ಅಡುಗೆಗೆ ಸಾಸಿವೆ ಬಳಸುವುದರಿಂದ ಏನಾಗುತ್ತೆ? ತಿಳಿಯಬೇಕಾದ ವಿಷಯ

0 1

ಪ್ರತೀ ಅಡುಗೆ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿಗೂ ನಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ ಇರತ್ತೆ. ಈ ಒಂದು ವಸ್ತು ನಮ್ಮ ವಯಸ್ಸು ತಿಳಿಯದಂತೆ ಮಾಡತ್ತೆ, ಚರ್ಮಕ್ಕೆ ಕಾಂತಿ ಕೊಡತ್ತೆ ಹಾಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಈ ಒಂದು ವಸ್ತು ಬಳಸುವುದರಿಂದ ಸೌಂದರ್ಯ ಕೂಡ ಹೆಚ್ಚು ಆಗತ್ತೆ. ಹಾಗಿದ್ರೆ ಇಷ್ಟಕ್ಕೂ ಅದ ವಸ್ತು ಯಾವುದು? ಅದರ ಉಪಯೋಗಗಳು ಏನು? ಅದನ್ನ ತಿಳಿಸಿಕೊಡ್ತೀವಿ ನೋಡಿ ಈ ಲೇಖನದಲ್ಲಿ.

ಈಗಾಗಲೇ ಮಳೆಗಾಲ ಆರಂಭವಾಗಿದೆ ರೈತರು ಬಿತ್ತನೆಯ ಕಾರ್ಯ ಶುರು ಮಾಡಿದ್ದಾರೆ. ಬರಡು ನೆಲ ಹಸನಾಗಿ ಹಸಿರಾಗುವ ಈ ಸಮಯದಲ್ಲಿ ಅದೊಂದು ವಸ್ತುವನ್ನು ತಮ್ಮ ಇತರ ಬೆಳೆಗಳ ಜೊತೆಗೆ ಭೂತಾಯಿಯ ಮಡಿಲಿಗೆ ಚೆಲ್ಲುತ್ತಾರೆ. ಬೆಳೆಗಳ ಜೊತೆಗೆ ತಾನು ಬೆಳೆದು ನಿಲ್ಲುವ ಈ ಗಿಡ ಕ್ರಿಮಿ ಕೀಟಗಳಿಂದ ರೈತನ ಮೂಲ ಬೆಳೆಯನ್ನು ಕಾಪಾಡುತ್ತದೆ. ಹಾಗೇ ಬೆಳೆ ಕೊಯ್ಯುವ ಹೊತ್ತಿಗೆ ತಾನು ಕೂಡಾ ಕಾಳಾಗಿ ಕಪ್ಪು ಚಿನ್ನದಂತೆ ರೈತನ ಮನೆ ಸೇರತ್ತೆ. ಈ ಕಾಳು ಚಿಕ್ಕದಾದರೂ ಇದರ ಉಪಯೋಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ಸಾಸಿವೆ ಕಾಳು.

ಸಾಸಿವೆಯನ್ನು ಬಾರಿ ಒಗ್ಗರಣೆಯನ್ನು ನೋಡಿದ ಜನರಿಗೆ ಇದರ ಉಪಯೋಗದ ಬಗ್ಗೆ ಹೆಚ್ಚು ಗೊತ್ತಿರಲ್ಲ. ಆದ್ರೆ ಈ ಸಾಸಿವೆ ಕಾಲು ನಮ್ಮ ಆರೋಗ್ಯಕ್ಕೆ ತುಂಬಾ ಆರೋಗ್ಯಕಾರಿ. ಅದರಲ್ಲೂ ಈ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಸಾಕಷ್ಟು ಉಪಯೋಗಗಳು ಇವೆ. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸಾಸಿವೆ ಎಣ್ಣೆಯನ್ನು ಬಳಸುವುದಿಲ್ಲ. ಅದೇ ನೀವು ಉತ್ತರ ಭಾರತದ ಕಡೆಗೆ ಹೋದರೆ ಅಲ್ಲಿ ಸಾಸಿವೆ ಎಣ್ಣೆಯನ್ನು ಬಿಟ್ಟು ಬೇರೆ ಎಣ್ಣೆಯ ಬಳಕೆಯೇ ಇರಲ್ಲ. ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಹೃದಯ ಸಂಬಂಧಿತ ಖಾಯಿಲೆಗಳು ದೂರ ಆಗುತ್ತವೆ. ಸಣ್ಣ ಆಗಬೇಕು ಅಂದುಕೊಂಡವರಿಗೆ ಸಾಸಿವೆ ಎಣ್ಣೆ ತುಂಬಾ ಸಹಾಯ ಮಾಡುತ್ತದೆ. ಸಂಧಿವಾತ ಹಾಗೂ ಕಾಲು ನೋವಿಗೂ ಸಾಸಿವೆ ಎಣ್ಣೆ ಬ್ರಹ್ಮಾಸ್ತ್ರ. ಈ ಸಾಸಿವೆ ಎಣ್ಣೆಯಲ್ಲಿ ಐರನ್, ಮಾಂಗನೀಸ್ ಹಾಗೂ ತಾಮ್ರದಂತಃ ಶಕ್ತಿ ಇರುವುದರಿಂದ ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಎಣ್ಣೆಯಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಲ್ ಅಂಶ ಮೂತ್ರಕೋಶ, ಮುತ್ರ ನಾಳ ಹಾಗೂ ಹೊಟ್ಟೆಯಲ್ಲಿ ಇರುವ ಸಾಕಷ್ಟು ಬ್ಯಾಕ್ಟೀರಿಯ ಗಳನ್ನು ನಿವಾರಣೆ ಮಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಇರುವ ಕ್ಯಾರೋಟಿನ್, ಜಿಯೋಕ್ಸ್ಯಿನ್, ವಿಟಮಿನ್ ಗಳು ಇರುವುದರಿಂದ ಮನುಷ್ಯನ ಚರ್ಮದ ಆರೋಗ್ಯವನ್ನು ಕಾಪಾಡುವುದರಿಂದ ವಯಸ್ಸು ಹೆಚ್ಚು ಆಗಿದ್ದನ್ನು ತಿಳಿಸುವುದಿಲ್ಲ. ಹೀಗಾಗಿಯೇ ಉತ್ತರ ಭಾರತದ ಜನರು ಅವರ ಅಡುಗೆಯಲ್ಲಿ ಅತೀ ಹೆಚ್ಚು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ.

