ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದಿಗೆ 10 ದಿನಗಳು ಕಳೆದರು ಕೂಡ ಅವರ ಕುಟುಂಬದವರ ದುಃಖ ಸ್ವಲ್ಪವೂ ಕಡಿಮೆ ಆಗಿಲ್ಲ. ತನ್ನ ಪತಿಯನ್ನು ಕಳೆದುಕೊಂಡ ಮೇಘನಾ ಅವರ ದುಃಖ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ಕಣ್ಣೀರು ತರಿಸುವ ಇನ್ನೊಂದು ಘಟನೆ ಹೊರ ಬಂದಿದೆ. ಮೇಘನಾ ಅವರು ಚಿರು ಅವರ ರೂಮಿಗೆ ಹೋದಾಗ ಒಂದು ವಸ್ತು ಸಿಕ್ಕು ಅದನ್ನ ಎತ್ತಿಕೊಂಡು ಅವರು ದುಃಖದಿಂದ ಹೊರಗೆ ಬಂದಿದ್ದಾರೆ. ಇದು ಯಾಕೆ ಅವರು ಹಾಗೆ ದುಃಖದಿಂದ ಹೊರ ಬರಲು ಕಾರಣ ಏನು ಅಂತ ತಿಳಿದ್ರೆ ಕಣ್ಣೀರು ಬರತ್ತೆ.

ಜೂನ್ 7, 2020 ಕನ್ನಡ ಚಿತ್ರ ರಂಗಕ್ಕೆ ಒಂದು ಕರಾಳ ದಿನ ಎನ್ನಬಹುದು. ಅಂದು ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅಂದು ಅವರನ್ನ ಅಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಸರ್ಜಾ ಕುಟುಂಬ ಹಾಗೂ ಮೇಘನಾ ಅವರ ಕುಟುಂಬದ ದುಃಖ ಮುಗಿಲು ಮುಟ್ಟಿತ್ತು. ಒಂದು ಕಡೆ ಅಭಿಮಾನಿಗಳ ಚೀರಾಟ, ಸಂಬಂಧಿಕರ ನರಳಾಟ, ಕುಟುಂಬಸ್ತರ ಸಂಕಟ. ಇವರೆಲ್ಲ ಚಿರು ಪೆಟ್ಟಿಗೆಯ ಸುತ್ತ ಸುತ್ತಿಕೊಂಡು ಅಳುವ ದೃಶ್ಯ ಎಂಥವರಿಗೂ ಮನ ಕಲಕುವಂತಿತ್ತು. ಆದರೆ ಇವೆಲ್ಲದರ ನಡುವೆಯೇ ತನ್ನ ಪ್ರೀತಿಯ ಗಂಡನನ್ನು ಕಳೆದುಕೊಂಡ ಮೇಘನಾ ಮಾತ್ರ ಚಿರು ಇದ್ದಂತಹ ಕೋಣೆಗೆ ಹೋಗಿ ಇಲ್ಲಿರುವ ಬಣ್ಣ ಬಣ್ಣದ ಅಂಗೀಗಳನ್ನು ಬಿಟ್ಟು ಗೋಡೆಗೆ ನೇತು ಹಾಕಿರುವ ಅಂಗಿಯನ್ನು ಹಿಡಿದು ಮುದ್ದಾಡುತ್ತ ಮತ್ತಷ್ಟು ಜೋರಾಗಿ ಅಳಲು ಆರಂಭಿಸಿದರು. ಮತ್ತೆ ಅದೇ ಅಂಗಿಯನ್ನು ಧರಿಸಿ ಗಟ್ಟಿಯಾಗಿ ಹಿಡಿದುಕೊಂಡು ಇನ್ನು ಮುಂದೆ ಇದನ್ನು ಧರಿಸುವವರು ಯಾರು ನಿನ್ನನ್ನು ಬಿಟ್ಟು ಇರಲಾರೆ ದಯವಿಟ್ಟು ಬಂದುಬಿಡು ಎಂದು ಗೋಗರೆದು ಕಣ್ಣೀರು ಹಾಕಿದರು.

ಅಷ್ಟಕ್ಕೂ ಮೇಘನಾ ಅಲ್ಲಿರುವ ಅಷ್ಟೊಂದು ಅಂಗೀಗಳನ್ನು ಬಿಟ್ಟು ಅದೇ ಅಂಗುಯನ್ನು ಹಿಡಿದು ಅಳಲು ಕಾರಣ, ಚಿರು ಸಾಯುವ ಹಿಂದಿನ ದಿನ ಮೇಘನಾ ಹಾಗೂ ಚಿರು ಇಬ್ಬರೂ ಹೊರಗೆ ಹೋಗಿದ್ದರು. ಆ ಸಂದರ್ಭದಲ್ಲಿ ಚಿರು ಕೊನೆಯದಾಗಿ ಧರಿಸಿದ ಆ ಅಂಗಿಯನ್ನು ಹಾಕಿಕೊಂಡಿದ್ದರು ಮೇಘನಾ. ಹಾಗೆ ನಾವು ಪ್ರೀತಿಸುವ ವ್ಯಕ್ತಿಗಳು ನಮ್ಮನ್ನ ಬಿಟ್ಟು ಹೋದಾಗ ಅವರ ಕೆಲವು ವಸ್ತುಗಳು ನಮ್ಮನ್ನ ತುಂಬಾ ಕಾಡಿಸುತ್ತವೆ

Leave a Reply

Your email address will not be published. Required fields are marked *

error: Content is protected !!