ತಾನು ರೈತ ಎಂದು ಹೇಳಿಕೊಳ್ಳಲು ಹಲವಾರು ಜನ ರೈತರು ಹಿಂಜರಿಯುತ್ತಾರೆ ಇದಕ್ಕೆ ಕಾರಣ ನಮ್ಮ ಈ ಸಮಾಜ. ರೈತ ಎಂದರೆ ಅವನ ಹತ್ತಿರ ಹಣ ಇರಲ್ಲ ಎನ್ನುವ ಭಾವನೆ ಅಷ್ಟೇ ಅಲ್ಲದೆ ತಾನು ರೈತ ಎನ್ನುವುದು ತಿಳಿದರೆ ಮದುವೆ ಆಗೋಕೆ ಯಾರೂ ಕೂಡಾ ಹುಡುಗಿಯನ್ನ ಕೊಡೋಕೆ ಮುಂದೆ ಬರಲ್ಲ. ಆದ್ರೆ ನಮ್ಮ ಸಮಾಜಕ್ಕೆ ಪ್ರತಿಯೊಬ್ಬ ರೈತ ಕೂಡಾ ಒಬ್ಬ ವಿಜ್ಞಾನಿ ಆಗಿರ್ತಾನೆ ಅನ್ನೋ ವಿಷ್ಯ ಗೊತ್ತಿರಲ್ಲ. ಇಲ್ಲಿ ಒಬ್ಬ ರೈತ ಕೂಡಾ ಹಾಗೆ ಆರಂಭದಲ್ಲಿ ತಾನು ಬೆಳೆದ ಬೆಳೆಗಳಲ್ಲೆಲ್ಲ ನಷ್ಟ ಅನುಭವಿಸಿದರೂ ಸಹ ಜೀವನದಲ್ಲಿ ಕುಗ್ಗದೇ ಮುಂದೆ ಬಂದು ಸಾಧನೆ ಮಾಡಿದ್ದಾರೆ ಹಾಗೂ ಒಬ್ಬ ಮಾದರಿಯ ರೈತ ಆಗಿ ಹೊರಹೊಮ್ಮಿದ್ದಾರೆ.
ದೊಡ್ಡಬಳ್ಳಾಪುರದ ಈ ರೈತನ ಹೆಸರು ಸದಾನಂದ. ಇವರೂ ಸಹ ಪ್ರಾರಂಭದಲ್ಲಿ ಎಲ್ಲಾ ರೈತರೂ ಮಾಡುವಂತೆ ಮುಖ್ಯವಾಗಿ ಎರಡು ತಪ್ಪುಗಳನ್ನು ಮಾಡಿದ್ದರು. ಅಕ್ಕ ಪಕ್ಕದಲ್ಲಿ ಯಾರಾದರೂ ಟೊಮೆಟೊ ಅಥವಾ ಈರುಳ್ಳಿ ಬೆಳೆಯನ್ನು ಬೆಳೆದಿದ್ದರೆ ಅವರನ್ನ ನೋಡಿ ಇವರೂ ಸಹ ಅದೇ ಬೆಳೆಯನ್ನ ಬೆಳೆಯುತ್ತಿದ್ದರು. ಒಂದು ಎಕರೆ ಜಮೀನು ಇದ್ದರೆ ಒಂದು ಎಕರೆ ಪೂರ್ತಿ ಒಂದೇ ರೀತಿಯ ಬೆಳೆಯನ್ನೇ ಬೆಳೆಯುವುದು. ಈ ಎರಡೂ ಮಾರ್ಗಗಳೂ ಸಹ ತುಂಬಾ ಅಪಾಯ. ಯಾಕಂದರೆ ಎಲ್ಲರೂ ಟೊಮೆಟೊವನ್ನೇ ಬೆಳೆಯುತ್ತಿದ್ದಾರೆ ಎಂದು ತಾನೂ ಅದನ್ನೇ ಬೆಳೆಯಲು ಹೋದರೆ ಬೆಳೇ ಹೆಚ್ಚಾಗಿ ಉತ್ಪಾದನೆ ಜಾಸ್ತಿ ಆಗಿ ಬೆಲೆ ಪಾತಾಳಕ್ಕೆ ಕುಸಿಯಬಹುದು. ಇನ್ನು ಜಮೀನಿಗೆಲ್ಲ ಒಂದೇ ರೀತಿಯ ಬೆಳೆಯನ್ನೇ ಹಾಕಿದರೆ ಕೆಲವೊಂದು ಬಾರಿ ಮಾತ್ರ ಅವು ನಮ್ಮ ಕೈ ಹಿಡಿಯುತ್ತವೆ. ಒಳ್ಳೆಯ ಫಸಲು ಕೊಡುತ್ತವೆ. ಆದರೆ ಅದಕ್ಕೂ ಹೆಚ್ಚು ಒಂದೇ ಬೆಳೆಯನ್ನು ಹಾಕಿದಾಗ ನಷ್ಟ ಅನುಭವಿಸಿ ಕೈ ಸುಡುವುದೇ ಹೆಚ್ಚು. ಆಗ ವ್ಯವಸಾಯದ ಮೇಲೆ ನಂಬಿಕೆಯೇ ಕಳೆದುಹೋಗುತ್ತದೆ.
