ಒಣಕೆಮ್ಮು ನಿವಾರಣೆಗೆ ಈ ಮನೆಮದ್ದಿನಲ್ಲಿದೆ ಶಾಶ್ವತ ಪರಿಹಾರ

0 93

ನಮಗೆ ಬರುವ ರೋಗಗಳಿಗೆ ಮನೆಯಲ್ಲಿ ಔಷಧಿ ಇರುತ್ತದೆ ಆದರೆ ನಮಗೆ ಅದರ ಬಗ್ಗೆ ತಿಳಿದಿರುವುದಿಲ್ಲ. ಅಡುಗೆಮನೆ ಒಂದು ರೀತಿಯಲ್ಲಿ ಆಸ್ಪತ್ರೆ ಇದ್ದಂತೆ. ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವೃದ್ದರವರೆಗೂ ಒಣಕೆಮ್ಮು ಕಾಡುತ್ತಿರುತ್ತದೆ. ಒಣಕೆಮ್ಮಿಗೆ ಮುಖ್ಯ ಕಾರಣ ಕಫ ಒಣಗಿ ಹೋಗಿರುವುದು. ನಾವು ಪ್ರತಿನಿತ್ಯ ಅಡುಗೆಗೆ ಬಳಸುವ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಕಫ ಕರಗಿ ಒಣಕೆಮ್ಮು ನಿವಾರಣೆಯಾಗುತ್ತದೆ. ಹಾಗಾದರೆ ಒಣಕೆಮ್ಮನ್ನು ನಿವಾರಿಸಲು ಇರುವ ಎರಡು ಮನೆಮದ್ದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಕೆಲವುಸಲ ಒಣಕೆಮ್ಮು ಆಗುತ್ತದೆ ಕಫ ಒಣಗಿ ಹೋಗಿದ್ದರೆ ಒಣ ಕೆಮ್ಮು ಬರುತ್ತದೆ. ಒಣಕೆಮ್ಮಿಗೆ ಮನೆಯಲ್ಲೆ ಸುಲಭವಾಗಿ ಪ್ರತಿನಿತ್ಯ ಬಳಸುವ ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ದ್ರಾಕ್ಷಿ ಹಾಲು ಮಾಡಿಕೊಂಡು ಕುಡಿಯುವುದರಿಂದ ಕಫ ಕರಗಿ ಒಣಕೆಮ್ಮು ನಿವಾರಣೆಯಾಗುತ್ತದೆ. ದ್ರಾಕ್ಷಿ ಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಒಣದ್ರಾಕ್ಷಿ, ನೀರು, ಹಾಲು, ಸಕ್ಕರೆ ಅಥವಾ ಕೆಂಪು ಕಲ್ಲುಸಕ್ಕರೆ. ಮಾಡುವ ವಿಧಾನವೆಂದರೆ ಒಂದು ಸ್ಟೀಲ್ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ಹಾಕಿ ಹದವಾದ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಕಾಲು ಲೋಟ ಆಗುವವರೆಗೂ ಕುದಿಸಿದ ನಂತರ ಒಂದು ಲೋಟಕ್ಕೆ ಹಾಕಿಕೊಳ್ಳಬೇಕು.

ಹಾಲನ್ನು ಪ್ರತ್ಯೇಕವಾಗಿ ಬಿಸಿಮಾಡಿಕೊಂಡು ಬಿಸಿಮಾಡಿದ ಹಾಲಿಗೆ ದ್ರಾಕ್ಷಿಯನ್ನು ಕಿವುಚಿ ದ್ರಾಕ್ಷಿ ನೀರು ಮತ್ತು ಕಿವುಚಿದ ದ್ರಾಕ್ಷಿಯನ್ನು ಹಾಕಬೇಕು. ಚಿಕ್ಕ ಮಕ್ಕಳಿಗಾದರೆ ಕಿವುಚಿದ ದ್ರಾಕ್ಷಿಯನ್ನು ಸೋಸಿ ನೀರನ್ನು ಮಾತ್ರ ಹಾಕಬೇಕು. ಅದಕ್ಕೆ ಸಕ್ಕರೆ ಅಥವಾ ಕೆಂಪು ಕಲ್ಲುಸಕ್ಕರೆ ಎಂದು ಸಿಗುತ್ತದೆ ಅದನ್ನು ಮಾಡಿಮಾಡಿ ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯಬೇಕು ಹೀಗೆ ಒಂದು ವಾರ ಮಾಡಬೇಕು ಇದರಿಂದ ದೇಹಕ್ಕೆ ಶಕ್ತಿ ದೊರೆತು ಚೈತನ್ಯ ಸಿಗುತ್ತದೆ ಜೊತೆಗೆ ಕಫ ಕರಗಿ ಒಣ ಕೆಮ್ಮು ಕಡಿಮೆಯಾಗುತ್ತದೆ.

