ದೇಹದ ತೂಕ ಇಳಿಸುವ ಜೊತೆಗೆ ಚರ್ಮ ವ್ಯಾದಿಗಳನ್ನು ನಿವಾರಿಸುವ ನೀರು

0 0

ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಜಾಸ್ತಿಯಾಗಿದೆ ದೇಹದ ತೂಕವನ್ನು ಇಳಿಸಿಕೊಳ್ಳಲು ಏನಾದರು ಪರಿಹಾರ ಮಾರ್ಗವನ್ನು ತಿಳಿಸಿ ಎಂಬುದಾಗಿ ಕೇಳುವವರ ಸಂಖ್ಯೆ ಹೆಚ್ಚಾಗಿದೆ, ಅಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವಂತ ವಿವಿಧ ಬಗೆಯ ಪರಿಹಾರ ಮರಗಗಳನ್ನು ಹುಡುಕಿಕೊಳ್ಳುವ ಜೊತೆಗೆ ಔಷದಿ ಮಾತ್ರೆಗಳನ್ನು ಬಳಸುವವರು ಇದ್ದಾರೆ ಆ ದೃಷ್ಟಿಯಿಂದ ಈ ವಿಚಾರವನ್ನು ಈ ಮೂಲಕ ತಿಳಿಸಲು ಬಯಸುತ್ತಿದ್ದೇವೆ.

ಸಾಮಾನ್ಯವಾಗಿ ನಾವುಗಳು ಹೇಳುವದು ಇಷ್ಟೇ ಪ್ರತಿದಿನ ಸೇವನೆ ಮಾಡುವಂತ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತವೆ ಹಾಗಾಗಿ ಪ್ರತಿದಿನ ಪೋಷಕಾಂಶ ಇರುವಂತ ಆಹಾರ ಕ್ರಮಗಳನ್ನು ಅನುಸರಿಸಬೇಕು ಹಾಗೂ ದೇಹಕ್ಕೆ ವ್ಯಾಯಾಮ ಹಾಗೂ ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು ದೈನಂದಿನ ವ್ಯಮವನ್ನು ಹೆಚ್ಚಿಸಿಕೊಳ್ಳಬೇಕು ದೇಹಕ್ಕೆ ದಣಿವು ಆಗೋ ರೀತಿಯಲ್ಲಿ ಕೆಲಸಗಳನ್ನು ಮಾಡುವುದರಿಂದ ಹೊಟ್ಟೆಯ ಸುತ್ತಲೂ ಬೊಜ್ಜು ಬೆಳೆಯುವುದಿಲ್ಲ.

ನೇರವಾಗಿ ವಿಷ್ಯಕ್ಕೆ ಬರೋಣ ಇತ್ತೀಚಿನ ದಿನಗಳಲ್ಲಿ ಈ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತಿದೆ ದೇಹದ ತೂಕವನ್ನು ಇಳಿಸಲು ಈ ಮನೆಮದ್ದು ಪರಿಣಾಮಕಾರಿ ಎಂಬುದಾಗಿ ಇದನ್ನು ಹೇಗೆ ತಯಾರಿಸಬೇಕು ಹಾಗೂ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ, ನಿಮಗೆ ಈ ಒಂದು ವಿಚಾರದ ಬಗ್ಗೆ ಗೊತ್ತಿರುತ್ತದೆ ಸಸ್ಯಗಳು ಗಿಡಗಳು ಹಸಿರು ಬಣ್ಣದಲ್ಲಿರಲು ಕಾರಣವೇನು ಅನ್ನೋದು? ಇದಕ್ಕೆ ಪತ್ರಹರಿತ್ತು ಅನ್ನೋದು ನಿಮಗೆ ಗೊತ್ತು ಇದೀಗ ಈ ಡಯಟಿಶಿಯನ್‌ಗಳ ಕಣ್ಣು ಇದರ ಮೇಲೆ ಬಿದ್ದಿದೆ.

