ಈಗ ವಾತಾವರಣ ಬದಲಾವಣೆಯ ಸಮಯ ಆಗಿರುವುದರಿಂದ ಬಿಸಿಲು ಮತ್ತು ಆಗಾಗ ಮಳೆಯ ಸಿಂಚನ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬಹಳಷ್ಟು ಜನರು ಹುಷಾರು ತಪ್ಪುತ್ತಾರೆ. ಸೂಕ್ಷ್ಮ ಆರೋಗ್ಯ ಹೊಂದಿರುವವರು ಬಹಳ ಬೇಗನೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಕೆಲವರಿಗೆ ಎದೆಯಲ್ಲಿ ಮತ್ತು ಮೂಗಿನಲ್ಲಿ ಕಪ ಕಟ್ಟಿದ ಅನುಭವ ಉಂಟಾಗುತ್ತದೆ. ದೀರ್ಘಕಾಲದಲ್ಲಿ ಇದು ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಡಲು ಮತ್ತಷ್ಟು ಕಷ್ಟವಾಗುತ್ತದೆ. ಆದರೆ ಕಷ್ಟಕರವಾದ ಉಸಿರಾಟದ ಅವಸ್ಥೆಯನ್ನು ಸರಿ ಪಡಿಸಿಕೊಳ್ಳಲು ಮನೆ ಮದ್ದಿನ ರೂಪದಲ್ಲಿ ಬಹಳ ಸುಲಭದ ಮಾರ್ಗಗಳು ಇವೆ. ಹಾಗಿದ್ದರೆ ನಾವು ಈ ಲೇಖನದ ಮೂಲಕ ಶೀತ ನೆಗಡಿ ಕೆಮ್ಮು ಕಟ್ಟಿದ ಮೂಗು ಇಂತಹ ಸಮಸ್ಯೆಗೆ ಸುಲಭವಾದ ಮನೆಮದ್ದು ಏನು ಅನ್ನೋದನ್ನ ನೋಡೋಣ.
ಶೀತವಾದಗ ಕೆಲವರಿಗೆ ಮೂಗು ಕಟ್ಟಿ ಉಸಿರಾಡಲು ಸಮಸ್ಯೆ ಆಗುತ್ತದೆ ಇನ್ನು ಕೆಲವರಿಗೆ ತಲೆ ಭಾರ ಆದ ಹಾಗೆ ಅನುಭವ ಆಗುತ್ತದೆ. ಮೈ ಕೈ ನೋವು , ಜ್ವರ ಬಂದ ಹಾಗೇ ಅನಿಸುವುದು , ಯಾವುದೇ ಕೆಲಸ ಮಾಡಲೂ ಆಸಕ್ತಿ ಇಲ್ಲದೇ ಇರುವ ಹಾಗೆ ಆಗುತ್ತದೆ. ಈ ಎಲ್ಲಾ ರೀತಿಯ ಸಮಸ್ಯೆಗೆ ನಾವು ಕೇವಲ ಕೆಲವೇ ನಿಮಿಷದಲ್ಲಿ ಯಾವುದೇ ಮಾತ್ರೆಗಳು ಇಂಜೆಕ್ಷನ್ ಇಲ್ಲದೆಯೇ ಮನೆಮದ್ದಿನ ಮೂಲಕ ಗುಣ ಮಾಡಿಕೊಳ್ಳಬಹುದು. ಕಾಳುಮೆಣಸನ್ನು ಬಳಸಿ ನಾವು ಶೀತ ನೆಗಡಿ ಕಟ್ಟಿದ ಮೂಗು ಸಮಸ್ಯೆ ಹೋಗಲಾಡಿಸಿಕೊಳ್ಳಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹಾಗೂ ಆಂಟಿ ಇನ್ಫ್ಲಾಮೇಟರಿ ಗುಣಗಳನ್ನು ಇದು ಹೊಂದಿರುತ್ತದೆ. ಕಾಳು ಮೆಣಸು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇನ್ನು ಕಟ್ಟಿದ ಮುಗಿಗೆ ಇದರ ಪ್ರಯೋಜನ ಪಡೆಯುವುದು ಹೇಗೆ ಎಂದು ನೋಡುವುದಾದರೆ , ಒಂದು ಕಾಳು ಮೆಣಸು ತೆಗೆದುಕೊಂಡು ಅದಕ್ಕೆ ಒಂದು ಉದ್ದನೆಯ ಸೂಜಿ ಅಥವಾ ಪಿನ್ ಚುಚ್ಚಿ ಅದನ್ನು ಬೆಂಕಿಗೆ ಹಿಡಿಯಬೇಕು. ಹೀಗೆ ಮಾಡಿದಾಗ ಕಾಳು ಮೆಣಸಿನ ಹೊಗೆ ಬರುತ್ತದೆ ಆ ಹೊಗೆಯನ್ನು ನಾವು ಬಾಯಿ ಮುಚ್ಚಿ ಮೂಗಿನ ಮೂಲಕ ಜೋರಾಗಿ ತೆಗೆದುಕೊಂಡಾಗ ಆ ಹೊಗೆ ನಮ್ಮ ಮೂಗಿಗೆ ಹೋಗಿ ಕಟ್ಟಿದ ಮೂಗು ಸರಿ ಆಗುವುದು.
ಇದರ ಹಾಗೆಯೇ ಪುದೀನಾ ಎಲೆಗಳಲ್ಲಿ ಕೂಡಾ ನಮಗೆಲ್ಲಾ ಗೊತ್ತಿರುವ ಹಾಗೆ ಒಳ್ಳೆಯ ಔಷಧೀಯ ಗುಣಲಕ್ಷಣಗಳು ಲಭ್ಯ ಇವೆ. ಎಲ್ಲ ವಯಸ್ಸಿನವರಿಗೂ ಸೂಕ್ತವೆನಿಸುವ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಯನ್ನು ಬಹಳ ಬೇಗನೆ ಸರಿಮಾಡುವ ಸ್ವಭಾವವನ್ನು ಪುದಿನ ಎಲೆಗಳು ಹೊಂದಿರುತ್ತದೆ. ಬೇರೆ ಯಾವುದೇ ಎಲೆಗಳಿಗೆ ಹೋಲಿಸಿದರೆ ಪುದೀನಾ ಎಲೆಗಳು ತುಂಬಾ ಘಾಡವಾದ ವಾಸನೆಯನ್ನು ಹೊಂದಿದ್ದು, ನಮ್ಮ ಉಸಿರಾಟ ವ್ಯವಸ್ಥೆಯನ್ನು ಸರಾಗಗೊಳಿಸುವ ಮೂಲಕ ಯಾವುದೇ ತೊಂದರೆ ಇಲ್ಲದಂತೆ ನಮಗೆ ಉಸಿರಾಡಲು ಅನುಕೂಲ ಮಾಡಿಕೊಡುತ್ತದೆ. ಇದರ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳಿಂದ ಈ ಮೊದಲಿನಿಂದ ಉಸಿರಾಟ ವ್ಯವಸ್ಥೆಯಲ್ಲಿ ತೊಂದರೆಯನ್ನು ಅನುಭವಿಸುತ್ತಿರುವವರು ಅತ್ಯಂತ ಸರಳವಾಗಿ ಉಸಿರಾಡಲು ನೆರವಾಗುತ್ತದೆ.