆಯುಷ್ ಇಲಾಖೆ ನಿರ್ಬಂಧ ಹೇರಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ. ಜನರು ಆಯುರ್ವೇದ ಔಷಧ ಪಡೆದು ಜೀವ ಉಳಿಸಿಕೊಂಡರೆ ಅದರಲ್ಲಿ ತಪ್ಪೇನಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಇಂತಹ ಸಮಯದಲ್ಲಿ ಜನರ ಜೀವ ಉಳಿಸಲು ಸಿಕ್ಕ ಆಯುರ್ವೇದ ಔಷಧಿಯ ಬಗ್ಗೆ ಸರ್ಕಾರ ತಾಳಿದ ಈ ನಿಲುವು ನಿಜಕ್ಕೂ ಆಶ್ಚರ್ಯ ತರುತ್ತದೆ. ಸರ್ಕಾರದ ಈ ಧೋರಣೆ ಸರಿ ಅಲ್ಲ ಆನಂದಯ್ಯ ಅವರ ಔಷಧಿಯ ಪರೀಕ್ಷೆ ನಡೆಸಬೇಕು ಎನ್ನುವುದಾದರೆ ಅದಕ್ಕೆ ವಿಳಂಬ ಮಾಡದೆ ಪರೀಕ್ಷೆ ನಡೆಸಿ ಸರಿ ಇದ್ದರೆ ಔಷಧಿಯನ್ನು ಹಂಚಲು ಅವಕಾಶ ಕೊಟ್ಟರೆ ಬಹಳಷ್ಟು ಜನರ ಪ್ರಾಣ ಉಳಿಯುವ ಸಾಧ್ಯತೆಗಳಿವೆ.

Leave A Reply

Your email address will not be published.