ಕೊರೊನ 2ನೇ ಅಲೆಯಿಂದ ಪ್ರಾ’ಣ ಉಳಿಸಿಕೊಳ್ಳಲು ಏನ್ ಮಾಡಬೇಕು ನಮ್ಮಲ್ಲೇ ಯಾಕೆ ಜಾಸ್ತಿ ಆಗಿದೆ

0 0

ಒಂದನೆಯ ಅಲೆಯ ಕೊರೋನ ವೈರಸ್ ನಂತರ ಇದೀಗ ಎರಡನೆಯ ಅಲೆಯ ಕೊರೋನ ವೈರಸ್ ನಮ್ಮೆಲ್ಲರನ್ನು ಕಾಡುತ್ತಿದೆ. ಕೊರೋನ ವೈರಸ್ ಪ್ರಭಾವದಿಂದ ನಾವು ಬಹಳಷ್ಟು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರತಿದಿನ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆಯಿಂದ ನರಳಾಡುತ್ತಿರುವ ರೋಗಿಗಳನ್ನು ನೋಡಬಹುದು. ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ನಿಯಂತ್ರಣಕ್ಕೆ ಸಿಗದೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಕೊರೋನ ವೈರಸ್ ಬಗ್ಗೆ ಬಹಳಷ್ಟು ಜನರು ನಿರ್ಲಕ್ಷ ವಹಿಸುತ್ತಿದ್ದಾರೆ. ಆಯುರ್ವೇದ ತಜ್ಞರ ಪ್ರಕಾರ ವೈರಸ್ ಪರಿಣಾಮ ಹೇಗಿರುತ್ತದೆ. ನಿರ್ಲಕ್ಷ ವಹಿಸುತ್ತಿರುವುದು ಸರಿಯೆ, ತಪ್ಪೆ ಎಂದು ಈ ಲೇಖನದಲ್ಲಿ ನೋಡೋಣ.

ಎಲ್ಲಿ ನೋಡಿದರೂ ಕೊರೋನ, ಕೊರೋನ, ಕೊರೋನ. ದಿನಬೆಳಗಾದರೆ ನ್ಯೂಸ್ ಚಾನೆಲ್ ಗಳಲ್ಲಿ ಹಾಗೂ ಸುತ್ತಮುತ್ತ ಕೊರೋನದಿಂದ ಅಷ್ಟು ಜನ ಸತ್ತರು, ಇಂದಿನ ಸೋಂಕಿತರ ಸಂಖ್ಯೆ ಇಷ್ಟು ಎನ್ನುವುದನ್ನೆ ಕೇಳುತ್ತಿದ್ದೇವೆ. 2ನೆ ಅಲೆಯ ಕೊರೋನ ನಮ್ಮೆಲ್ಲರನ್ನು ಬೆಚ್ಚಿಬೀಳಿಸುತ್ತಿದೆ. ಎರಡನೆಯ ಕೊರೋನ ತೀವ್ರ ಸ್ವರೂಪದಲ್ಲಿದ್ದು, ವೇಗವಾಗಿ ಹರಡುತ್ತಿದೆ. ಆದರೆ ಬಹಳಷ್ಟು ಜನರು ಎರಡನೆಯ ಕೊರೋನ ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಎರಡನೆ ಅಲೆಯ ಕೊರೋನ ವೈರಸ್ ಬಗ್ಗೆ ಜನರಲ್ಲಿ ಭಯ ಇರಬೇಕು. ಇದುವರೆಗೂ ಬಂದಂತಹ ವೈರಸ್ ಗಳನ್ನು, ಸಾಂಕ್ರಾಮಿಕ ರೋಗಗಳ ಬಗ್ಗೆ ಅಧ್ಯಯನ ಮಾಡಿದ ನಂತರ ಆಯುರ್ವೇದ ತಜ್ಞರ ಪ್ರಕಾರ ಯಾವುದೆ ಸಾಂಕ್ರಾಮಿಕ ರೋಗವು ಮೂರು ಅಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಯಾವುದೆ ವೈರಸ್ ಕಾಣಿಸಿಕೊಂಡ ಪ್ರಾರಂಭದಲ್ಲಿ ತೀವ್ರ ಸ್ವರೂಪವಾಗಿರುವುದಿಲ್ಲ. ಎರಡನೆ ಅಲೆಯ ವೈರಸ್ ತೀವ್ರ ಸ್ವರೂಪದ ಪರಿಣಾಮವನ್ನುಂಟುಮಾಡುತ್ತದೆ. ಮೂರನೆ ಸಲ ಇನ್ನು ಹೆಚ್ಚಿನ ಪರಿಣಾಮವನ್ನು ಹೊಂದಿರುತ್ತದೆ. ಮನುಷ್ಯರಲ್ಲಿ ಹೇಗೆ ಒಂದು ಜನರೇಷನ್ ಗಿಂತ ಇನ್ನೊಂದು ಜನರೇಷನ್ ಹುಟ್ಟಿದವರು ಚುರುಕಾಗಿರುತ್ತಾರೊ ಹಾಗೆ ವೈರಸ್ ಗಳಲ್ಲಿಯೂ ಒಂದು ಅಲೆಯಿಂದ ಇನ್ನೊಂದು ಅಲೆಯ ವೈರಸ್ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಮೂರನೆ ಅಲೆಯಲ್ಲಿ ಬರುವ ವೈರಸ್ ಇನ್ನು ತೀವ್ರ ಸ್ವರೂಪವನ್ನು ಹೊಂದಿರುತ್ತದೆ.