ಮೊದಲು ಇದೆ ತಪ್ಪನ್ನು ಮಾಡಿದ್ದ ಸದಾನಂದ ಅವರು ನಷ್ಟ ಅನುಭವಿಸಿದ್ದರು. ಹೀಗೆ ಆದರೆ ಜೀವನ ಸಾಗಿಸುವುದು ಕಷ್ಟ ಎಂದು ಅರಿತ ಸದಾನಂದ್ ಅವರು ಒಂದು ಉಪಾಯ ಮಾಡಿ ತನಗೆ ಇರುವ ಎರಡು ಎಕರೆ ಜಮೀನನ್ನು ವ್ಯಸ್ಥಿತವಾಗಿ ವಿಂಗಡಿಸಿ ಮೊದಲು ಒಂದಿಷ್ಟು ಅಡಕೆ ಮತ್ತು ತೆಂಗಿನ ಸಸಿಗಳನ್ನು ನೆಟ್ಟಿದ್ದರು. ನಂತರ ಒಂದು ತಿಂಗಳ ನಂತರ ಶುಂಠಿ, ನಂತರ ಇನ್ನೊಂದು ತಿಂಗಳ ನಂತರ ಸಪೋಟ, ನಂತರ ಇನ್ನೊಂದು ಜಮೀನಿನ ಭಾಗದಲ್ಲಿ ಟೊಮೆಟೊ ,ಕ್ಯಾಪ್ಸಿಕಮ್ ಹೀಗೆ ಕಾಲಕ್ಕೆ ತಕ್ಕಂತೆ ಬೆಳೆಗಳನ್ನ ಬೆಳೆದು ಸುಮಾರು ಮೂವತ್ತು ರೀತಿಯ ಬೆಳೆಗಳನ್ನು ಹಾಕಿದ್ದರು.
ಸದಾನಂದ ಅವರು ಅಂದುಕೊಂಡ ಹಾಗೆ ಈ ತಿಂಗಳು ಸಪೋಟ ಫಲ ಕೊಟ್ಟರೆ ಮುಂದಿನ ತಿಂಗಳು ಶುಂಠಿ ಫಲ ಕೊಡುವ ಹಾಗೆ ಇರಬೇಕು ಇದರಿಂದ ಮುಂದಿನ ತಿಂಗಳು ಕೈ ಗೆ ಹಣ ಸೇರುವ ಹಾಗೆ ಇರಬೇಕು ಹಾಗೆ ಐಡಿಯ ಮಾಡಿಕೊಂಡುದ್ದರು. ಇದರಿಂದ ಅವರು ಅರಿತ ಅಂಶ ಎಂದರೆ, ಒಂದು ವೇಳೆ ಟೊಮೆಟೋ ಬೆಳೆ ಕೈ ಕೊಟ್ಟರೆ ಈರುಳ್ಳಿ ಕೈ ಹಿಡಿಯುತ್ತದೆ. ಶುಂಠಿಯಲ್ಲಿ ನಷ್ಟ ಆದರೆ ಸಪೋಟೋದಲ್ಲಿ ಲಾಭ ಸಿಗತ್ತೆ. ಹೀಗೆ ಹಲವಾರು ರೀತಿಯ ಬೆಳೆಗಳನ್ನು ಕಾಲಕ್ಕೆ ಅನುಗುಣವಾಗಿ ಬೆಳೆಯುವ ಮೂಲಕ ಸದಾನಂದ್ ಅವರು ಬರೀ ತಮ್ಮ ಎರಡು ಎಕರೆ ಜಮೀನಿನಲ್ಲಿ ವರ್ಷಕ್ಕೆ 22 ಲಕ್ಷ ರೂಪಾಯಿಯನ್ನು ಗಳಿಸುತ್ತಾ ಇದ್ದಾರೆ. ವ್ಯಸಾಯ ಅನ್ನೋದು ಸಂಶೋಧನೆಯ ಆವಿಷ್ಕಾರ ಇದ್ದಂತೆ. ಯಾವುದೇ ನಿಯಮಿತ ಮಿತಿ ಅನ್ನುವುದು ಇರುವುದಿಲ್ಲ. ಹೊಸ ಹೊಸ ಸಂಶೋಧನೆಗಳನ್ನ ಮಾಡುವ ಮೂಲಕ ಹೊಸ ವಿಧಾನವನ್ನು ಕಂಡುಹಿಡಿಯಬಹುದಾಗಿದೆ. ಮಾರುಕಟ್ಟೆಯನ್ನು ಮೆಟ್ಟಿ ನಿಂತು ವ್ಯಯಸಾಯದಲ್ಲಿ ಲಾಭವನ್ನು ಗಳಿಸಲು ಸದಾನಂದ ಅವರು ಬಳಸಿದ ಉಪಾಯ ಉತ್ತಮಾವಾಗಿದೇ. ಹೀಗೆ ಇದರಿಂದ ರೈತರು ತಿಳಿಯಬೇಕಾದ ಮುಖ್ಯ ವಿಷಯ ಏನು ಅಂದ್ರೆ ಮಾರುಕಟ್ಟೆಯಲ್ಲಿ ಯಾವುದು ಉತ್ತಮ ಬೆಲೆ ಇದೆ ಹಾಗು ಬೇಡಿಕೆಯಿದೆ ಅದನ್ನು ವ್ಯವಸಾಯ ಮಾಡಿ ಉತ್ತಮ ಲಾಭ ಪಡೆಯಿರಿ ಅನ್ನೋದೇ ನಮ್ಮ ಅಭಿಲಾಷೆ ಎಲ್ಲ ರೈತರಿಗೂ ಶುಭವಾಗಲಿ ಧನ್ಯವಾದಗಳು
