ನಿಮ್ಮ ಮಕ್ಕಳು ಏಕಾಗ್ರತೆಯಿಂದ ಓದಲು 5 ಸರಳ ಸೂತ್ರಗಳು

0 2

ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುತ್ತಾರೆ. ಪರೀಕ್ಷೆಗೆ ಸರಿಯಾಗಿ ಓದಿದರೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಓದುತ್ತಾರೆ ಆದರೆ ಅವರಿಗೆ ನೆನಪಿರುವುದಿಲ್ಲ ಅದಕ್ಕಾಗಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಕೆಲವು ಅಂಶಗಳನ್ನು ಪಾಲಿಸಬೇಕು. ಅವುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲೇಬೇಕು, ಪರೀಕ್ಷೆಯಲ್ಲಿ ಪಾಸ್ ಆಗಬೇಕೆಂದರೆ ಓದಲೇಬೇಕು. ಪರೀಕ್ಷೆಯಲ್ಲಿ ಸರಿಯಾಗಿ ಬರೆಯಬೇಕು ಎಂದರೆ ಸಿದ್ಧರಾಗಬೇಕು, ಓದಿದ್ದನ್ನು ಏಕಾಗ್ರತೆಯಿಂದ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕಾಗ್ರತೆ ಸಮಸ್ಯೆಯನ್ನು ಬಹಳಷ್ಟು ವಿದ್ಯಾರ್ಥಿಗಳು ಎದುರಿಸುತ್ತಿರುತ್ತಾರೆ. ಏಕಾಗ್ರತೆಯನ್ನು ಕಳೆದುಕೊಳ್ಳದೆ ಹೆಚ್ಚು ಸಮಯ ಓದಬೇಕು ಎಂದರೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಪುಸ್ತಕ ತೆರೆದ ತಕ್ಷಣ ನಮ್ಮ ಮನಸ್ಸಿನಲ್ಲಿ ಬೇಡದ ವಿಚಾರಗಳು ಬರುತ್ತವೆ ಅದರ ಬಗ್ಗೆ ಯೋಚನೆ ಮಾಡುತ್ತಾ ಓದುವುದನ್ನು ಮರೆತುಹೋಗುತ್ತೇವೆ ಆದ್ದರಿಂದ ಮನಸ್ಸನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಮೊಬೈಲ್ ನಲ್ಲಿ ವಿದ್ಯಾರ್ಥಿಗಳು ಸಮಯವನ್ನು ಕಳೆಯುತ್ತಾರೆ ಆದ್ದರಿಂದ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಓದಬೇಕು. ನಾವು ಹೇಗೆ ಓದಬೇಕು, ಮುಂದಿನ ಭವಿಷ್ಯ ಹೇಗೆ ಕಟ್ಟಿಕೊಳ್ಳಬೇಕು ಎಂಬೆಲ್ಲಾ ವಿಚಾರಗಳೊಂದಿಗೆ ಓದಲು ಪ್ರಾರಂಭಿಸಿ. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಿಂತ ಮೊದಲು ಪ್ಲಾನ್ ಮಾಡಬೇಕು ಯಾವ ವಿಷಯವನ್ನು, ಎಷ್ಟು ಸಮಯ ಓದಬೇಕು, ಯಾವಾಗ ಓದಬೇಕು ಎಂಬ ವಿಷಯದ ಬಗ್ಗೆ ಪ್ಲಾನ್ ಮಾಡಬೇಕು. ಎಲ್ಲ ಸಬ್ಜೆಕ್ಟ್ ಗಳನ್ನು ಒಂದೇ ಬಾರಿಗೆ ಓದಲು ಸಾಧ್ಯವಿಲ್ಲ ಆದ್ದರಿಂದ ಒಂದು ವಿಷಯದ ನಂತರ ಇನ್ನೊಂದು ವಿಷಯವನ್ನು ಓದಬೇಕು. ಟೈಮ್ ಟೇಬಲ್ ತಯಾರಿಸಿ ಅದರಂತೆ ಓದಿದರೆ ಒತ್ತಡಕ್ಕೆ ಒಳಗಾಗುವುದಿಲ್ಲ, ಆಸಕ್ತಿ ಹೆಚ್ಚಾಗುತ್ತದೆ. ಮೊದಲು ಕಷ್ಟವಾದ ವಿಷಯವನ್ನು ಓದಬೇಕು ನಂತರ ಸುಲಭದ ವಿಷಯವನ್ನು ಓದಬೇಕು ಏಕೆಂದರೆ ಕಷ್ಟವಾದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಮಯವಿರುತ್ತದೆ ನಂತರ ಸುಲಭವಾದ ವಿಷಯವನ್ನು ಅರ್ಥ ಮಾಡಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬರುತ್ತದೆ ಇದರಿಂದ ಏಕಾಗ್ರತೆ ಹೆಚ್ಚುತ್ತದೆ.

ನಮ್ಮ ಸುತ್ತಲಿನ ವಾತಾವರಣವೂ ನಮ್ಮ ಓದಿನ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನಿಶಬ್ಧವಾಗಿರುವ ಸ್ಥಳದಲ್ಲಿ ಓದಬೇಕು ಮತ್ತು ಪ್ರತಿದಿನ ಒಂದೇ ಸ್ಥಳದಲ್ಲಿ ಓದುವುದು ಉತ್ತಮ. ನಮ್ಮ ಸುತ್ತಲಿನ ವಸ್ತುಗಳನ್ನು ಕ್ರಮಬದ್ಧವಾಗಿ ಇಟ್ಟುಕೊಂಡು ನಂತರ ಓದಲು ಪ್ರಾರಂಭಿಸಿ ಏಕೆಂದರೆ ಶುಭ್ರವಾಗಿ, ಕ್ರಮಬದ್ದವಾಗಿ ಇರುವ ಸ್ಥಳದಲ್ಲಿ ಓದಿದರೆ ಏಕಾಗ್ರತೆ ಹೆಚ್ಚಾಗುತ್ತದೆ. ಓದಿನ ಮಧ್ಯದಲ್ಲಿ ವಿರಾಮವನ್ನು ತೆಗೆದುಕೊಳ್ಳಬೇಕು 40 ನಿಮಿಷಗಳಿಗೊಮ್ಮೆ 10 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳಬೇಕು ಆದ್ದರಿಂದ ಪರೀಕ್ಷೆ ಹಿಂದಿನ ದಿನ ಓದದೆ ಪ್ರತಿದಿನ ಓದಬೇಕು ಇದರಿಂದ ಒತ್ತಡಕ್ಕೆ ಒಳಗಾಗುವುದಿಲ್ಲ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಪ್ರತಿದಿನ ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದಲೂ ಏಕಾಗ್ರತೆ ಹೆಚ್ಚುತ್ತದೆ ಮತ್ತು ಮನಸ್ಸು ನಿರಾಳವಾಗಿರುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಆದ್ದರಿಂದ ಪ್ರತಿದಿನ ಬೆಳಿಗ್ಗೆ 10ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಸಬ್ಜೆಕ್ಟ್ ಅನ್ನು ಪ್ರಾಕ್ಟಿಕಲ್ ಆಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಓದಿರುವುದನ್ನು ಖಾಲಿ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಪ್ರತಿದಿನ ಹೊಟ್ಟೆ ತುಂಬಾ ಊಟ ಮಾಡಬೇಕು, ಕಣ್ತುಂಬ ನಿದ್ದೆ ಮಾಡಬೇಕು, ಓದಿನ ಮಧ್ಯೆ ವಿರಾಮ ತೆಗೆದುಕೊಂಡಾಗ ನೀರು, ಜ್ಯೂಸ್ ಕುಡಿಯಬೇಕು. ಪ್ರಯತ್ನಪಟ್ಟರೆ ಖಂಡಿತ ಫಲ ಸಿಗುತ್ತದೆ, ಚೆನ್ನಾಗಿ ಓದಿದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಗುತ್ತದೆ ಆದ್ದರಿಂದ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು.

Leave A Reply

Your email address will not be published.