ವೈರಸ್ ಗಳು ಮನುಷ್ಯರಿಗಿಂತಲೂ ಬುದ್ಧಿವಂತರು ಒಂದು ಸಂತತಿಯಲ್ಲಿ ಮನುಷ್ಯರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ, ಅಷ್ಟಾಗಿ ಅಟ್ಯಾಕ್ ಮಾಡುವುದಿಲ್ಲ. ಎರಡನೆ ಸಂತತಿಯ ವೈರಸ್ ಗಳು ವೇಗವಾಗಿ ಹರಡುತ್ತದೆ ಮತ್ತು ತೀವ್ರ ಸ್ವರೂಪವನ್ನು ಹೊಂದಿರುತ್ತದೆ. ಮೂರನೆಯ ಅಲೆಯ ವೈರಸ್ ಗಳು ಹೆಚ್ಚು ಬಲವಾಗುತ್ತದೆ. ವೈರಸ್ ಬಗ್ಗೆ ಜನರಲ್ಲಿ ಎಚ್ಚರಿಕೆಯ ಭಯವಿರಲಿ. ಸರ್ಕಾರ ಮಾಡಿದಂತಹ ರೂಲ್ಸ್ ಹ್ಯಾಂಡ್ ವಾಷ್ ಮಾಡುವುದು, ಮಾಸ್ಕ್ ಧರಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ರೂಲ್ಸ್ ಗಳನ್ನು ತಪ್ಪದೆ ಪಾಲಿಸುವುದರೊಂದಿಗೆ ಅನೇಕ ಕಷಾಯಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಆ ಕಷಾಯಗಳನ್ನು ಕುಡಿಯುವುದರಿಂದ ವೈರಸ್ ನಿಂದ ಆಗುವ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ಕಷಾಯಗಳಲ್ಲಿ ತುಳಸಿ ಎಲೆ, ಶುಂಠಿ, ಅರಿಶಿಣ ಇವುಗಳನ್ನು ಹೆಚ್ಚು ಬಳಸಬೇಕು. ಹಾಗೆಯೆ ಮನೋಸ್ಥೈರ್ಯ ಮುಖ್ಯವಾಗಿದೆ. ಮನಸ್ಸಿನ ಧೈರ್ಯ ದೇಹದ ಸ್ಥಿರತೆಗೆ ಕಾರಣವಾಗುತ್ತದೆ ಆದ್ದರಿಂದ ಧೈರ್ಯ ತಂದುಕೊಳ್ಳಬೇಕು. ಮನೋಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು.

ಬೇಸಿಗೆ ಕಾಲದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ. ಬೆಚ್ಚನೆಯ ತೇವಾಂಶವಿರುವ ಜಾಗಗಳಲ್ಲಿ ವೈರಸ್ ಹುಟ್ಟಿಕೊಳ್ಳುತ್ತದೆ. ಬೇಸಿಗೆ ಕಾಲದಲ್ಲಿ ವೈರಸ್ ಹುಟ್ಟಿಕೊಳ್ಳಲು ಸಮಂಜಸವಾಗಿ ಇರುವ ವಾತಾವರಣ ಸೃಷ್ಟಿಯಾಗುತ್ತದೆ ಹಾಗಾಗಿ ಈ ಸಮಯದಲ್ಲಿ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸ್ವಚ್ಛಂದವಾಗಿ ಗಾಳಿ, ಬಿಸಿಲು ಬರುವ ಪ್ರದೇಶಗಳಲ್ಲಿ ಇರುವುದು ಉತ್ತಮ. ಬೆವರು ಬರದಂತೆ ನೋಡಿಕೊಳ್ಳಿ, ಆದಷ್ಟು ಕಾಟನ್, ಖಾದಿ ಬಟ್ಟೆಗಳನ್ನು ಧರಿಸಿ ಹೀಗೆ ಮಾಡುವುದರಿಂದ ಕೊರೋನ ವೈರಸ್ ಅಲ್ಲದೆ ಯಾವುದೆ ವೈರಸ್ ನಿಂದ ನಮ್ಮ ದೇಹವನ್ನು ನಾವು ರಕ್ಷಿಸಿಕೊಳ್ಳಬಹುದು. ಈ ಮಾಹಿತಿಯನ್ನು ಸಾಧ್ಯವಾದಷ್ಟು ಎಲ್ಲರಿಗೂ ತಿಳಿಸಿ, ಇನ್ನಾದರೂ ಎಚ್ಚೆತ್ತುಕೊಳ್ಳಿ.

Leave A Reply

Your email address will not be published.