ಹೌದು ಉತ್ತಮ ಆರೋಗ್ಯವನ್ನು ಪಡೆಯುವದರ ಜೊತೆಗೆ ದೇಹದ ತೂಕವನ್ನು ಇಳಿಸಲು ಈ ವಾಟರ್ ಹೆಚ್ಚು ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ ಅಷ್ಟಕ್ಕೂ ಈ ವಾಟರ್ ಯಾವುದು ಅನ್ನೋದಾದರೆ ಇದನ್ನು ಕ್ಲೋರೋಫಿಲ್ (ಪತ್ರಹರಿತ್ತು) ಎಂಬುದಾಗಿ ಕರೆಯಲಾಗುತ್ತದೆ. ಈ ಕ್ಲೋರೋಫಿಲ್ ವಾಟರ್‌ನಿಂದ ಆರೋಗ್ಯಹೆಚ್ಚುತ್ತದೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ ಡಯಟ್ ಸ್ಪೆಶಲಿಸ್ಟ್ಸ್

ನಿಮಗೆ ಇದರ ಬಗ್ಗೆ ಪ್ರಶ್ನೆ ಮೂಡಬಹುದು ಏನಿದು ಕ್ಲೋರೋಫಿಲ್ ಎಂಬುದಾಗಿ ಇದರ ಬಗ್ಗೆ ತಿಳಿಸುತ್ತೇವೆ ಬನ್ನಿ ಮೊದಲನೆಯದಾಗಿ ಸಸ್ಯಗಳು ಫೋಟೋಸಿಂಥೆಸಿಸ್ ಮೂಲಕ ಆಹಾರ ತಯಾರಿಸಿಕೊಳ್ಳುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಹೀಗೆ ತಯಾರಿಸುವಾಗ ಸೂರ್ಯನ ಬೆಳಕನ್ನು ಹೀರಿಕೊಂಡು ಅದರಿಂದ ಆಹಾರ ತಯಾರಿಸಿ ಎನರ್ಜಿಗಳಿಸುತ್ತವೆ ಹಾಗೆ ಸೂರ್ಯನ ಬೆಳಕನ್ನು ಹೀರಲು ನೆರವಾಗುವುದೇ ಕ್ಲೋರೋಫಿಲ್ ಆಗಿದೆ.

ಈ ಕ್ಲೋರೋಫಿಲ್ ವಾಟೆ ಹೇಗೆ ಪರಿಣಾಮಕಾರಿ ಅನ್ನೋದನ್ನ ತಿಳಿಯುವುದಾದರೆ ಕ್ಲೋರೋಫಿಲ್‌ನಿಂದ ಪಡೆದ ಉಪ್ಪುಗಳ ಮಿಕ್ಸ್‌ಚರ್ ಇದು ಕಾಪರ್ ಹೊಂದಿರುತ್ತದೆ, ಅಷ್ಟೇ ಅಲ್ಲದೆ ಈ ನೀರಿನಲ್ಲಿ ಕರಗುವ ಸಪ್ಲಿಮೆಂಟ್ ಆಗಿದ್ದು, ಮೈಕ್ರೋನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್ಸ್‌ಗಳ ಕಣಜ ಎನ್ನಲಾಗುತ್ತಿದೆ. ಕ್ಲೋರೋಫಿಲ್ ಬೆರೆಸಿದ ಆಹಾರಕ್ಕಿಂತ ಕ್ಲೋರೋಫಿಲ್ ವಾಟರ್ ಹೆಚ್ಚು ಬೇಗ ಫಲಿತಾಂಶ ನೀಡುತ್ತದೆ. ಜಗತ್ತಿನ ಹಲವು ಜ್ಯೂಸ್ ಬಾರ್‌ಗಳಲ್ಲಿ ಇದು ಈಗಾಗಲೇ ಹಾಟ್ ಟ್ರೆಂಡ್ ಆಗಿದೆ.

ಇನ್ನು ದೇಹದ ತೂಕವನ್ನು ಇಳಿಸುವಂತ ಈ ಕ್ಲೋರೋಫಿಲ್ ವಾಟರ್ ಪ್ರತಿ ದಿನ ಸೇವಿಸುವುದರಿಂದ ಬೇಗ ತೂಕ ಇಳಿಯುವುದಲ್ಲದೆ ಸಿಕ್ಕ ಸಿಕ್ಕ ಆಹಾರಗಳನ್ನು ತಿನ್ನುವ ಅಸೆ ಕೂಡ ಕಡಿಮೆಯಾಗುತ್ತದೆಯಂತೆ, ಅಷ್ಟೇ ಅಲ್ಲದೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹಕ್ಕೆ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು ಹಾಗೂ ಚರ್ಮ ರೋಗಗಳನ್ನು ನಿವಾರಿಸುವುದು ಹೀಗೆ ಹತ್ತಾರು ಆರೋಗ್ಯಕಾರಿ ಉಪಯೋಗಗಳನ್ನು ಈ ನೀರಿನಿಂದ ಪಡೆದುಕೊಳ್ಳಬಹುದು ಅನ್ನೋದನ್ನ ಹೇಳಲಾಗುತ್ತಿದೆ.

Leave A Reply

Your email address will not be published.