ನಮ್ಮ ಸಮಾಜದಲ್ಲಿ ಮೂಢನಂಬಿಕೆ ಇನ್ನೂ ಪೂರ್ತಿಯಾಗಿ ಕಡಿಮೆ ಆಗಿಲ್ಲ. ಈಗಲೂ ಕೆಲವು ಕಡೆ ಮೂಢನಂಬಿಕೆಯಿಂದ ಕುರಿ, ಕೋಳಿ ಬಲಿ ಕೊಡುವುದು ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಜನರು ಎಲ್ಲಿಯವರೆಗೆ ಮೂಢನಂಬಿಕೆಯನ್ನು ನಂಬುತ್ತಾರೋ ಅಲ್ಲಿಯವರೆಗೆ ಮೂಢನಂಬಿಕೆಯ ಹೆಸರಿನಲ್ಲಿ ಹಣ ಮಾಡುವವರು ಇರುತ್ತಾರೆ. ಹುಲಿಕಲ್ ನಟರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಮೂಢನಂಬಿಕೆಯಾದ ಅಂಜನ ಪ್ರಯೋಗದ ಬಗ್ಗೆ ಜನರಿಗೆ ಏನು ತಿಳಿಸಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಜನರು ಅಂಜನ ಪ್ರಯೋಗ ಮಾಡುತ್ತಾರೆ. ಅಂಜನ ಪ್ರಯೋಗದ ಬಗ್ಗೆ ಯೂಟ್ಯೂಬ್ ನಲ್ಲಿ ನೋಡಿದಾಗ ಅದೊಂದು ವಿದ್ಯೆ, ಅದನ್ನು ಪಡೆದುಕೊಳ್ಳಲು ಸಾಧನೆ ಮಾಡಬೇಕು, ಅಂಜನ ಪ್ರಯೋಗದಿಂದ ಇಡೀ ಜಗತ್ತನ್ನು ನೋಡಬಹುದು ಎಂಬ ಮಾಹಿತಿ ಲಭ್ಯವಾಗುತ್ತದೆ. ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಅಂಜನ ತಯಾರಿಸುವುದು ಹೇಗೆ, ಅಂಜನ ಪ್ರಯೋಗದಿಂದ ಇಡೀ ಜಗತ್ತನ್ನು ನೋಡುವುದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ವಿಡಿಯೋಗಳು ಬಿಡುಗಡೆಯಾಗಿದ್ದವು ಅಲ್ಲದೆ ಕೆಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ಅಂಜನ ಪ್ರಯೋಗದ ಮೂಲಕ ಕಾಣೆಯಾದವರನ್ನು ಹುಡುಕಿಕೊಡುವುದು, ಅಡಗಿರುವ ನಿಧಿಯ ಬಗ್ಗೆ ಮಾಹಿತಿ ಕೊಡುವುದನ್ನು ನೋಡಿದ್ದೇವೆ. ಹುಲಿಕಲ್ ನಟರಾಜ್ ಅವರು ಅಂಜನ ಪ್ರಯೋಗವನ್ನು ಸಾಕಷ್ಟು ಗುರುಗಳ ಹತ್ತಿರ ಹೋಗಿ ತರಬೇತಿ ಪಡೆದರು. ಕೆಲವು ಗುರುಗಳು ಅಂಜನ ಪ್ರಯೋಗವನ್ನು ಮಾಡಬೇಕಾದರೆ ಸಾಧನೆ ಮಾಡಬೇಕು, ಸಿದ್ಧಿಯನ್ನು ಪಡೆಯಬೇಕು, ಶ್ರಮವಹಿಸಬೇಕು ಎಂದು ಹೇಳಿದರು ಅದರಂತೆ ಹುಲಿಕಲ್ ನಟರಾಜ್ ಅವರು ಶ್ರಮಪಟ್ಟು ಅಂಜನ ಪ್ರಯೋಗವನ್ನು ಸಿದ್ಧಿಸಿಕೊಂಡರು, ಅಂಜನ ಪ್ರಯೋಗ ಮಾಡುವವರು ಹೇಳಿದಂತೆ ಪ್ರಾಯೋಗಿಕವಾಗಿ ಮಾಡಿದ್ದಾರೆ. ಎಲ್ಲರೂ ಅಂಜನ ಪ್ರಯೋಗವನ್ನು ಇನ್ನೊಬ್ಬರಿಗೆ ಹೇಳಿ ಕೊಡುವುದಿಲ್ಲ ಆದರೆ ಒಬ್ಬರು ಗುರೂಜಿ ನಾನು ಅಂಜನವನ್ನು ತಯಾರಿಸಿದ್ದೇನೆ, ನಿಮಗೆ ಅದೃಷ್ಟ ಇದ್ದರೆ ಜಗತ್ತನ್ನು ಅಂಜನ ಪ್ರಯೋಗದ ಮೂಲಕ ನೋಡಬಹುದು ಎಂದು ಹೇಳಿದರು. ಹುಲಿಕಲ್ ನಟರಾಜ್ ಅವರು ಗುರೂಜಿ ಹೇಳಿದಂತೆ ಮಾಡಿದರು‌. ಅಂಜನ ಪ್ರಯೋಗವನ್ನು ಹಲವಾರು ಜನರು ವಿವಿಧ ರೀತಿಯಲ್ಲಿ ಮಾಡುತ್ತಾರೆ. ಕಮಲದ ಹೂವು ಮತ್ತು ಔಡಲ ಗಿಡವನ್ನು ಸೇರಿಸಿ ಅಂಕೋಲೆ ಎಣ್ಣೆಯನ್ನು ತಯಾರಿಸಬೇಕು. ಅಂಕೋಲೆ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬೇಕು. ಒಂದು ಪ್ಲೇಟಿನ ತುದಿಯ ಭಾಗಕ್ಕೆ ಸ್ವಲ್ಪ ತುಪ್ಪವನ್ನು ಸವರಬೇಕು. ಪ್ಲೇಟಿಗೆ ಹಾಕಿರುವ ತುಪ್ಪವನ್ನು ದೀಪದಿಂದ ಸುಡಬೇಕು ಆಗ ಅಂಜನ ತಯಾರಾಗುತ್ತದೆ ಅದನ್ನು ವೀಳ್ಯದೆಲೆ ಅಥವಾ ನಿಂಬೆ ಹಣ್ಣಿನ ಮೇಲೆ ಸವರುತ್ತಾರೆ. ನಂತರ ಮಂತ್ರೋಪಚಾರಣೆ ಮಾಡಿಕೊಳ್ಳುತ್ತಾ ಸವರಿಕೊಂಡ ಅಂಜನವನ್ನು ನೋಡುತ್ತಾರೆ ಇದರಿಂದ ಇಡೀ ಜಗತ್ತನ್ನು ನೋಡಬಹುದು ಎಂದು ಹೇಳುತ್ತಾರೆ.

ಅಂಜನ ಪ್ರಯೋಗ ಎನ್ನುವುದು ಸತ್ಯ, ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ, ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಬಹುದು, ನಿಧಿಯನ್ನು ಹುಡುಕಬಹುದು, ಯಾರು ನಮ್ಮ ಮೇಲೆ ವಾಮಾಚಾರ ಮಾಡಿದ್ದಾರೆ ಎನ್ನುವುದನ್ನು ನೋಡಬಹುದು ಎಂದು ಅಂದಿನಿಂದ ಇಂದಿನವರೆಗೂ ಕೆಲವರು ನಂಬಿಸಿಕೊಂಡು ಬಂದಿದ್ದಾರೆ.‌ ಹುಲಿಕಲ್ ನಟರಾಜ್ ಅವರು ಅಂಜನ ಪ್ರಯೋಗದ ಮೂಲಕ ಭವಿಷ್ಯವನ್ನು ನುಡಿಯಬಹುದು ಎನ್ನುವುದಾದರೆ ಕೊರೋನ ವೈರಸ್ ನಿಂದ ಏನಾಗುತ್ತದೆ ಎಂಬುದನ್ನು ಮೊದಲೆ ಏಕೆ ನೋಡಲಿಲ್ಲ. ಅಂಜನ ಪ್ರಯೋಗ ಸತ್ಯವಾಗಿದ್ದರೆ ಇಂದು ಯಾರೂ ಮಾಸ್ಕ್ ಹಾಕಿಕೊಳ್ಳುತ್ತಿರಲಿಲ್ಲ, ಸ್ಯಾನಿಟೈಸರ್ ಬಳಕೆ ಮಾಡುತ್ತಿರಲಿಲ್ಲ, ಮನೆಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ ಎಂದು ಅಂಜನ ಪ್ರಯೋಗದ ಬಗ್ಗೆ ಅವರು ಮಾತನಾಡಿದರು. ಅಂಜನ ಪ್ರಯೋಗ ಸತ್ಯವಾಗಿದ್ದರೆ ಪೋಲಿಸರು, ಅಧಿಕಾರಿಗಳು ಬೇಕಾಗಿರಲಿಲ್ಲ. ಎಲ್ಲಿ ಕಳ್ಳತನ ನಡೆಯುತ್ತಿದೆ ಎಂಬುದನ್ನು ಮೊದಲೇ ತಿಳಿದು ಕಳ್ಳರನ್ನು ಹಿಡಿಯಬಹುದಿತ್ತು. ಯೂಟ್ಯೂಬ್ ಮೂಲಕ, ಸಾಮಾಜಿಕ ಜಾಲತಾಣದ ಮೂಲಕ ಅಂಜನ ಪ್ರಯೋಗದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರು ಇನ್ನಾದರೂ ಬಿಟ್ಟುಬಿಡಿ, ಒಂದುವೇಳೆ ಅಂಜನ ಪ್ರಯೋಗ ನಿಜವಾಗಿದ್ದರೆ ಕೊರೋನ ಮೂರನೇ ಅಲೆ ಯಾವಾಗ ಬರುತ್ತದೆ ಎಂಬುದನ್ನು ತಿಳಿಸಿ ಎಂದು ಅಂಜನ ಪ್ರಯೋಗ ಮಾಡುವವರಿಗೆ ಹೇಳಿದ್ದಾರೆ ಅಲ್ಲದೆ ಅವರು ನನ್ನ ಪ್ರಕಾರ ಅಂಜನ ಪ್ರಯೋಗ ಎನ್ನುವುದು ಶುದ್ಧ ಸುಳ್ಳು ಅದನ್ನು ಮೂಢನಂಬಿಕೆ ಎಂದು ಜನರಿಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವ ಅಧ್ಯಕ್ಷರಾದ ಡಾಕ್ಟರ್ ಅಂಜನಪ್ಪ ಅವರು ಅಂಜನ ಪ್ರಯೋಗಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ, ಅದನ್ನು ನಂಬಲು ಅಸಾಧ್ಯ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಇನ್ನೊಬ್ಬ ಗೌರವಾಧ್ಯಕ್ಷರಾದ ಲೋಕೇಶ್ವರ್ ನಿವೃತ್ತ ಎಸಿಪಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಂಜನ ಪ್ರಯೋಗದ ಬಗ್ಗೆ ಸಾಕಷ್ಟು ಕಂಪ್ಲೆಂಟ್ಸ್ ಬಂದಿದ್ದವು. ಕೆಲವರು ಅಂಜನ ಪ್ರಯೋಗದ ಮೂಲಕ ಹಣ ತೆಗೆದುಕೊಂಡು ಸುಳ್ಳು ಮಾಹಿತಿಯನ್ನು ಕೊಡುತ್ತಾರೆ. ಕೆಲವರು ಅಂಜನ ಪ್ರಯೋಗವನ್ನು ದೊಡ್ಡಸ್ಥಿಕೆಗೋಸ್ಕರ ಮಾಡಿದರೆ, ಇನ್ನು ಕೆಲವರು ದುಡ್ಡಿನ ಆಸೆಗಾಗಿ ಮಾಡುತ್ತಾರೆ. ಅಂಜನ ಪ್ರಯೋಗ ಎನ್ನುವುದು ಮೂಢನಂಬಿಕೆ ಯಾರು ನಂಬಬೇಡಿ ಎಂದು ಅವರು ಜನರಲ್ಲಿ ಜಾಗೃತಿ ಮೂಡಿಸಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಮತ್ತೊಬ್ಬ ಗೌರವಾಧ್ಯಕ್ಷರಾದ ಉಮೇಶ್ ಎಸ್ ಕೆ ನಿವೃತ್ತ ಎಸಿಪಿ ಅವರು ಕೆಲವರು ಅಂಜನ ಪ್ರಯೋಗದ ಮೂಲಕ ಬಡವರನ್ನು, ಅನಕ್ಷರಸ್ಥರನ್ನು ಸುಲಭವಾಗಿ ನಂಬಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಇಂಥವರನ್ನು ನಾನು ಜೈಲಿಗೆ ಹಾಕಿದ್ದೇನೆ, ಜನರು ಎಂದಿಗೂ ಇಂಥವರನ್ನು ನಂಬಬಾರದು ಎಂದು ಜನತೆಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂಜನ ಪ್ರಯೋಗ ಎನ್ನುವುದು ಒಂದು ಮೂಢನಂಬಿಕೆ ಅದನ್ನು ನಂಬಿಸಿ ಬಹಳಷ್ಟು ಜನರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಅನಕ್ಷರಸ್ಥರು, ಬಡವರು ಸುಲಭವಾಗಿ ಮೂಢನಂಬಿಕೆಯನ್ನು ನಂಬುವುದರಿಂದ ಹಲವಾರು ಬಡವರ, ನಿರ್ಗತಿಕರ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜನರಲ್ಲಿ ಮೂಢನಂಬಿಕೆಯ ಬಗ್ಗೆ ಜಾಗೃತಿ ಈ ಮೂಲಕ ಮೂಡಲಿ ಎಂದು ಆಶೀಸೋಣ.

Leave a Reply

Your email address will not be published. Required fields are marked *