ಬೇಸಿಗೆಯಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ಮೊಡವೆ ನಿವಾರಿಸುವ ಎಳನೀರು

0 2

ಎಳನೀರು ಅಂದ್ರೆ ನೈಸರ್ಗಿಕ ಅಮೃತ ಎಂಬುದಾಗಿ ಹೇಳಬಹುದಾಗಿದೆ, ನೂರಾರು ಆರೋಗ್ಯಕಾರಿ ಗುಣಗಳನ್ನು ಹೊಂದಿರುವಂತ ಈ ಎಳನೀರು ದೇಹಕ್ಕೆ ತಂಪು ನೀಡುವ ಜೊತೆಗೆ ಮುಖದ ಮೇಲಿನ ಮೊಡವೆ ನಿವಾರಗೆ ಸಹಕಾರಿಯಾಗಿದೆ. ಈ ಬೇಸಿಗೆಯಲ್ಲಿ ಎಳನೀರು ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದನನ್ನ ಇಲ್ಲಿ ನೋಡುವುದಾದರೆ, ಬಿಸಿಲಿನಲ್ಲಿ ನಿಂತರು ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳಬೇಕಾಗುತ್ತದೆ.

ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು ಅಷ್ಟೇ ಅಲ್ಲದೆ ಮುಖಕ್ಕೆ ಪುನರಜೀವನ ನೀಡಿದಂತಾಗುವುದು, ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳನೀರಿನಿಂದ ಮುಖ ತೊಳೆಯಬೇಕು, ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳನೀರಿನಿಂದ ಮುಖ ತೊಳೆಯಬೇಕು ಯಾಕೆಂದರೆ ಸೂರ್ಯನ ತಾಪ ಹಾಗೂ ಮರಳಿನ ಬಿಸಿ ಹಾಗೂ ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳು ಉಂಟು ಮಾಡುತ್ತವೆ.

ಕಲೆಗಳನ್ನು ನಿವಾರಿಸುವುದು: ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದಾರೆ ಆಗ ಎಳೆನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ ಇದರಲ್ಲಿರುವಂತ ಆಯ್ಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಮುಖದ ಚರ್ಮವು ಹೊಳಪು ಕಾಣುವುದು.

ಮೊಡವೆಗಳ ನಿವಾರಣೆಗೆ: ಮುಖದಲ್ಲಿ ಆಗಾಗ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇದೆಯಾ?ನೀವು ದಿನದಲ್ಲಿ ಒಂದು ಸಲವಾದರೂ ಎಳನೀರಿನಿಂದ ಮುಖವನ್ನು ತೊಳೆಯಬೇಕು, ಮೊಡವೆಗಳಿಂದ ಮುಖದ ಮೇಲೆ ಉಂಟಾಗುವಂತ ಕಲೆಗಳ ಸೋಂಕನ್ನು ಇದು ನಿವಾರಿಸುತ್ತದೆ. ಒಟ್ಟಾರೆಯಾಗಿ ಬೇಸಿಗೆಯಲ್ಲಿ ಎಳನೀರನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಹಲವು ಉಪಯೋಗಗಳನ್ನು ಪಡೆಯಬಹುದಾಗಿದೆ.

Leave A Reply

Your email address will not be published.