ಚಿರು ಮಗುವಿಗೆ ತೊಟ್ಟಿಲು ಕೊಟ್ಟಿದು ಇವರೇ, ತೊಟ್ಟಿಲ ವಿಶೇಷತೆ ತಿಳಿಸಿದ್ದಾರೆ

0 1

ಮೇಘನಾ ಅವರ ಮಗುವಿನ ತೊಟ್ಟಿಲ ಬಗ್ಗೆ ತೊಟ್ಟಿಲು ಶಾಸ್ತ್ರಕ್ಕೆ ತೊಟ್ಟಿಲನ್ನು ಕೊಟ್ಟ ವನಿತಾ ಗುತ್ತಲ್ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಶ್ರೀಮತಿ ವನಿತಾ ಗುತ್ತಲ್ ಅವರು ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಸ್ತ್ರೀ ಶಕ್ತಿ ಮಹಿಳಾ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿ 18 ವರ್ಷದಿಂದ ಬೆಳೆಸಿಕೊಂಡು ಬಂದಿದ್ದಾರೆ. ಅವರ ಕೆಳಗೆ ಸುಮಾರು 27,000 ಸ್ತ್ರೀ ಶಕ್ತಿ ಸಂಘಗಳು ಇವೆ ಪ್ರತಿಯೊಂದು ಸಂಘದಲ್ಲಿ 10 ರೂಪಾಯಿ ಸಂಗ್ರಹಿಸಿ ಸಂಘದಲ್ಲಿ ಸಾಲ ನೀಡಿ ರಾಜ್ಯದಲ್ಲಿ ತೊಂದರೆಗೊಳಗಾದ ಮಹಿಳೆಯರಿಗೆ ಸಹಾಯ ಮಾಡುತ್ತಾರೆ.

ಚಿರು ಸರ್ಜಾ ಅವರು ಅಗಲಿದಾಗ ಬಹಳ ಬೇಸರವಾಯಿತು ಉಮೇಶ್ ಬಣಕಾರ್ ಅವರನ್ನು ಸಂಪರ್ಕಿಸಿ ಮೇಘನಾ ಅವರ ಮಗುವಿಗೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕೈಯಿಂದ ಮಾಡಿದ ನೈಸರ್ಗಿಕವಾದ ಬಣ್ಣಗಳಿಂದ ಕೂಡಿದ ಭಾರತ ದೇಶದ ಸಂಸ್ಕಾರ, ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ಪಾರಂಪರಿಕ ತೊಟ್ಟಿಲು ಬೇಕೆಂದು ಅವರಿಗೆ ಕೇಳಲಾಯಿತು. ಆ ತೊಟ್ಟಿಲಿಗೆ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಆದರೆ ಅವರು ಕಡಿಮೆ ಹಣ ತೆಗೆದುಕೊಂಡರು ಎಂದು ವನಿತಾ ಅವರು ಹೇಳಿದರು.

ಉಮೇಶ್ ಬಣಕಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರು ಅವರ ಮೂಲಕ ಪ್ರಮೀಳಾ ಅವರನ್ನು ಸಂಪರ್ಕ ಮಾಡಲಾಯಿತು ಎಂದು ವನಿತಾ ಅವರು ಹೇಳಿದರು. ಮೇಘನಾ ಅವರಿಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ಸೀಮಂತ ಮಾಡಲಾಯಿತು. ಡಿಲೇವರಿ ಆದಾಗಲೂ ಅವರ ಪದ್ಧತಿಯಂತೆ ಕೊಬ್ಬರಿ, ಖಾರ, ಅರಿಶಿಣ ಮುಂತಾದ ಸಾಮಗ್ರಿಗಳನ್ನು ಮೇಘನಾ ಅವರ ಮನೆಗೆ ಕೊಟ್ಟರು.

ಅನಿತಾ ಅವರ ಅಸಿಸ್ಟಂಟ್ ಮಗುವಿನ ಹಾರೈಕೆಗೆ 10 ದಿನ ಇದ್ದರು. ತೊಟ್ಟಿಲು ತಯಾರಿಸಲು 4-5 ತಿಂಗಳು ಸಮಯ ಬೇಕಾಯಿತು. ಮಾರುತಿ ಬಡಿಗೇರ್ ಅವರು ತೊಟ್ಟಿಲನ್ನು ತಯಾರಿಸಿದ್ದಾರೆ, ಸಾಗವಾನಿ ಕಟ್ಟಿಗೆಯಿಂದ ತೊಟ್ಟಿಲನ್ನು ಮಾಡಿದ್ದಾರೆ, ಅಲ್ಲದೇ ಮನೆಯಲ್ಲೇ ಬಣ್ಣ ತಯಾರಿಸುತ್ತಾರೆ. ನೂರರಿಂದ ನೂರೈವತ್ತು ವರ್ಷಗಳವರೆಗೆ ತೊಟ್ಟಿಲು ಬಾಳಿಕೆ ಬರುತ್ತದೆ ಎಂದು ವನಿತಾ ಅವರು ಹೇಳಿದರು.

Leave A Reply

Your email address will not be published.