ಇನ್ನೊಂದು ಪ್ರಮುಖ ಮನೆ ಮದ್ದು ಇದೆ ಅದೇನೆಂದರೆ ಜೀರಿಗೆ ನೀರು. ಜೀರಿಗೆ ನೀರು ಮಾಡಲು ಬೇಕಾಗುವ ಸಾಮಗ್ರಿಗಳು ಜೀರಿಗೆ, ನೀರು, ಕರಿಬೆಲ್ಲ. ಜೀರಿಗೆ ನೀರು ಮಾಡುವ ವಿಧಾನವೆಂದರೆ ಒಂದು ಕಬ್ಬಿಣದ ಸೌಟನ್ನು ಬಿಸಿಮಾಡಿಕೊಂಡು ಒಂದು ಚಮಚ ಜೀರಿಗೆಯನ್ನು ಚೆನ್ನಾಗಿ ಕಪ್ಪಾಗುವವರೆಗೆ ಹುರಿದು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಒಂದು ಸ್ಟೀಲ್ ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು ಇನ್ನೊಂದು ಲೋಟದಲ್ಲಿ ಒಂದು ಲೋಟ ನೀರಿಗೆ ಕಾಲು ಚಮಚ ಕುಟ್ಟಿದ ಜೀರಿಗೆ ಪುಡಿಯನ್ನು ಹಾಕಿ ಅದಕ್ಕೆ ರುಚಿಗೆ ಬೇಕಾದಷ್ಟು ಕರಿ ಬೆಲ್ಲವನ್ನು ಹಾಕಬೇಕು, ಕರಿ ಬೆಲ್ಲವನ್ನೆ ಬಳಸುವುದು ಒಳ್ಳೆಯದು. ಈ ಮನೆಮದ್ದಿನಿಂದ ಉತ್ತಮ ಫಲಿತಾಂಶ ಸಿಗಬೇಕೆಂದರೆ ಕರಿ ಬೆಲ್ಲವನ್ನು ಬಳಸಬೇಕು. ಆ ಲೋಟಕ್ಕೆ ಕುದಿಯುತ್ತಿರುವ ನೀರನ್ನು ಹಾಕಬೇಕು 1 ಸ್ಪೂನ್ ನಿಂದ ಚೆನ್ನಾಗಿ ಮಿಕ್ಸ್ ಮಾಡಬೇಕು ಬಿಸಿಯಿರುವಾಗಲೆ ಕುಡಿಯಬೇಕು. ಒಂದುವರೆ ವರ್ಷದ ಮೇಲ್ಪಟ್ಟ ಮಕ್ಕಳು ಸಹ ಇದನ್ನು ಕುಡಿಯಬಹುದು, ಸಣ್ಣ ಮಕ್ಕಳಿಗಾದರೆ ಎರಡು ಸ್ಪೂನ್ ಸಾಕು. ದಿನದಲ್ಲಿ ಎರಡು ಮೂರು ಸಾರಿ ಕುಡಿಯಬಹುದು. ಈ ಎರಡು ಮನೆಮದ್ದಿನಲ್ಲಿ ಯಾವ ಮನೆಮದ್ದನ್ನು ಬಳಸಿದರೂ ಕಫ ನಿವಾರಣೆಯಾಗುತ್ತದೆ.

ಈ ಮನೆಮದ್ದನ್ನು ಸೇವಿಸುವುದರಿಂದ ಯಾವುದೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಆಗಾಗ ಅನಾರೋಗ್ಯ ಆಗುವುದು ಸಹಜ ಅನಾರೋಗ್ಯವಾದಾಗ ಆಸ್ಪತ್ರೆಗಳಿಗೆ ಹೋಗುವುದು ಅಷ್ಟು ಒಳ್ಳೆಯದಲ್ಲ ಅದರಲ್ಲೂ ಕೊರೋನ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಆಸ್ಪತ್ರೆಗಳಿಗೆ ಹೋಗಲು ಜನರಿಗೆ ಭಯವಾಗುತ್ತಿದೆ. ಇಂತಹ ಸಮಯದಲ್ಲಿ ಮನೆಮದ್ದು ಅಂದರೆ ಮನೆಯಲ್ಲಿ ತಯಾರಿಸಿದ ಔಷಧಿಗಳನ್ನು ತೆಗೆದುಕೊಂಡು ಗುಣ ಮಾಡಿಕೊಳ್ಳುವುದು ಒಳ್ಳೆಯದು. ಇದು ಒಣಕೆಮ್ಮಿಗೆ ಉತ್ತಮ ಮನೆಮದ್ದಾಗಿದ್ದು, ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.