ಸಾಧನೆ ಮಾಡಲು ಹಾಗೂ ದುಡ್ಡು ಸಂಪಾದನೆ ಮಾಡಲು ಯಾವತ್ತಿಗೂ ವಯಸ್ಸು ಅಡ್ಡಿ ಬರಲ್ಲ ಎನ್ನುವುದಕ್ಕೆ ಈ ಒಂದು ಹುಡುಗಿಯೇ ಉದಾಹರಣೆ. ಕೇವಲ ಇಪ್ಪತ್ತೊಂದು ವರ್ಷಕ್ಕೆ ಇಡೀ ಪ್ರಪಂಚ ತನ್ನ ಕಡೆ ತಿರುಗಿ ನೋಡುವ ಹಾಗೆ ಮಾಡಿದ್ದಾಳೆ ಈ ಹುಡುಗಿ. ಅಷ್ಟಕ್ಕೂ ಇವಳು ಹಣ ಸಂಪಾದನೆ ಮಾಡಿದ್ದಾದರೂ ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇಪ್ಪತ್ತೊಂದು ವರ್ಷದ ಈ ಹುಡುಗಿಯ ಹೆಸರು ಆಲೆಗ್ಸಾಂಡ್ರಾ ಆಂಡ್ರೇಸನ್. ನಾರ್ವೆ ದೇಶಕ್ಕೆ ಸೇರಿದ ಈ ಹುಡುಗಿ ಆ ದೇಶದ ಅತೀ ದೊಡ್ಡ ಶ್ರೀಮಂತ ಹುಡುಗಿ. ಸಾಮಾನ್ಯವಾಗಿ ಹದಿನೇಳು ವರ್ಷದ ಹುಡುಗಿ ಕಾಲೇಜ್ ಫ್ರೆಂಡ್ಸ್ ಅಂತ ಇರ್ತಾರೆ. ಆದರೆ ಆಲೆಗ್ಸಾಂಡ್ರಾ ಮಾಡಿದ್ದು ತನ್ನ ತಂದೆಯಿಂದ ತನಗೆ ಬಂದ ಸ್ವಲ್ಪ ಮಟ್ಟದ ಹನವನ್ನು ಉಪಯೋಗಿಸಿಕೊಂಡು ಅದನ್ನು ನೂರು ಪಟ್ಟು ಜಾಸ್ತಿ ಮಾಡುವುದೇ ತನ್ನ ಗುರಿಯಾಗಿಸಿಕೊಂಡಳು. ಖಾಲಿ ಇದ್ದ ಸಮಯದಲ್ಲಿ ಇದರ ಬಗ್ಗೆ ಕಾರ್ಡ ಅಧ್ಯಯನ ಮಾಡಿದ್ದ ಅಲೆಗ್ಸಾಂಡ್ರಾ ತಮ್ಮ ತಂದೆ ಕೊಟ್ಟ ಸ್ವಲ್ಪ ಮಟ್ಟದ ಹಣವನ್ನು ರಿಯಲ್ ಎಸ್ಟೇಟ್ ಮತ್ತು ಶೇರ್ ಮಾರ್ಕೆಟ್ ಗಳಲ್ಲಿ ಹಣವನ್ನು ಹೂಡಿ ಹಗಲು ರಾತ್ರಿ ಶ್ರಮಿಸಿದರು. ಕೊನೆಗೆ ಆಕೆಯ ಚಾಣಾಕ್ಷತನ ಮತ್ತು ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿತು. ಆಕೆ ಹೂಡಿಕೆ ಮಾಡಿದ ಎಲ್ಲಾ ಕಡೆಯಲ್ಲೂ ಹತ್ತು ಪಟ್ಟು ಲಾಭ ಗಳಿಸಿದ್ದಳು.

ಅಲೆಕ್ಸಾಂಡರ್ ಗೆ ಈಗ ಇರುವ ಒಟ್ಟು ಆಸ್ತಿಯ ಮೊತ್ತ ಬರೋಬ್ಬರಿ 8000 ಕೋಟಿ ಕೇವಲ 21 ವರ್ಷ ವಯಸ್ಸಿಗೆ ನಾರ್ವೆ ದೇಶದಲ್ಲಿ ಅತ್ಯಂತ ಶ್ರೀಮಂತ ಆಗಿ ಬೆಳೆದಿದ್ದಾಳೆ. ತನ್ನ 17 ವರ್ಷ ವಯಸ್ಸಿನಲ್ಲಿ ಬಿಸಿನೆಸ್ಸಲ್ಲಿ ತನ್ನನ್ನು ತೊಡಗಿಸಿಕೊಂಡ ಅಲೆಕ್ಸಾಂಡರ ತನ್ನ 19 ವರ್ಷ ವಯಸ್ಸಿಗೆ ಪ್ರಪಂಚದ ಅತಿ ಚಿಕ್ಕ ವಯಸ್ಸಿನ ಬಿಲೇನಿಯರ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. 8000 ಕೋಟಿ ಆಸ್ತಿ ಇದು ದೊಡ್ಡ ಶ್ರೀಮಂತ ಆಗಿದ್ದರೂ ಸಹ ಅಲೆಕ್ಸಾಂಡರ ಮಾತ್ರ ತುಂಬಾ ಸರಳವಾದ ವ್ಯಕ್ತಿ ಇದುವರೆಗೂ ಒಂದು ಕಾರನ್ನು ಸಹ ಕೊಂಡುಕೊಂಡಿಲ್ಲ. ಮನೆಯಲ್ಲಿರುವ ಹಳೆಯ ಕಾರನ್ನು ಉಪಯೋಗಿಸುತ್ತಿದ್ದಾರೆ. ಸಾಮಾನ್ಯ ಹುಡುಗಿಯಂತೆ ಇರುವ ಅಲೆಕ್ಸಾಂಡರ ಅವಳ ಬ್ಯಾಂಕ್ ಬ್ಯಾಲೆನ್ಸ್ ನೋಡಿದಾಗ ಸ್ನೇಹಿತರು ಒಂದು ಕ್ಷಣ ದಂಗಾಗಿ ಇದ್ದರಂತೆ. ತನಗೆ ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ಕೊಡುವ ಅಲೆಗ್ಸಾಂಡರ ತನಗೆ ಭಾರತ ದೇಶ ಅಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

By

Leave a Reply

Your email address will not be published. Required fields are marked *