ನೆನಪಲ್ಲಿ ಇಡಬೇಕಾದ ವಿಷಯ ಎಂದರೆ, ಪ್ರಾದೇಶಿಕವಾಗಿ ನಾವು ಏನನ್ನು ಬೆಳೆಯುತ್ತೇವೆ ಅದನ್ನೇ ಆಹಾರವಾಗಿ ಸೇವಿಸಿದರೆ ಬಹಳ ಉತ್ತಮ. ಉತ್ತರ ಭಾರತದ ಜನರಿಗೆ ಸಾಸಿವೆ ಎಣ್ಣೆಯಿಂದ ಸಿಗುವ ಎಲ್ಲ ಉಪಯೋಗಗಳು ನಮಗೆ ಕೊಬ್ಬರಿ ಎಣ್ಣೆಯಿಂದ ಸಿಗತ್ತೆ. ಆದರೆ ಸೌಂದರ್ಯ ವರ್ಧಕಾವಾಗಿ ನಾವು ಸಾಸಿವೆ ಎಣ್ಣೆಯನ್ನು ಬಳಕೆ ಮಾಡಬಹುದು. ಸಾಸಿವೆ ಎಣ್ಣೆ ಮುಖದ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಸ್ಕಿನ್ ಟ್ಯಾನ್ ಆಗಿದ್ದರೆ, ಸ್ವಲ್ಪ ಮೊಸರಿಗೆ ಒಂದೆರಡು ಹನಿ ಸಾಸಿವೆ ಎಣ್ಣೆ ಹಾಗೂ ನಿಂಬೆ ರಸ ಬೆರೆಸಿ ಸ್ಕಿನ್ ಟ್ಯಾನ್ ಆದ ಜಾಗಕ್ಕೆ ಹಚ್ಚಿದರೆ ಈ ಸಮಸ್ಯೆಯಿಂದ ದೂರ ಆಗಬಹುದು. ಹೆಚ್ಚು ಮೇಕಪ್ ಮಾಡಿಕೊಂಡವರು ಅದನ್ನ ತೆಗಿಯೋಕೆ ಸಾಸಿವೆ ಎಣ್ಣೆಯನ್ನು ಬಳಸಬೇಕು. ಇದು ತ್ವ ಯಾವುದೇ ಸಮಸ್ಯೆ .ಆಡದೆ ಮುಖದ ಮೇಕಪ್ ತೆಗಿಯತ್ತೆ. ಹಾಗೆ ಸಾಸಿವೆ ಎಣ್ಣೆ ಮುಖದ ಮೇಲೆ ಇರುವ ಸುಕ್ಕು ಹಾಗೂ ನೆರಿಗೆಗಳನ್ನು ಸಹ ನಿವಾರಣೆ ಮಾಡುತ್ತದೆ.

ಇನ್ನೂ ಆಯುರ್ವೇದ ಚಿಕಿತ್ಸೆಗಳಾದ ಪಂಚಕರ್ಮ ಹಾಗೂ ಮಸಾಜ್ ಗಳಿಗು ಸಾಸಿವೆ ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಬೆನ್ನು ನೋವಿಗೂ ಈ ಎಣ್ಣೆಯ ಮಸಾಜ್ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಹೊಟ್ಟೆಯ ಸುತ್ತ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ಕೊಬ್ಬು ಕರಗುತ್ತೆ ಅಂತ ಹೇಳ್ತಾರೆ. ಹೀಗೆ ಸಾಸಿವೆ ಎಣ್ಣೆ ಮನುಷ್ಯನ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಕಾಪಾಡುತ್ತದೆ. ಹಾಗಾಗಿಯೇ ಉತ್ತರ ಭಾರತದ ಜನರು ಹೆಚ್ಚು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಹಾಗಂತ ನಾವೇನು ಸಾಸಿವೆ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ನಮ್ಮ ಅಡುಗೆ ಮನೆಯಲ್ಲಿ ಸಾಸಿವೆ ವಿಶೇಷ ಸ್ಥಾನ ಇದೆ. ಸಾಸಿವೆ ಇಲ್ಲದ ಒಗ್ಗರಣೆ ಡಬ್ಬಿಯನ್ನು ಊಹೆ ಕೂಡ ಮಾಡಿಕೊಳ್ಳೋದು ಕಷ್ಟ.

Leave A Reply

Your email address will not be published.